ಕರ್ನಾಟಕ

karnataka

ಶೋಪಿಯಾನ್​ನಲ್ಲಿ ಉಗ್ರನ ಹೊಡೆದುರುಳಿಸಿದ ಯೋಧರು: ಮುಂದುವರಿದ ಎನ್​​​​ಕೌಂಟರ್​​

By

Published : Sep 12, 2022, 3:20 PM IST

ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಉಗ್ರವಾದಿಗಳೊಂದಿಗೆ ಸೇನಾಪಡೆಗಳ ಗುಂಡಿನ ಕಾಳಗ ನಡೆಯುತ್ತಿದೆ. ಈ ಕಾಳಗದಲ್ಲಿ ಓರ್ವ ಉಗ್ರವಾದಿಯನ್ನು ಭದ್ರತಾ ಪಡೆಗಳ ಯೋಧರು ಹತ್ಯೆ ಮಾಡಿದ್ದಾರೆ.

ಶೋಪಿಯಾನ್​ನಲ್ಲಿ ಉಗ್ರನ ಹೊಡೆದುರುಳಿಸಿದ ಯೋಧರು
One militant killed in encounter

ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಹೈಫ್ ಶರ್ಮಲ್ ಪ್ರದೇಶದಲ್ಲಿ ಸೇನಾ ಸಿಬ್ಬಂದಿ ಮತ್ತು ಉಗ್ರರ ನಡುವಿನ ಎನ್‌ಕೌಂಟರ್‌ನಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ.

ಶೋಪಿಯಾನ್‌ನ ಹೈಫ್ ಶಿರ್ಮಲ್ ಪ್ರದೇಶದಲ್ಲಿ ಎನ್‌ಕೌಂಟರ್ ಪ್ರಾರಂಭವಾಗಿದೆ. ಪೊಲೀಸರು ಮತ್ತು ಭದ್ರತಾ ಪಡೆಗಳ ಯೋಧರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ನಿರೀಕ್ಷಿಸಲಾಗುತ್ತಿದೆ ಎಂದು ಕಾಶ್ಮೀರ ವಲಯ ಪೊಲೀಸರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ಮಧ್ಯದ ಎನ್ಕೌಂಟರ್ ಮುಂದುವರೆದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

ಇದನ್ನೂ ಓದಿ: ಆಸ್ತಿ ಮುಟ್ಟುಗೋಲು: ಭಯೋತ್ಪಾದಕರ ವಿರುದ್ಧ ಕಾಶ್ಮೀರ ಪೊಲೀಸರ ಗದಾಪ್ರಹಾರ

ABOUT THE AUTHOR

...view details