ಕರ್ನಾಟಕ

karnataka

ತಂದೆ ಮಗನಿಂದ ನಿರ್ಮಾಣವಾಯ್ತು ವಿಂಟೇಜ್​ ಕಾರ್​.. ಕೈಗೆಟುಕುವ ದರ ಕಂಡು ಜನ ಫಿದಾ!

By

Published : Dec 23, 2022, 7:42 AM IST

ರಾಜ್‌ಕೋಟ್‌ನಲ್ಲಿ ತಂದೆ-ಮಗ ಇಬ್ಬರು ಸೇರಿ 3 ಲಕ್ಷ ರೂ. ಮೌಲ್ಯದ ವಿಂಟೇಜ್ ಕಾರ್​ ನಿರ್ಮಿಸಿದ್ದಾರೆ. ಇದೀಗ ಮಾರುಕಟ್ಟೆಯಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.

ಎಲೆಕ್ಟ್ರಿಕ್ ವಿಂಟೇಜ್ ಕಾರು
ಎಲೆಕ್ಟ್ರಿಕ್ ವಿಂಟೇಜ್ ಕಾರು

ರಾಜ್​ಕೋಟ್​ (ಗುಜರಾತ್):​ ರಾಜ್‌ಕೋಟ್‌ನಲ್ಲಿ ತಂದೆ- ಮಗ ಇಬ್ಬರು ಸೇರಿ ಎಲೆಕ್ಟ್ರಿಕ್ ವಿಂಟೇಜ್ ಕಾರನ್ನು ನಿರ್ಮಿಸಿದ್ದಾರೆ. ಈ ಕಾರನ್ನು ನಿರ್ಮಿಸಲು ತಂದೆ-ಮಗ ಇಬ್ಬರೂ ಮೂರು ತಿಂಗಳು ಶ್ರಮವಹಿಸಿದ್ದಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಕಾರು ಲಭ್ಯವಿದ್ದು, ಇದರ ಬೆಲೆ ಕೇವಲ 3 ಲಕ್ಷ ವಾಗಿದೆ. ಹೀಗಾಗಿ ಇದು ಜನರನ್ನು ಆಕರ್ಷಿಸಿದೆ.

ಈ ಕುರಿತು ಮಾತನಾಡಿರುವ ವಿಂಟೇಜ್ ಇ ಕಾರು ತಯಾರಕ ಭಾವಿಕ್ ಚೌಹಾಣ್, ನನ್ನ ತಂದೆಗೆ ಬಾಲ್ಯದಿಂದಲೂ ಕಾರು ತಯಾರಿಸಬೇಕು ಎಂಬ ಕನಸಿತ್ತು. ಆದರೆ, ಹಣಕಾಸಿನ ಅಡಚಣೆಯಿಂದ ನಮಗೆ ಕಾರನ್ನು ನಿರ್ಮಿಸಲು ಸಾಧ್ಯವಾಗಲಿಲ್ಲ. ಈಗ ಆರ್ಥಿಕ ಸ್ಥಿತಿ ಸುಧಾರಿಸುತ್ತಿರುವುದರಿಂದ ನಾವು ಎಲೆಕ್ಟ್ರಿಕ್ ವಿಂಟೇಜ್ ಕಾರುಗಳನ್ನು ತಯಾರಿಸಿದ್ದೇವೆ. ಕಾರನ್ನು ತಯಾರಿಸಲು ಮೂರು ತಿಂಗಳು ಹಗಲಿರುಳು ದುಡಿದಿದ್ದೇವೆ. ಇದೀಗ ಕಾರಿನ ನಿರ್ಮಾಣ ಪೂರ್ಣಗೊಂಡಿದ್ದು, ಇದು ಎಲೆಕ್ಟ್ರಿಕ್ ಕಾರ್ ಆಗಿರುವುದರಿಂದ ಬೆಲೆ ಸಹ ಜನರಿಗೆ ಕೈಗೆಟುಕುವಂತೆ ಇರಿಸಲಾಗಿದೆ. ಹೀಗಾಗಿ ಇದು ಆಕರ್ಷಣೆಯ ಕೇಂದ್ರಬಿಂದುವಾಗಿದೆ ಎಂದಿದ್ದಾರೆ.

ವಿಂಟೇಜ್ ಕಾರಿನ ಆಕಾರ ನೀಡಲಾಗಿದೆ: ವಿಂಟೇಜ್ ಕಾರನ್ನು ತಯಾರಿಸಲು ರಾಯಲ್ ಎನ್​ಫೀಲ್ಡ್​ ಮತ್ತು ಮಾರುತಿ ಸುಜುಕಿಯ ಬಿಡಿ ಭಾಗಗಳನ್ನು ಬಳಸಲಾಗಿದೆ. ಇದರಿಂದಾಗಿ ಈ ಕಾರಿನ ನಿರ್ವಹಣೆಯನ್ನು ಸುಲಭವಾಗಿ ಮಾಡಬಹುದು. ಇದರೊಂದಿಗೆ ಕಾರಿಗೆ ವಿಂಟೇಜ್ ಕಾರಿನ ಆಕಾರ ನೀಡಲಾಗಿದೆ. ಇದರಿಂದಾಗಿ ಕಾರಿನ ಅಭಿಮಾನಿಗಳು ಅದರ ಆಕಾರವನ್ನು ತುಂಬಾ ಇಷ್ಟಪಡುತ್ತಿದ್ದಾರೆ. ಇಲ್ಲಿಯವರೆಗೆ ತಂದೆ-ಮಗ ಮೂರು ಕಾರುಗಳನ್ನು ನಿರ್ಮಿಸಿದ್ದಾರೆ. ಈ ಗ್ರಾಮದಲ್ಲಿ ಇನ್ನಷ್ಟು ಹೊಸ ಕಾರುಗಳನ್ನು ತಯಾರಿಸುವ ಕಾರ್ಯ ಆರಂಭವಾಗಿದೆ. ಈ ಕಾರನ್ನು ಖರೀದಿಸಿದವರಿಗೆ ಕಾರಿನಲ್ಲಿ ಏನಾದರೂ ಸಮಸ್ಯೆ ಉಂಟಾದಾಗ, ಅದನ್ನು ಮತ್ತೆ ಇಲ್ಲಿ ಸರಿಪಡಿಸಿ ಕೊಡಲಾಗುತ್ತದೆ ಎಂದಿದ್ದಾರೆ.

ಆರ್​ಟಿಓ ಪಾಸಿಂಗ್​ ಅಗತ್ಯವಿಲ್ಲ:ಈ ಕಾರಿನ ವೇಗ ಗಂಟೆಗೆ 45 ಕಿ ಮೀ ಮೀರುವುದಿಲ್ಲ. ಇದರಿಂದಾಗಿ ಈ ಕಾರಿಗೆ RTO ಪಾಸಿಂಗ್ ಅಗತ್ಯವಿಲ್ಲ. ಇದು ಮಧ್ಯಮ ಮತ್ತು ಸಾಮಾನ್ಯ ವರ್ಗದವರಿಗೂ ಸುಲಭವಾಗಿ ಲಭ್ಯವಿದೆ. ಈ ಕಾರು ನೋಡಲು ವಿಂಟೇಜ್ ಕಾರಿನಂತೆಯೇ ಇದ್ದರೂ, ಮದುವೆಯ ಸೀಸನ್‌ನಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಈ ಮಧ್ಯೆ ವಾಹನ ಪ್ರಿಯರು ಕೂಡ ಈ ಕಾರನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ.

ಓದಿ:ದೇಶದ ಅಗ್ಗದ ಎಲೆಕ್ಟ್ರಿಕ್​ ಕಾರು ಬಿಡುಗಡೆ.. ಒಮ್ಮೆ ಚಾರ್ಜ್​ ಮಾಡಿ 200 ಕಿಮೀ ದೂರ ಕ್ರಮಿಸಿ

ABOUT THE AUTHOR

...view details