ಕರ್ನಾಟಕ

karnataka

ದೆಹಲಿಯಲ್ಲಿ ಪ್ರಧಾನಿ ಮೋದಿ - ಗೃಹ ಸಚಿವ ಅಮಿತ್​ ಶಾ ಭೇಟಿ ಮಾಡಿದ ಸಿಎಂ ಏಕನಾಥ್​ ಶಿಂಧೆ ಕುಟುಂಬ

By

Published : Jul 22, 2023, 8:44 PM IST

PM Narendra Modi: ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರನ್ನು ಕುಟುಂಬದ ಜೊತೆಗೆ ಭೇಟಿಯಾಗಿರುವ ಬಗ್ಗೆ ಸಿಎಂ ಏಕನಾಥ್​ ಶಿಂಧೆ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

Eknath Shinde family met Modi and Amit Shah
ಮೋದಿ ಹಾಗೂ ಅಮಿತ್​ ಶಾ ಭೇಟಿಯಾದ ಏಕನಾಥ್​ ಶಿಂಧೆ ಕುಟುಂಬ

ನವದೆಹಲಿ: ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು ಒಂದೇ ದಿನ ತಮ್ಮ ಕುಟುಂಬ ಸಮೇತರಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರನ್ನು ಅವರನ್ನು ಭೇಟಿಯಾಗಿದ್ದಾರೆ. ಏಕನಾಥ್ ಶಿಂಧೆ ಅವರ ತಂದೆ, ಪತ್ನಿ, ಪುತ್ರ ಸಂಸದ ಡಾ. ಶ್ರೀಕಾಂತ್ ಶಿಂಧೆ, ಸೊಸೆ, ಮೊಮ್ಮಗ ಜೊತೆಗಿದ್ದರು. ಈ ವೇಳೆ, ಏಕನಾಥ್ ಶಿಂಧ ಅವರು ರಾಜ್ಯದ ವಿವಿಧ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾಧಕ - ಬಾಧಕಗಳ ಕುರಿತು ಚರ್ಚಿಸಿದ್ದಾರೆ.

ಅಮಿತ್​ ಶಾ ಜೊತೆ ಏಕನಾಥ್​ ಶಿಂಧೆ ಕುಟುಂಬ

ಭೇಟಿ ಮಾಡಿರುವುದು ಹಾಗೂ ಭೇಟಿಯ ವೇಳೆ ತೆಗೆದಿರುವ ಫೋಟೋಗಳನ್ನು ಸಿಎಂ ಏಕನಾಥ್​ ಶಿಂಧೆ ಹಾಗೂ ಅವರ ಮಗ ಸಂಸದ ಶ್ರೀಕಾಂತರ್​ ಏಕನಾಥ್​ ಶಿಂಧೆ ಅವರು ತಮ್ಮ ಟ್ವಿಟರ್​ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಎಂ ಏಕನಾಥ್ ಶಿಂಧೆ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಈ ಸಂದರ್ಭದಲ್ಲಿ ಇರ್ಶಲವಾಡಿ ದುರಂತ - ಪರಿಹಾರ ಕಾಮಗಾರಿ ಕುರಿತು ಚರ್ಚಿಸಲಾಯಿತು ಎಂದು ಮುಖ್ಯಮಂತ್ರಿ ಶಿಂಧೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ರಾಜ್ಯದಲ್ಲಿ ಮಳೆ ಪ್ರಮಾಣ, ರೈತರ ಸಮಸ್ಯೆಗೆ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ. ಧಾರಾವಿ ಯೋಜನೆಯನ್ನು ಪ್ರಧಾನಿ ನೆನಪಿಸಿಕೊಂಡರು. ಯೋಜನೆ ಶೀಘ್ರ ಪೂರ್ಣಗೊಳ್ಳಬೇಕು ಎಂಬ ಆಶಯವನ್ನು ಪ್ರಧಾನಿ ವ್ಯಕ್ತಪಡಿಸಿದ್ದಾರೆ ಎಂದು ಮುಖ್ಯಮಂತ್ರಿ ಶಿಂಧೆ ಹೇಳಿದರು.

ಮೋದಿ ಜೊತೆ ಏಕನಾಥ್​ ಶಿಂಧೆ ಮಗ, ಸೊಸೆ ಹಾಗೂ ಮೊಮ್ಮಗ

ಈ ಸಂದರ್ಭದಲ್ಲಿ ಮಹಾರಾಷ್ಟ್ರದ ಜನರ ಬದುಕು ಹಸನುಗೊಳಿಸಲು ಅನುಷ್ಠಾನಗೊಳಿಸಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಾಯಿತು. ಇರ್ಶಲವಾಡಿ ದುರಂತದ ಬಗ್ಗೆ ಸಂತಾಪ ವ್ಯಕ್ತಪಡಿಸಿದ ಪ್ರಧಾನಿ, ಈ ಬಿಕ್ಕಟ್ಟಿನಲ್ಲಿ ಕೇಂದ್ರ ಸರ್ಕಾರ ನಿಮ್ಮೊಂದಿಗಿದೆ ಎಂದು ಹೇಳಿದ್ದಾರೆ ಎಂದು ಏಕನಾಥ್ ಶಿಂಧೆ ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಜೊತೆ ಏಕನಾಥ್​ ಶಿಂಧೆ ಅವರ ತಂದೆ

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಶಿಂಧೆ, "ನನ್ನ ಕುಟುಂಬ ಮತ್ತು ನಾನು ಪ್ರಧಾನಿ ಮೋದಿಯನ್ನು ಭೇಟಿ ಮಾಡಿದೆವು. ಅವರು ನಮಗೆ ಸಾಕಷ್ಟು ಸಮಯ ನೀಡಿದ್ದಾರೆ ಅದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಇದೆಲ್ಲದರ ನಡುವೆ, ನಾವು ಮಳೆ ಪರಿಸ್ಥಿತಿ, ರಾಯಗಡ ಘಟನೆ, ರಾಜ್ಯದಲ್ಲಿ ನಡೆಯುತ್ತಿರುವ ಯೋಜನೆಗಳು ಮತ್ತು ಮುಂಬೈನ ಪುನರಾಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದೆವು. ನಾವು ಗಂಭೀರ ಚರ್ಚೆ ನಡೆಸಿದ್ದೇವೆ. ನಾವು ಜನರಿಗೆ ಮನೆ ಒದಗಿಸಲು ಆದ್ಯತೆ ನೀಡಿದ್ದೇವೆ' ಎಂದು ಹೇಳಿದರು.

ಪ್ರಧಾನಿ ಮೋದಿಯನ್ನು ಭೇಟಿಯಾದ ಬಳಿಕ ಶಿಂಧೆ ಕುಟುಂಬ ಗೃಹ ಸಚಿವ ಅಮಿತ್​ ಶಾ ಅವರನ್ನು ದೆಹಲಿಯ ಅವರ ನಿವಾಸದಲ್ಲಿ ಭೇಟಿಯಾಗಿದೆ. ಈ ಬಗ್ಗೆಯೂ ಟ್ವೀಟ್​ ಮಾಡಿರುವ ಏಕನಾಥ್​ ಶಿಂಧೆ ರಾಜ್ಯದ ವಿವಿಧ ಸಮಸ್ಯೆಗಳು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಸಾಧಕ-ಬಾಧಕಗಳ ಕುರಿತು ಚರ್ಚಿಸಿದ್ದೇವೆ. ಮಹಾರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ಕೇಂದ್ರ ಸರಕಾರ ಸದಾ ಬೆಂಬಲ ನೀಡಲಿದೆ ಎಂದು ಈ ಸಂದರ್ಭದಲ್ಲಿ ಅಮಿತ್​ ಶಾ ಭರವಸೆ ನೀಡಿದರು ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ:ಎನ್‌ಸಿಪಿ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಮಹಾ ಸಿಎಂ: ಡಿಸಿಎಂ ಅಜಿತ್ ಪವಾರ್‌ಗೆ ಸಿಕ್ತು ಹಣಕಾಸು ಖಾತೆ!

ABOUT THE AUTHOR

...view details