ಕರ್ನಾಟಕ

karnataka

ಒಂದೇ ಕುಟುಂಬದ ಮೂವರಿಗೆ ವಿದ್ಯುತ್ ಶಾಕ್: ತಂದೆ, 2 ವರ್ಷದ ಮಗು ಸಾವು

By

Published : Dec 27, 2021, 7:42 PM IST

Electric shock to a family: ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ಕಬ್ಬಿಣದ ಸರಳುಗಳ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ತೆಗೆಯುವ ವೇಳೆ ವಿದ್ಯುತ್​ ಸ್ಪರ್ಶಿಸಿ ಅಪ್ಪ-ಮಗಳು ಸಾವನ್ನಪ್ಪಿದ್ದಾರೆ.

Electric shock to a family
ಒಂದೇ ಕುಟುಂಬದ ಮೂವರಿಗೆ ವಿದ್ಯುತ್ ಶಾಕ್

ಸಂಗಾರೆಡ್ಡಿ (ತೆಲಂಗಾಣ):ಒಂದೇ ಕುಟುಂಬದ ಮೂವರಿಗೆ ವಿದ್ಯುತ್ ಶಾಕ್ ತಗುಲಿದ್ದು, ಅಪ್ಪ-ಮಗಳು ಮೃತಪಟ್ಟಿರುವ ಘಟನೆ ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ. ಇತ್ತ ಅಮ್ಮನ ಸ್ಥಿತಿ ಗಂಭೀರವಾಗಿದೆ.

ಸಂಗಾರೆಡ್ಡಿ ಜಿಲ್ಲೆಯ ಇಸ್ನಾಪುರದಲ್ಲಿ ವಾಸವಾಗಿರುವ ವಾಸುಮಲ್ಲಿಕ್ ಹಾಗೂ ಅವರ ಕುಟುಂಬ ಮೂಲತಃ ಒಡಿಶಾ ರಾಜ್ಯದವರು. ಮನೆಯಲ್ಲಿ ಕಬ್ಬಿಣದ ಸರಳುಗಳ ಮೇಲೆ ಒಣಗಲು ಹಾಕಿದ್ದ ಬಟ್ಟೆಗಳನ್ನು ವಾಸುಮಲ್ಲಿಕ್ ತೆಗೆಯುವ ವೇಳೆ ಒಬ್ಬರಿಂದೊಬ್ಬರಿಗೆ ವಿದ್ಯುತ್​ ಸ್ಪರ್ಶಿಸಿ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದ ನಾಲ್ವರ ಮೇಲೆ ಹರಿದ ಕಾರು.. ಮಹಿಳೆ ಸಾವು, ಮೂವರ ಸ್ಥಿತಿ ಗಂಭೀರ

ವಾಸುಮಲ್ಲಿಕ್ ಹಾಗೂ ಅವರ ಜೊತೆಯಲ್ಲಿದ್ದ ಎರಡು ವರ್ಷದ ಮಗಳು ಸ್ಥಳದಲ್ಲೇ ಸಾವನ್ನಪ್ಪಿದ್ದು, ಅವರ ಪತ್ನಿ ರೀನಾ ಮಲ್ಲಿಕ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾಹಿತಿ ಪಡೆದ ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

TAGGED:

ABOUT THE AUTHOR

...view details