ಕರ್ನಾಟಕ

karnataka

ಮೀನುಗಾರರ ಮೇಲೆ ಪಾಕ್ ಸಿಬ್ಬಂದಿ ಫೈರಿಂಗ್: ಓರ್ವ ಸಾವು, ಮತ್ತೋರ್ವನಿಗೆ ಗಾಯ

By

Published : Nov 7, 2021, 7:43 PM IST

Updated : Nov 7, 2021, 10:24 PM IST

ಜಲ್ಪಾರಿ ಎಂಬ ಬೋಟ್​ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ಸಿಬ್ಬಂದಿ ಗುಂಡು ಹಾರಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

fisherman killed allegedly in firing by Pakistan maritime security personnel
ಮೀನುಗಾರರರ ಮೇಲೆ ಪಾಕ್ ಸಿಬ್ಬಂದಿ ಫೈರಿಂಗ್: ಓರ್ವ ಸಾವು, ಮತ್ತೋರ್ವ ಗಾಯ

ದೇವಭೂಮಿ ದ್ವಾರಕಾ(ಗುಜರಾತ್):ಮಹಾರಾಷ್ಟ್ರ ಮೂಲದ ಮೀನುಗಾರನೊಬ್ಬನನ್ನು ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ (ಪಿಎಂಎಸ್​ಎ) ಸಿಬ್ಬಂದಿ ಗುಂಡಿಟ್ಟು ಕೊಂದಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆ ಸುಮಾರು 4 ಗಂಟೆಯ ವೇಳೆಗೆ ಅರಬ್ಬಿ ಸಮುದ್ರದ ಗುಜರಾತ್ ಕರಾವಳಿ ಸಮೀಪದಲ್ಲಿ ಜಲ್ಪಾರಿ ಎಂಬ ಬೋಟ್​ನಲ್ಲಿ ಮೀನುಗಾರಿಕೆ ಮಾಡುತ್ತಿರಬೇಕಾದರೆ ಪಾಕಿಸ್ತಾನ ಕಡಲ ಭದ್ರತಾ ಸಂಸ್ಥೆ ಸಿಬ್ಬಂದಿ ಗುಂಡು ಹಾರಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ. ಬೋಟ್​ನ ಮತ್ತೋರ್ವ ಸಿಬ್ಬಂದಿ ಗಾಯಗೊಂಡಿದ್ದಾನೆ ಎಂದು ದೇವಭೂಮಿ ದ್ವಾರಕಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಜೋಷಿ ಹೇಳಿದ್ದಾರೆ.

ಬೋಟ್​ನಲ್ಲಿ ಒಟ್ಟು ಏಳು ಮಂದಿ ಇದ್ದು, ಮೃತಪಟ್ಟ ಮೀನುಗಾರ ಶ್ರೀಧರ್ ರಮೇಶ್ ಚಮ್ರೆ (32) ಮೃತದೇಹವನ್ನು ಓಖಾ ಬಂದರಿಗೆ ಭಾನುವಾರ ತರಲಾಗಿದೆ. ಪೋರ್​ಬಂದರ್ ನವಿ ಬಂದರ್​ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಘಟನೆ ನಡೆದ ಸ್ಥಳ ಗುಜರಾತ್ ಕರಾವಳಿಯಿಂದ 12 ನಾಟಿಕಲ್ ಮೈಲುಗಳಷ್ಟು ದೂರವಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಶ್ರೀಧರ್ ಚಮ್ರೆ ಜಲ್ಪಾರಿ ಬೋಟ್​ನಲ್ಲಿದ್ದು, ಅಕ್ಟೋಬರ್ 25ರಂದು ಬೇರೆ ಮೀನುಗಾರರೊಂದಿಗೆ ಸಮುದ್ರಕ್ಕೆ ಇಳಿದಿದ್ದನು. ಏಳು ಮಂದಿಯಲ್ಲಿ ಐವರು ಗುಜರಾತ್​ನವರಾಗಿದ್ದು, ಇಬ್ಬರು ಮಹಾರಾಷ್ಟ್ರ ಮೂಲದವರೆಂದು ತಿಳಿದುಬಂದಿದೆ. ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಕ್ರಿಪ್ಟೋ ಕರೆನ್ಸಿಯಲ್ಲಿ ಲಾಭದ ಆಸೆ ತೋರಿಸಿ ವಂಚನೆ: ಬೆಂಗಳೂರಿನಲ್ಲಿ ಮೂವರ ಬಂಧನ

Last Updated : Nov 7, 2021, 10:24 PM IST

ABOUT THE AUTHOR

...view details