ಕರ್ನಾಟಕ

karnataka

ಲಖೀಂಪುರ ಹಿಂಸಾಚಾರ: ಕೇಂದ್ರ ಸಚಿವರ ರಾಜೀನಾಮೆಗೆ ಆಗ್ರಹಿಸಿ ಇಂದು ರೈತರಿಂದ ರೈಲು ತಡೆ ಚಳವಳಿ

By

Published : Oct 18, 2021, 8:33 AM IST

Updated : Oct 18, 2021, 8:40 AM IST

ಉತ್ತರ ಪ್ರದೇಶದ ಲಖೀಂಪುರ ಖೇರಿ ಎಂಬಲ್ಲಿ ನಡೆದ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಇವರ ಪೈಕಿ ನಾಲ್ವರು ರೈತರಿದ್ದರು. ಎಸ್‌ಕೆಎಂ ಪ್ರಕಾರ, ಆಶಿಶ್ ಮಿಶ್ರಾ ರೈತರ ಮೇಲೆ ಗುಂಡು ಹಾರಿಸಿದರೆ, ಅವರ ಬೆಂಗಾವಲು ವಾಹನ ಜನರ ಮೇಲೆ ಹರಿದಿತ್ತು.

farmers-unions
ಲಖೀಂಪುರ ಹಿಂಸಾಚಾರ

ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಲವು ತಿಂಗಳುಗಳಿಂದ ನಿರಂತರ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ರೈತರು ಇದೀಗ ಇತ್ತೀಚೆಗೆ ನಡೆದ ಲಖೀಂಪುರ ಕೇರಿ ಪ್ರಕರಣದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸಿದ್ದಾರೆ.

ಲಖೀಂಪುರ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ರೈತರು ಸೇರಿದಂತೆ 8 ಮಂದಿ ಮೃತಪಟ್ಟಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ತೇಣಿ ಅವರ ರಾಜೀನಾಮೆಗೆ ಒತ್ತಾಯಿಸಿ ವಿವಿಧ ರೈತ ಸಂಘಟನೆಗಳು ಇಂದು ರೈಲು ರೊಕೊಗೆ ಇಳಿದಿವೆ.

ಇವತ್ತು ಸಂಯುಕ್ತ ಕಿಸಾನ್ ಮೋರ್ಚಾ (SKM) 6 ಗಂಟೆಗಳ ಕಾಲ ರಾಷ್ಟ್ರವ್ಯಾಪಿ ರೈಲು ರೊಕೊ ಚಳವಳಿಗೆ ಕರೆ ಕೊಟ್ಟಿದೆ. ಈ ಮೂಲಕ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇಣಿ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದುಹಾಕಲು ಒತ್ತಡತಂತ್ರವನ್ನು ತೀವ್ರಗೊಳಿಸುತ್ತಿದ್ದಾರೆ. ಉತ್ತರ ಪ್ರದೇಶದ ಲಖೀಂಪುರ ಪ್ರಕರಣದಲ್ಲಿ ಸಚಿವರ ಪುತ್ರನ ಮೇಲೆ ಗಂಭೀರ ಆರೋಪವಿದೆ.

ರೈಲ್ ರೊಕೊ ಹಿನ್ನೆಲೆಯಲ್ಲಿ ಭಾನುವಾರ ಪ್ರಕಟಣೆ ಹೊರಡಿಸಿದ ಸಂಯುಕ್ತ ಕಿಸಾನ್ ಮೋರ್ಚಾ, ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ತಕ್ಷಣ ತೆಗೆದು ಹಾಕಬೇಕು. ನಂತರ ಅವರನ್ನು ಬಂಧಿಸಿ ವಿಚಾರಣೆ ನಡೆಸಿ ಶಿಕ್ಷೆಗೆ ಗುರಿಪಡಿಸುವ ಮೂಲಕ ಲಖೀಂಪುರ ಖೇರಿ ಪ್ರಕರಣಕ್ಕೆ ನ್ಯಾಯ ಒದಗಿಸಬೇಕಿದೆ ಎಂದು ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ, ಇಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗಿನ ಆರು ಗಂಟೆಗಳ ಅವಧಿಯಲ್ಲಿ ರೈಲುಗಳನ್ನು ತಡೆದು ಪ್ರತಿಭಟಿಸುವಂತೆ ಕರೆ ಕೊಟ್ಟಿದೆ.

ಇದೇ ವೇಳೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡದಂತೆ, ಶಾಂತಿಯುತವಾಗಿ ಪ್ರತಿಭಟನೆ ಕೈಗೊಳ್ಳುವಂತೆ ಮನವಿ ಮಾಡಿದೆ. ಕೇಂದ್ರ ಸಚಿವ ಅಜಯ್ ಮಿಶ್ರಾ ತೇಣಿ ಅವರು ಹಿಂದೂಗಳು ಮತ್ತು ಸಿಖ್ಖರ ನಡುವೆ ಕೋಮು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಅಂದು ಅವರದ್ದೇ ವಾಹನ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಅಮಾಯಕ ಜನರ ಮೇಲೆ ಹರಿದಿತ್ತು. ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದರೂ ಪುತ್ರ ಮತ್ತು ಆತನ ಸಹಚರರನ್ನು ರಕ್ಷಿಸುವ ಕೆಲಸವನ್ನು ಸಚಿವರು ಮಾಡಿದ್ದರು ಎಂದು ಸಂಘಟನೆ ಗಂಭೀರ ಆರೋಪ ಮಾಡಿದೆ.

ಲಖೀಂಪುರ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ದಾರುಣವಾಗಿ ಮೃತಪಟ್ಟಿದ್ದರು. ಇವರ ಪೈಕಿ ನಾಲ್ವರು ರೈತರಿದ್ದರು. ಎಸ್‌ಕೆಎಂ ಪ್ರಕಾರ, ಅಶಿಶ್ ಮಿಶ್ರಾ ರೈತರ ಮೇಲೆ ಗುಂಡು ಹಾರಿಸಿದರೆ, ಅವರ ಬೆಂಗಾವಲು ವಾಹನ ಜನರ ಮೇಲೆ ಹರಿಯಿತು.

ಆದ್ರೆ ಈ ಆರೋಪವನ್ನು ಅಲ್ಲಗಳೆದಿದ್ದ ಸಚಿವರು, ಪುತ್ರ ಘಟನೆ ನಡೆದಾಗ ಅಲ್ಲಿ ಇರಲೇ ಇಲ್ಲ. ಆಶಿಶ್ ಅವರೂ ಕೂಡಾ ಇದೇ ರೀತಿ ತಮ್ಮ ವಿರುದ್ಧ ಆರೋಪಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ. ಇದಾದ ಬಳಿಕ ಆಶಿಶ್ ಮಿಶ್ರಾ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿದ್ದರು. ದೇಶವ್ಯಾಪಿ ಸಂಚಲನ ಸೃಷ್ಟಿಸಿದ ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ತನಿಖಾ ದಳ (SIT) ಅಕ್ಟೋಬರ್‌ 14 ರಂದು ಆಶಿಶ್ ಮಿಶ್ರಾ ಅವರನ್ನು ಜೈಲಿಗೆ ಕಳುಹಿಸಿತು.

ಇದನ್ನೂ ಓದಿ:ಮಳೆಗೆ ನಲುಗಿದ ಕೇರಳ, ಸಾವಿನ ಸಂಖ್ಯೆ 23ಕ್ಕೆ ಏರಿಕೆ.. ಮೋದಿ ನೆರವಿನ ಅಭಯ

Last Updated :Oct 18, 2021, 8:40 AM IST

ABOUT THE AUTHOR

...view details