ಕರ್ನಾಟಕ

karnataka

ಅಕ್ರಮ ಗಣಿಗಾರಿಕೆ ಆರೋಪ: ಪಂಜಾಬ್ ಸಿಎಂ ಸೋದರಳಿಯನ ನಿವಾಸದ ಮೇಲೆ ಇಡಿ ದಾಳಿ

By

Published : Jan 18, 2022, 11:41 AM IST

Updated : Jan 18, 2022, 12:38 PM IST

ಅಕ್ರಮ ಮರಳು ಗಣಿಗಾರಿಕೆ ಕಂಪನಿಗಳ ವಿರುದ್ಧ ಅಕ್ರಮ ಹಣ ವರ್ಗಾವಣೆ ತನಿಖೆ ಭಾಗವಾಗಿ ಜಾರಿ ನಿರ್ದೇಶನಾಲಯವು ಪಂಜಾಬ್‌ನ ಹಲವು ಸ್ಥಳಗಳಲ್ಲಿ ಮಂಗಳವಾರ ದಾಳಿ ನಡೆಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ(ಪಂಜಾಬ್): ಅಕ್ರಮ ಮರಳು ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ಬೆಳಗ್ಗೆ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿ ನಿವಾಸದ ಮೇಲೆ ದಾಳಿ ನಡೆಸಿದೆ.

ಮೂಲಗಳ ಪ್ರಕಾರ, ಮೊಹಾಲಿ ಸೇರಿದಂತೆ ಗಡಿ ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿರುವ ಕಂಪನಿಗಳ ವಿರುದ್ಧ ಹಣ ವರ್ಗಾವಣೆ ತನಿಖೆಯ ಭಾಗವಾಗಿ ತನಿಖಾ ಸಂಸ್ಥೆ ಪಂಜಾಬ್‌ನ ಮೊಹಾಲಿ ಸೇರಿದಂತೆ 10-12 ಸ್ಥಳಗಳಲ್ಲಿ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರ ಗಡಿಯಲ್ಲಿ ಬಿಗಿ ಭದ್ರತೆ: ಗಲಾಟೆ ಮಾಡಿ ಕರ್ನಾಟಕ ಪ್ರವೇಶ ಮಾಡುತ್ತಿರುವ ಪ್ರಯಾಣಿಕರು

ಈ ನಡುವೆ ಸಿಎಂ ಸಂಬಂಧಿ ಮೇಲೆ ಇಡಿ ದಾಳಿ ನಡೆಸಿರುವುದನ್ನು ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಖಂಡಿಸಿದ್ದಾರೆ. ಇದು ದುಃಖಕರ ಸಂಗತಿ ಎಂದಿದ್ದಾರೆ. ಇಂದು ಅವರು ಪಂಜಾಬ್​ಮ ಮೋಹಾಲಿ ಭೇಟಿ ನೀಡಿದ್ದು, ಆಪ್​ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡಿದರು.

Last Updated : Jan 18, 2022, 12:38 PM IST

ABOUT THE AUTHOR

...view details