ಕರ್ನಾಟಕ

karnataka

ಜೂನ್‌ ತ್ರೈಮಾಸಿಕದಲ್ಲಿ ಎರಡಂಕಿ ದಾಖಲಿಸಿದ ಭಾರತದ ಆರ್ಥಿಕ ವೃದ್ಧಿ ದರ!

By

Published : Aug 31, 2022, 7:37 PM IST

ಜೂನ್(ಏಪ್ರಿಲ್‌-ಜೂನ್) ತ್ರೈಮಾಸಿಕದಲ್ಲಿ ಭಾರತದ ಜಿಡಿಪಿಯು ವೇಗವಾಗಿ ಏರಿಕೆಯಾಗಿದ್ದು, ಶೇ.4.1ರಷ್ಟು ಜಿಗಿತವಾಗಿ ಒಟ್ಟಾರೆ ಶೇ.13.5ಕ್ಕೆ ಏರಿದೆ.

economy-grows-13.5-in-june-quarter
ಒಂದೇ ವರ್ಷದಲ್ಲೇ ವೇಗವಾಗಿ ಏರಿಕೆ ಕಂಡ ಭಾರತದ ಜಿಡಿಪಿ: ಶೇ.13.5ಕ್ಕೆ ಹೆಚ್ಚಳ

ನವದೆಹಲಿ:ಪ್ರಸಕ್ತ ಹಣಕಾಸು ವರ್ಷದ (2022-23) ಮೊದಲ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯು ಶೇಕಡಾ 13.5ಕ್ಕೆ ಏರಿದೆ. ಈ ಮೂಲಕ 2021-22ರ ಕೊನೆಯ ತ್ರೈಮಾಸಿಕಕ್ಕಿಂತ ಶೇ.4.1ರಷ್ಟು ಭಾರಿ ಜಿಗಿತವಾಗಿದೆ. ಅಲ್ಲದೇ, ಒಂದೇ ವರ್ಷದಲ್ಲಿ ಇದು ಮೊದಲ ಎರಡಂಕಿಯ ಜಿಡಿಪಿ ಬೆಳವಣಿಗೆಯಾಗಿದೆ. 2021-22ರ ಮೊದಲ ತ್ರೈಮಾಸಿಕದಲ್ಲಿ ಶೇ.20.1ರಷ್ಟು ದಾಖಲಾಗಿತ್ತು.

2022-23ರ ಮೊದಲ ತ್ರೈಮಾಸಿಕದಲ್ಲಿ ಸ್ಥಿರ ಬೆಲೆಗಳಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) 36.85 ಲಕ್ಷ ಕೋಟಿ ರೂಪಾಯಿಗಳ ಮಟ್ಟವನ್ನು ತಲುಪಿದೆ. ಈ 2021-22ರ ಮೊದಲ ತ್ರೈಮಾಸಿಕದಲ್ಲಿ 32.46 ಲಕ್ಷ ಕೋಟಿ ರೂಪಾಯಿ ಆಗಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ (NSO) ಮಾಹಿತಿ ಬಿಡುಗಡೆ ಮಾಡಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಶೇ.16.2ರಷ್ಟು ಜಿಡಿಪಿ ನಿರೀಕ್ಷೆ ಹೊಂದಿತ್ತು. ಇದೇ ವೇಳೆ ರೇಟಿಂಗ್ ಏಜೆನ್ಸಿಯಾದ ಐಸಿಆರ್​ಎ ಶೇ.13ರಷ್ಟು ಬೆಳವಣಿಗೆಯನ್ನು ಊಹೆ ಮಾಡಿತ್ತು. ಆದಾಗ್ಯೂ, ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇ.13.5ರಷ್ಟು ಬೆಳವಣಿಗೆ ಕಂಡಿದೆ.

2021-22ರ ಮೊದಲ ತ್ರೈಮಾಸಿಕದಲ್ಲಿ ಶೇ.20.1ರಷ್ಟು ಬೆಳವಣಿಗೆ ದಾಖಲಿಸಿದ ನಂತರದಲ್ಲಿ ಬೇಗನೆ ಕುಸಿದಿತ್ತು. ಅದೇ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.8.4ರಷ್ಟು ಇಳಿಕೆಯಾಗಿತ್ತು. ಅಲ್ಲದೇ, ಮೂರನೇ ತ್ರೈಮಾಸಿಕದಲ್ಲಿ ಮತ್ತಷ್ಟು ಕುಸಿತವಾಗಿ ಶೇ.5.4ರಷ್ಟು ಕಡಿಮೆಯಾಗಿತ್ತು. ಇದಲ್ಲದೇ, ನಾಲ್ಕನೇ ತ್ರೈಮಾಸಿಕದಲ್ಲೂ ಶೇ.4.1ರಷ್ಟು ಜಿಡಿಪಿ ಇಳಿದಿತ್ತು. ಆದರೆ, ಇದೀಗ ವರ್ಷದಲ್ಲೇ ವೇಗವಾಗಿ ಜಿಡಿಪಿ ಬೆಳವಣಿಗೆ ಏರಿಕೆಯಾಗಿದೆ. ಒಟ್ಟಾರೆ ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕತೆಯ ಬೆಳವಣಿಗೆಯನ್ನು ಶೇ.7.2ರಷ್ಟನ್ನು ಆರ್‌ಬಿಐ ಅಂದಾಜಿಸಿದೆ.

ಇದನ್ನೂ ಓದಿ:ಗ್ರಾಹಕರಿಗೆ ಶಾಕ್​ ನೀಡಿದ ಗಣಪತಿ.. ಗಗನಕ್ಕೇರಿದ ಆಭರಣಗಳ ಬೆಲೆ

ABOUT THE AUTHOR

...view details