ಕರ್ನಾಟಕ

karnataka

ಕೇವಲ 14 ತಿಂಗಳಲ್ಲಿ ಚಹಾ ತಿಂಡಿಗಾಗಿ 30 ಲಕ್ಷ ರೂ. ಖರ್ಚು ಮಾಡಿದ ಆಪ್​ ಸರ್ಕಾರ!

By

Published : Jun 20, 2023, 10:24 AM IST

ಚಹಾ ಮತ್ತು ತಿಂಡಿಗಾಗಿ ಆಪ್​ ಸರ್ಕಾರ ಖರ್ಚು ಮಾಡಿರುವ ಬಗ್ಗೆ ಆರ್​ಟಿಐಗೆ ಮಾಹಿತಿ ನೀಡಿದೆ.

ಆಪ್ ಸರ್ಕಾರದ ಚಹಾ ತಿಂಡಿ ಖರ್ಚು
ಆಪ್ ಸರ್ಕಾರದ ಚಹಾ ತಿಂಡಿ ಖರ್ಚು

ಬಠಿಂಡಾ:ಪಂಜಾಬ್​ನ ಭಗವಂತ್​ ಮಾನ್​ ನೇತೃತ್ವದ ಆಪ್​ ಸರ್ಕಾರ 14 ತಿಂಗಳಲ್ಲಿ ಚಹಾ ಮತ್ತು ತಿಂಡಿಗಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿರುವುದು ಭಾರಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. ಆರ್‌ಟಿಐ ಕಾರ್ಯಕರ್ತ ರಾಜನ್‌ದೀಪ್ ಸಿಂಗ್ ಅವರು ಆಪ್​ ಸರ್ಕಾರ ಚೊಚ್ಚಲ ಅಧಿಕಾರಾವಧಿಯಲ್ಲಿ ಈ ವರೆಗೂ ಚಹಾ ಮತ್ತು ತಿಂಡಿಗಳಿಗೆ ವ್ಯಯಿಸಿರುವ ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದರು. ಅದರಂತೆ ಈ ವರೆಗೂ ಮಾಡಿರುವ ಖರ್ಚಿನ ಬಗ್ಗೆ ಆಪ್​ ಆರ್​ಟಿಐಗೆ ಲೆಕ್ಕಾಚಾರ ನೀಡಿದೆ.

ಆರ್​ಟಿಐ ಕಾರ್ಯಕರ್ತನಿಗೆ ನೀಡಿದ ಉತ್ತರದಲ್ಲಿ, ಪಂಜಾಬ್ ಸರ್ಕಾರವು ಬರೋಬ್ಬರಿ 30 ಲಕ್ಷ ರೂಪಾಯಿ ವ್ಯಯಿಸಿರುವ ಬಗ್ಗೆ ಒಟ್ಟು 180 ಬಿಲ್‌ಗಳನ್ನು ಲಗತ್ತಿಸಿ ಮಾಹಿತಿ ನೀಡಿದೆ. ಆಡಳಿತಾರೂಢ ಎಎಪಿ ಸರ್ಕಾರದಲ್ಲಿ ಚಹಾ ಮತ್ತು ತಿಂಡಿಗಳ ಸರಾಸರಿ ವೆಚ್ಚ ಸುಮಾರು 2.5 ಲಕ್ಷ ರೂಪಾಯಿಗಳು ಎಂದು ಸಿಂಗ್ ಹೇಳಿದ್ದಾರೆ. ಜುಲೈ 1 2022 ರಿಂದ ಜುಲೈ 31 2022 ರವರೆಗೆ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಎಎಪಿ ಸರ್ಕಾರದ ಸಚಿವರು ಚಂಡೀಗಢ ನಗರದಲ್ಲಿ ಚಹಾ ಮತ್ತು ತಿಂಡಿಗಳಿಗಾಗಿ 30 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ ಎಂದು ಸಿಂಗ್ ಬಹಿರಂಗ ಪಡಿಸಿದ್ದಾರೆ.

ಅಲ್ಲದೇ, 9 ಜುಲೈ 2022 ರಂದು ವಿಧಾನಸಭಾ ಸ್ಪೀಕರ್ ಕುಲತಾರ್ ಸಿಂಗ್ ಸಂಧವನ್ ಅವರು ಶಾಸಕರೊಂದಿಗೆ ನಡೆಸಿದ ಸಭೆಯಲ್ಲಿ, ಚಹಾ ಮತ್ತು ತಿಂಡಿಗಳಿಗೆ 1.20 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಇದೀಗ ಕೇವಲ 14 ತಿಂಗಳಲ್ಲಿ ಮುಖ್ಯಮಂತ್ರಿಗಳ ಕಚೇರಿ ಚಹಾ ಮತ್ತು ತಿಂಡಿಗಾಗಿ 30 ಲಕ್ಷಹಣವನ್ನ ಖರ್ಚು ಮಾಡಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಆರ್‌ಟಿಐ ಅಡಿಯಲ್ಲಿ ಸ್ವೀಕರಿಸಿದ ಮಾಹಿತಿಯಲ್ಲಿ, ಮಾರ್ಚ್ 2022 ರ ಟೀ-ಬ್ರೇಕ್‌ಫಾಸ್ಟ್ ಬಿಲ್ 3.38 ಲಕ್ಷ, ಮಾರ್ಚ್ ನಂತರ 2022ರ ಏಪ್ರಿಲ್​ನಲ್ಲಿ 2 ಲಕ್ಷ 73 ಸಾವಿರದ 788, ಮೇ ತಿಂಗಳಿನ ಬಿಲ್​ 3 ಲಕ್ಷ 55 ಸಾವಿರದ 795, ಜೂನ್ ನಲ್ಲಿ 3 ಲಕ್ಷ 25 ಸಾವಿರದ 248, ಜುಲೈನಲ್ಲಿ 2 ಲಕ್ಷ 58 ಸಾವಿರದ 347, ಆಗಸ್ಟ್ ನಲ್ಲಿ 2 ಲಕ್ಷ 33 ಸಾವಿರದ 305, ಸೆಪ್ಟೆಂಬರ್ , ಅಕ್ಟೋಬರ್ ನಲ್ಲಿ 2 ಲಕ್ಷ 82 ಸಾವಿರದ 347 1 ಲಕ್ಷ 64 ಸಾವಿರದ 573, ನವೆಂಬರ್ 1 ಲಕ್ಷ 39 ಸಾವಿರದ 630, ಡಿಸೆಂಬರ್ 1 ಲಕ್ಷ 54 ಸಾವಿರದ 594 ಖರ್ಚು ಮಾಡಲಾಗಿದೆ. 2023ರ ಜನವರಿಯಲ್ಲಿ ಚಹಾಕ್ಕೆ 1 ಲಕ್ಷ 56 ಸಾವಿರದ 720, ಫೆಬ್ರವರಿಯಲ್ಲಿ 1 ಲಕ್ಷ 62 ಸಾವಿರದ 183, ಮಾರ್ಚ್‌ನಲ್ಲಿ 1 ಲಕ್ಷದ 73 ಸಾವಿರದ 208 ಮತ್ತು ಏಪ್ರಿಲ್‌ನಲ್ಲಿ 1 ಲಕ್ಷದ 24 ಸಾವಿರದ 451 ಖರ್ಚು ಮಾಡಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ.

ಇದನ್ನೂ ಓದಿ:PM Modi US Visit: ಅಮೆರಿಕಕ್ಕೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ.. ನಿರ್ಗಮನಕ್ಕೆ ಮುನ್ನ ಹೇಳಿದ್ದೇನು?

ABOUT THE AUTHOR

...view details