ಕರ್ನಾಟಕ

karnataka

ಮಡಕೆ ನೀರು ಕುಡಿದಿದ್ದಕ್ಕೆ ಶಿಕ್ಷಕನಿಂದ ಥಳಿತಕ್ಕೊಳಗಾದ ಬಾಲಕ ಸಾವು

By

Published : Aug 14, 2022, 10:49 AM IST

ಜಾತಿ ಪಿಡುಗಿಗೆ ಹೋಯ್ತು 3ನೇ ತರಗತಿಯ ಬಾಲಕನ ಜೀವ. ಮಡಕೆ ನೀರು ಕುಡಿದಿದ್ದಕ್ಕಾಗಿ ಶಿಕ್ಷಕ ವಿದ್ಯಾರ್ಥಿಯನ್ನು ಥಳಿಸಿದ್ದು ಕಣ್ಣು ಕಿವಿಗೆ ಗಂಭೀರ ಗಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ.

dalit student death after teacher beaten
ಮಡಕೆ ನೀರು ಕುಡಿದಿದ್ದಕ್ಕೆ ದಲಿತ ವಿದ್ಯಾರ್ಥಿ ಥಳಿಸಿದ ಶಿಕ್ಷಕ

ಜಾಲೋರ್(ರಾಜಸ್ಥಾನ):ಮಡಕೆಯಲ್ಲಿದ್ದ ನೀರು ಕುಡಿದ ಎಂಬ ಕಾರಣಕ್ಕಾಗಿ 3 ನೇ ತರಗತಿಯ ದಲಿತ ವಿದ್ಯಾರ್ಥಿಯನ್ನು ಶಿಕ್ಷಕ ಥಳಿಸಿದ್ದು, ತೀವ್ರ ಗಾಯಗೊಂಡ ಬಾಲಕ ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಜುಲೈ 20ರಂದು ಈ ಘಟನೆ ನಡೆದಿದೆ.

ಸುರಾನ ನಿವಾಸಿಯಾದ ಬಾಲಕ ಇಂದ್ರಕುಮಾರ್ ಸರ್ಕಾರಿ ಶಾಲೆಯಲ್ಲಿ 3 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಇಂದ್ರಕುಮಾರ್ ದಾಹವಾಗಿ ಶಾಲೆಯಲ್ಲಿದ್ದ ಮಡಕೆಯ ನೀರನ್ನು ಕುಡಿದಿದ್ದಾನೆ. ಇದನ್ನು ಕಂಡ ಶಿಕ್ಷಕ ಮಡಕೆ ಮುಟ್ಟಿದ್ದಕ್ಕಾಗಿ ಥಳಿಸಿದ್ದಾನೆ. ಕಪಾಳಕ್ಕೆ ಬಲವಾಗಿ ಹೊಡೆದ ಕಾರಣ ಕಿವಿ ಮತ್ತು ಕಣ್ಣಿಗೆ ತೀವ್ರ ಗಾಯಗಳಾಗಿತ್ತು.

ಥಳಿತದಿಂದ ಬಲ ಕಿವಿ ಮತ್ತು ಕಣ್ಣಿನ ಒಳಭಾಗಕ್ಕೆ ಹಾನಿಯುಂಟಾಗಿದ್ದು, ನೋವಿನಿಂದ ಬಾಲಕ ತಂದೆಗೆ ವಿಷಯ ತಿಳಿಸಿದ್ದಾನೆ. ಆರಂಭದಲ್ಲಿ ಚಿಕ್ಕ ನೋವು ಎಂದು ಮಾತ್ರೆ ಕೊಡಿಸಿದ್ದಾರೆ. ಆದರೆ, ಗಾಯ ಬಲವಾಗಿ ಬಾಲಕ ಇಂದ್ರಕುಮಾರ್​ ದಿನವೂ ನರಳುತ್ತಿದ್ದ. ಇದರಿಂದ ಪೋಷಕರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇದಾದ ಬಳಿಕ ಅತನನ್ನು ಅಹಮದಾಬಾದ್​ನ ಸರ್ಕಾರಿ ಆಸ್ಪತ್ರೆಗೆ ಶನಿವಾರ ದಾಖಲಿಸಿದರೂ ಚಿಕಿತ್ಸೆ ಫಲಿಸಲಿಲ್ಲ. ಆರೋಪಿ ವಿರುದ್ಧ ಕೊಲೆ ಮತ್ತು ಎಸ್‌ಸಿ ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತ್ವರಿತ ತನಿಖೆಗಾಗಿ ಅಧಿಕಾರಿಯನ್ನು ನಿಯೋಜಿಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಜಾಲತಾಣದಲ್ಲಿ ತೀವ್ರ ಖಂಡನೆ:ಘಟನೆ ಬೆಳಕಿಗೆ ಬರುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ದೇಶ 75 ನೇ ಸ್ವಾತಂತ್ರ್ಯದ ಅಮೃತೋತ್ಸವ ಆಚರಿಸುತ್ತಿರುವ ಹೊತ್ತಿನಲ್ಲಿ ಇನ್ನೂ ಜಾತಿ ತಾರತಮ್ಯ ನಡೆಯುತ್ತಿರುವುದು ದುರದೃಷ್ಟಕರ. ತಪ್ಪಿತಸ್ಥ ಶಿಕ್ಷಕನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಕಾರು ಅಪಘಾತದಲ್ಲಿ ಮಹಾರಾಷ್ಟ್ರ ಮಾಜಿ ಸಚಿವ ವಿನಾಯಕ್ ಮೇಟೆ ನಿಧನ

ABOUT THE AUTHOR

...view details