ಕರ್ನಾಟಕ

karnataka

ಕ್ರಿಪ್ಟೋಕರೆನ್ಸಿ ಸೇರಿ ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕ​ ಪರಿಚಯ; ನಾಳೆ ಮಹತ್ವದ ಸಂಪುಟ ಸಭೆ

By

Published : Nov 23, 2021, 8:55 PM IST

ಜಗತ್ತಿನಾದ್ಯಂತ ನಿಬ್ಬೆರಗು ಸೃಷ್ಟಿ ಮಾಡಿರುವ ಕ್ರಿಪ್ಟೋಕರೆನ್ಸಿ ಬಗ್ಗೆ ಇನ್ನಿಲ್ಲದ ಚರ್ಚೆ ನಡೆಯುತ್ತಿದ್ದು, ಇದರ ನಿಯಂತ್ರಣ ಹಾಗೂ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಈಗಾಗಲೇ ಅನೇಕ ಸುತ್ತಿನ ಮಾತುಕತೆಗಳು ನಡೆದಿವೆ. ಇದೀಗ ಚಳಿಗಾಲದ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿದಂತೆ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.

Cryptocurrency Bill
Cryptocurrency Bill

ನವದೆಹಲಿ:ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಗೊಳ್ಳಲು ಕೇವಲ ವಾರಗಳ ಕಾಲ ಬಾಕಿ ಉಳಿದಿದೆ. ಈ ವೇಳೆ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಕ್ರಿಪ್ಟೋಕರೆನ್ಸಿ ಸೇರಿದಂತೆ 26 ವಿಧೇಯಕ ಪರಿಚಯ ಮಾಡುವ ಸಾಧ್ಯತೆ ಇದೆ.

ಚಳಿಗಾಲದ ಅಧಿವೇಶನದಲ್ಲಿ 26 ವಿಧೇಯಕ ಮಂಡನೆಯಾಗಲಿದ್ದು ಲೋಕಸಭೆ ವೆಬ್​ಸೈಟ್​ ಪ್ರಕಾರ, ನವೆಂಬರ್​ 29ರಿಂದ ಆರಂಭಗೊಳ್ಳಲಿರುವ ಅಧಿವೇಶನದಲ್ಲಿ ಕ್ರಿಪ್ಟೋ ಸೇರಿ ಇತರೆ 25 ಮಸೂದೆಗಳು ಪರಿಚಯವಾಗಲಿವೆ.

ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ, ಕೇಂದ್ರ ಸಂಸದೀಯ ಸಮಿತಿ ಹಾಗೂ ಆರ್​ಬಿಐ ಗವರ್ನರ್ ನೇತೃತ್ವದಲ್ಲಿ ಅನೇಕ ಸುತ್ತಿನ ಸಭೆಗಳು ನಡೆದಿದ್ದು, ಈ ವೇಳೆ ಕ್ರಿಪ್ಟೋ ನಿಯಂತ್ರಣ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಚಳಿಗಾಲದ ಅಧಿವೇಶನದಲ್ಲಿ ಕ್ರಿಪ್ಟೋಕರೆನ್ಸಿ ವಿಧೇಯಕ ಪರಿಚಯ ಮಾಡಲು ಮುಂದಾಗಿದೆ.

ಇದನ್ನೂ ಓದಿ:ಕೆಲ ದಿನಗಳಲ್ಲೇ ಪೆಟ್ರೋಲ್​, ಡೀಸೆಲ್​ ಮತ್ತಷ್ಟು ಅಗ್ಗ: ಕೇಂದ್ರದ ಮಹತ್ವದ ನಿರ್ಧಾರಕ್ಕೆ ಕಾರಣ ಇಲ್ಲಿದೆ!

ದೇಶದಲ್ಲಿ ಕ್ರಿಪ್ಟೋ ಕರೆನ್ಸಿ ನಿಲ್ಲಿಸುವುದು ಅಸಾಧ್ಯ. ಆದರೆ ಅದರ ನಿಯಂತ್ರಣಕ್ಕೆ ಕೆಲವೊಂದಿಷ್ಟು ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂಬ ಮಾತು ಕೇಳಿ ಬಂದಿರುವ ಕಾರಣ ಇದೀಗ ಹೊಸದೊಂದು ಕಾಯ್ದೆ ಜಾರಿಗೆ ಬರಲಿದೆ.

ನಾಳೆ ಮಹತ್ವದ ಸಚಿವ ಸಂಪುಟ ಸಭೆ

ಸಂಸತ್ ಅಧಿವೇಶನ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ನಾಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಈ ವೇಳೆ ಕ್ರಿಪ್ಟೋಕರೆನ್ಸಿ ಮಸೂದೆ ಪರಿಚಯದ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಜೊತೆಗೆ, ಈಗಾಗಲೇ ರದ್ದುಗೊಂಡಿರುವ ಕೃಷಿ ಕಾಯ್ದೆ ರದ್ದತಿ ಮಸೂದೆ ಕೂಡ ಮಂಡನೆಯ ಬಗೆಗೂ ಚರ್ಚೆಯಾಗಲಿದೆ.

ಅಧಿವೇಶನದ ವೇಳೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​​ ಕೃಷಿ ಕಾಯ್ದೆ ರದ್ದತಿ ಮಸೂದೆ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​ ಕ್ರಿಪ್ಟೋಕರೆನ್ಸಿ ಮಸೂದೆ​​ ಮಂಡನೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ABOUT THE AUTHOR

...view details