ಕರ್ನಾಟಕ

karnataka

ಶನಿವಾರದ ಭವಿಷ್ಯ: ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ

By

Published : Jan 28, 2023, 5:50 AM IST

ಇಂದಿನ ರಾಶಿ ಭವಿಷ್ಯ ಹೀಗಿದೆ..

Etv bharat horoscope today
ಶನಿವಾರದ ಭವಿಷ್ಯ : ಈ ರಾಶಿಯವರಿಗೆ ಇಂದು ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ

ಮೇಷ: ನೀವು ಕಲ್ಪನಾ ಶಕ್ತಿ ಮತ್ತು ಉದ್ಯಮಶೀಲ ವ್ಯಕ್ತಿ. ಇಂದು ನೀವು ಯಶಸ್ಸಿನ ರುಚಿ ಕಾಣುತ್ತೀರಿ. ನೀವು ಮಹತ್ವಾಕಾಂಕ್ಷೆ ಹೊಂದಿರುತ್ತೀರಿ. ಆದರೆ ನೀವು ನಿರ್ವಹಿಸುವುದಕ್ಕಿಂತ ಹೆಚ್ಚು ಕೆಲಸ ತೆಗೆದುಕೊಳ್ಳದೇ ಇರುವುದು ಸೂಕ್ತ. ನಿಮ್ಮ ಸಾಮರ್ಥ್ಯಗಳ ಕುರಿತು ನೀವು ಸಕಾರಾತ್ಮಕವಾಗಿರುತ್ತೀರಿ. ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿರಿ ಮತ್ತು ದೇವರಲ್ಲಿ ವಿಶ್ವಾಸವಿರಿಸಿ.

ವೃಷಭ: ನಿಮ್ಮ ಒತ್ತಡದ ಜೀವನದಿಂದ ಬಿಡುವು ಪಡೆದು ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ನಿಮ್ಮ ಪ್ರೀತಿಪಾತ್ರರನ್ನು ಆಹ್ವಾನಿಸಿ ಅವರೊಂದಿಗೆ ಮಹತ್ತರ ಕಾಲ ಕಳೆಯಿರಿ. ಈ ದಿನ ಸಾಕಷ್ಟು ಮಸಾಲೆಯುಕ್ತ ತಿನಿಸು ತಿನ್ನುವುದು ನಿಮ್ಮ ಉದ್ದೇಶವಾಗಿರುತ್ತದೆ.

ಮಿಥುನ: ಯಾವುದೋ ಒಂದು ಕಾರಣಕ್ಕೆ ನಿಮ್ಮ ಮನಸ್ಸು ವಿಚಲಿತ ಮತ್ತು ಆತಂಕದಿಂದ ಕೂಡಿರುತ್ತದೆ. ನಿಮ್ಮ ಆತಂಕಗಳನ್ನು ವ್ಯಕ್ತಪಡಿಸಲು ನೀವು ಅಶಕ್ತರಾಗುತ್ತೀರಿ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಮೂಲಕ ನಿಮ್ಮ ಸಂಗಾತಿಯ ಪ್ರೀತಿಯನ್ನು ಗಳಿಸುವಲ್ಲಿ ಶಕ್ತರಾಗುತ್ತೀರಿ. ಹಿಂದಿನದು ಹೋಗಲಿ ಎಂದು ಬಿಟ್ಟು ವಿಶ್ವಾಸದಿಂದ ಮುಂದುವರೆಯಲು ಪ್ರಯತ್ನಿಸಿ.

ಕರ್ಕಾಟಕ:ನಿಮಗೆ ಅವಿಶ್ರಾಂತ ಮತ್ತು ಕಿರಿಕಿರಿಯ ಮನಸ್ಥಿತಿಯ ಸಾಧ್ಯತೆ ಇದೆ. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶಾಂತ ಮತ್ತು ಸಮಚಿತ್ತತೆಯಿಂದ ಇರಿ. ಹಾಗೆ ಮಾಡಿದಲ್ಲಿ ನೀವು ಸದಾ ಜೀವನದಲ್ಲಿ ಯಶಸ್ವಿಯಾಗುತ್ತೀರಿ. ನೀವು ಕೋಪಗೊಳ್ಳುತ್ತಿದ್ದರೆ ಪ್ರತಿಕೂಲತೆಯನ್ನು ನಿವಾರಿಸುವುದು ಕಷ್ಟ.

ಸಿಂಹ: ಇಂದು ಸಾಕಷ್ಟು ವಿಷಯಗಳಲ್ಲಿ ನೀವು ಇತರರ ಅಭಿಪ್ರಾಯ ಕೇಳುತ್ತೀರಿ. ಇತರರನ್ನು ನೀವು ತಾಳ್ಮೆಯಿಂದ ಆಲಿಸಬೇಕು ಮತ್ತು ಸಂವಹನದ ಸಮಯದಲ್ಲಿ ನೀವು ತುಟಿ ಬಿಚ್ಚದೇ ಇರಬೇಕು. ನಿಮ್ಮ ಆತ್ಮ ವಿಶ್ವಾಸ ಇಂದು ಏಟು ತಿನ್ನುತ್ತದೆ. ಆದ್ದರಿಂದ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದಿರಿ.

ಕನ್ಯಾ: ಇಂದು ನೀವು ಅತ್ಯಂತ ಉತ್ಸಾಹ ಮತ್ತು ಶಕ್ತಿಯುತವಾಗಿದ್ದೀರಿ. ನಿಮ್ಮ ದಕ್ಷತೆ ಮತ್ತು ಬುದ್ಧಿಮತ್ತೆ ನಿಮ್ಮನ್ನು ಶ್ರೇಷ್ಠ ಕಲಾವಿದನಾಗಿ ಪ್ರತ್ಯೇಕವಾಗಿ ನಿಲ್ಲಿಸುತ್ತದೆ. ನಿಮ್ಮ ಮಾತುಗಳನ್ನು ಕಾರ್ಯರೂಪಕ್ಕೆ ತಂದರೆ ಸೃಜನಶೀಲತೆ ಅಪಾರವಾಗಿ ಹರಿಯುತ್ತದೆ. ನೀವು ಹಾಡಿರಿ ಅಥವಾ ಕುಣಿಯಿರಿ. ಅದು ನಿಖರ ಮತ್ತು ಕರಾರುವಕ್ಕಾಗಿರಬೇಕು. ಪ್ರದರ್ಶನ ಕಲೆ ಅಥವಾ ಸೃಜನಶೀಲ ಬರವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುತ್ತೀರಿ.

ತುಲಾ: ಸಣ್ಣ ಸಮಸ್ಯೆಗಳು ಅಥವಾ ವಿಷಯಗಳ ಕುರಿತು ನೀವು ಒತ್ತಡ ತಂದುಕೊಳ್ಳದೇ ಇರುವುದು ಸೂಕ್ತ. ಆತಂಕ ಕಡಿಮೆ ಮಾಡಲು ಮತ್ತು ಮಾನಸಿಕ ಶಾಂತಿಯನ್ನು ಪಡೆಯಲು ನೀವು ಯೋಗ ಅಥವಾ ಧ್ಯಾನ ಮಾಡುವುದು ಸೂಕ್ತ. ಕೆಲಸದಲ್ಲಿ ಕೆಲ ವಿಷಯಗಳಲ್ಲಿ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಸಂಕೀರ್ಣ ವಿಷಯಗಳಲ್ಲಿ ಸಾಧ್ಯಾ ಸಾಧ್ಯತೆಗಳನ್ನು ಪರಿಶೀಲಿಸಿ ಮಾತ್ರ ನೀವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕು.

ವೃಶ್ಚಿಕ: ನೀವು ಇಂದು ಆಕಾಶಕ್ಕೆ ಏಣಿ ಹಾಕುವ ಮನಸ್ಥಿತಿಯಲ್ಲಿರುತ್ತೀರಿ. ನೀವು ಹಲವು ಆಲೋಚನೆಗಳು ಮತ್ತು ಹಳೆಯ ನೆನಪುಗಳ ಸುಳಿಯಲ್ಲಿ ಸಿಲುಕುತ್ತೀರಿ. ಆದರೆ, ಬಹಳ ಬೇಗನೆ ನೀವು ಒಮ್ಮೆ ಕಳೆದು ಹೋದ ಸಮಯ ನಂತರ ಮತ್ತೆ ಬಾರದು ಎಂದು ತಿಳಿಯುತ್ತೀರಿ. ಆದ್ದರಿಂದ ನೀವು ಮನಸ್ಸು ಬದಲಿಸಿ ನಿಮ್ಮ ಜೀವನಕ್ಕೆ ಇಂದಿನಿಂದಲೇ ಹೊಸ ಅಧ್ಯಾಯದ ಪ್ರಾರಂಭ ಮಾಡುತ್ತೀರಿ.

ಧನು: ಸಂಪೂರ್ಣ ಜಾಗರೂಕತೆಯ ದಿನವಾಗಿದೆ. ನಿಮ್ಮ ಹೃದಯ ಅದರ ಸಂಗಾತಿಯನ್ನು ಕಂಡುಕೊಳ್ಳುವ ದಿನವಾಗಿದ್ದು, ಪ್ರೀತಿಯಲ್ಲಿ ಬೀಳುವಂತೆ ಮಾಡುತ್ತದೆ. ನೀವು ಪ್ರಣಯದೇವತೆಯ ಮುಂದಿನ ಬಲಿಪಶು. ಆದಾಗ್ಯೂ, ನಿಮ್ಮ ಹೆಜ್ಜೆಗಳನ್ನು ಗಮನಿಸಿ, ಬಾಂಧವ್ಯದ ಪ್ರಾರಂಭಿಕ ಹಂತಗಳು ಅತ್ಯಂತ ಸೂಕ್ಷ್ಮವಾಗಿವೆ ಮತ್ತು ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ. ಅಲ್ಲದೆ, ನಿಮ್ಮ ಪ್ರತಿಷ್ಠೆಯನ್ನು ಕಾಪಾಡಿಕೊಳ್ಳಬೇಕಾದ ಸಮಯವಾಗಿದೆ.

ಮಕರ: ಇಂದು ನಿಮಗೆ ವಿಪರೀತ ಒತ್ತಡದ ಬಿಡುವಿಲ್ಲದ ದಿನವಾಗಿದೆ. ಅತಿಯಾದ ಉತ್ಸಾಹ ಬೇಡ ಮತ್ತು ಪ್ರತಿ ಕೆಲಸವನ್ನೂ ಅತ್ಯಂತ ಜಾಣ್ಮೆ ಮತ್ತು ವಿವೇಕದಿಂದ ಮಾಡಿರಿ. ಇದು ನಿಮಗೆ ಕಾರ್ಯದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ. ಕೂಲಂಕಷ ದೃಷ್ಟಿ, ಕುತೂಹಲ ಮತ್ತು ಸಂಘಟಿತವಾಗಿರುವುದು ಕೆಲಸ ಮಾಡುವಾಗ ತಪ್ಪುಗಳನ್ನು ಕಡಿಮೆ ಮಾಡುತ್ತದೆ.

ಕುಂಭ: ವಿಶ್ವದ ಎಲ್ಲ ಕಡೆಗಳಿಂದ ಏನೋ ಒಂದು ಸಕಾರಾತ್ಮಕತೆ ನಿಮ್ಮ ದಾರಿಯಲ್ಲಿದೆ. ಇಂದು ಇಡೀ ದಿನ ಧನಾತ್ಮಕ ಬೆಳಕಿನಲ್ಲಿದೆ. ನೀವು ನಿಮ್ಮ ಮಿತ್ರರು ಹಾಗೂ ಪ್ರೀತಿ ಪಾತ್ರರೊಂದಿಗೆ ದಿನವನ್ನು ಆನಂದಿಸುತ್ತೀರಿ.

ಮೀನ: ಕೆಲಸಕ್ಕೆ ಸಂಬಂಧಿಸಿದಂತೆ ನಿಮ್ಮ ಗ್ರಹಗಳು ಪರಿಪೂರ್ಣವಾಗಿ ಹೊಂದಿಕೊಂಡಿವೆ. ಕೆಲಸದಲ್ಲಿ ಇಂದು ನೀವು ಬಯಸಿದ ಫಲಿತಾಂಶವನ್ನು ಸ್ವಾಗತಿಸುತ್ತೀರಿ. ಆದ್ದರಿಂದ ಸಂತೋಷದಲ್ಲಿರುತ್ತೀರಿ. ಶೈಕ್ಷಣಿಕ ಉದ್ದೇಶಗಳಿಗೆ ಮನೆಯಿಂದ ಹೊರಗಡೆ ಹೋಗಲು ಬಯಸುವವರು ಪ್ರಗತಿಯನ್ನು ಕಾಣುತ್ತಾರೆ ಮತ್ತು ಅವರ ಕನಸಿನತ್ತ ಮುನ್ನಡೆಯುತ್ತಾರೆ.

ABOUT THE AUTHOR

...view details