ಕರ್ನಾಟಕ

karnataka

ಆಡಿಷನ್​ಗಳಲ್ಲಿ ಅಪ್ರಾಪ್ತೆಯರಿಗೆ ಬೆತ್ತಲಾಗಲು ಹೇಳಿದ್ದ ಬಿಗ್​ಬಾಸ್​ ಸ್ಪರ್ಧಿ ಸಾಜಿದ್​ ಖಾನ್: ಸ್ವಾತಿ ಮಲಿವಾಲ್

By

Published : Oct 12, 2022, 8:03 PM IST

ನಿರ್ದೇಶಕ ಸಾಜಿದ್ ಖಾನ್ ತಮ್ಮ ಹೌಸ್‌ಫುಲ್ 4 ಮತ್ತು ಹಮ್‌ಶಕಲ್ಸ್ ಸಿನಿಮಾಗಳಲ್ಲಿ ಪಾತ್ರವನ್ನು ಪಡೆಯಲು ಆಡಿಷನ್‌ಗಳ ಸಮಯದಲ್ಲಿ ಕೆಲವು ಅಪ್ರಾಪ್ತೆಯರನ್ನು ಬೆತ್ತಲೆಯಾಗುವಂತೆ ಹೇಳಿದ್ದರು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ತಿಳಿಸಿದ್ದಾರೆ.

delhi-commission-for-women-chairperson-swati-maliwal-threatened-with-rape
ಆಡಿಷನ್​ಗಳಲ್ಲಿ ಅಪ್ರಾಪ್ತೆಯರಿಗೆ ಬೆತ್ತಲಾಗಲು ಹೇಳಿದ್ದ ಬಿಗ್​ಬಾಸ್​ ಸ್ಪರ್ಧಿ ಸಜಿದ್​ ಖಾನ್: ಸ್ವಾತಿ ಮಲಿವಾಲ್

ನವದೆಹಲಿ: ನಿರ್ದೇಶಕ, ಬಿಗ್​ಬಾಸ್​ ಸ್ಪರ್ಧಿ ಸಾಜಿದ್​ ಖಾನ್​ ತಮ್ಮ ಚಲನಚಿತ್ರಗಳ ಅವಕಾಶ ನೀಡಲು ಅಪ್ರಾಪ್ತೆಯರಿಗೆ ಆಡಿಷನ್​ಗಳಲ್ಲಿ ಬೆತ್ತಲಾಗುವಂತೆ ಹೇಳಿದ್ದರು ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.

ಹಿಂದಿಯ ಬಿಗ್​ ಬಾಸ್‌ನಿಂದ ಸಾಜಿದ್ ಖಾನ್ ಅವರನ್ನು ಕೈಬಿಡುವಂತೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರಿಗೆ ಅಕ್ಟೋಬರ್ 10ರಂದು ಸ್ವಾತಿ ಮಲಿವಾಲ್ ಪತ್ರ ಬರೆದು ಒತ್ತಾಯಿಸಿದ್ದರು.

ಸಾಜಿದ್ ಖಾನ್ ವಿರುದ್ಧ ಈ ದೂರು ನೀಡಿದಾಗಿನಿಂದಲೂ ಇನ್‌ಸ್ಟಾಗ್ರಾಮ್‌ನಲ್ಲಿ ನನಗೆ ಅತ್ಯಾಚಾರದ ಬೆದರಿಕೆ ಹಾಕಲಾಗುತ್ತಿದೆ ಎಂದು ಸ್ವಾತಿ ಮಲಿವಾಲ್ ಹೇಳಿದ್ದಾರೆ. ಅಲ್ಲದೇ, ಈ ಬಗ್ಗೆ ನಾನು ದೆಹಲಿ ಪೊಲೀಸರಿಗೆ ದೂರು ನೀಡಿದ್ದೇನೆ. ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿ ಇದರ ಹಿಂದೆ ಇರುವವರನ್ನು ಬಂಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸ್ವಾತಿ ಮಲಿವಾಲ್, ಕೂಡಲೇ ಸಾಜಿದ್ ಖಾನ್ ಅವರನ್ನು ಶೋದಿಂದ ತೆಗೆದುಹಾಕುವಂತೆ ಮತ್ತು ಬಿಗ್ ಬಾಸ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಎಲ್ಲ ದೂರುಗಳ ತನಿಖೆ ನಡೆಸುವಂತೆ ನಾನು ಸಚಿವ ಅನುರಾಗ್ ಠಾಕೂರ್ ಅವರಿಗೆ ದೂರು ಸಲ್ಲಿಸಿದ್ದೇನೆ. ನನ್ನ ದೂರಿನ ಕುರಿತಾಗಿ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾನು ಈ ವಿಚಾರದ ಬಗ್ಗೆ ಧ್ವನಿ ಎತ್ತಿದ ಮೇಲೆ ಅತ್ಯಾಚಾರ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಅಲ್ಲದೇ, ಮೀಟೂ ಅಭಿಯಾನದಲ್ಲಿ ನಿರ್ದೇಶಕ ಮತ್ತು ಬಿಗ್​ಬಾಸ್ ಸ್ಪರ್ಧಿ ಸಾಜಿದ್ ಖಾನ್ ವಿರುದ್ಧ ಹತ್ತು ಮಹಿಳೆಯರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದರು. ಸಾಜಿದ್ ಖಾನ್ ತಮ್ಮ ಹೌಸ್‌ಫುಲ್ 4 ಮತ್ತು ಹಮ್‌ಶಕಲ್ಸ್ ಸಿನಿಮಾಗಳಲ್ಲಿ ಪಾತ್ರವನ್ನು ಪಡೆಯಲು ಆಡಿಷನ್‌ಗಳ ಸಮಯದಲ್ಲಿ ಕೆಲವು ಅಪ್ರಾಪ್ತೆಯರನ್ನು ಬೆತ್ತಲೆಯಾಗುವಂತೆ ಹೇಳಿದ್ದರು ಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಮಹಿಳಾ ಆಯೋಗದ ಅಧ್ಯಕ್ಷೆಗೆ ರೇಪ್ ಬೆದರಿಕೆ: ಸಾಜಿದ್​ರನ್ನು ವಿರೋಧಿಸಿದ್ದಕ್ಕೆ ಕೃತ್ಯ

ABOUT THE AUTHOR

...view details