ಕರ್ನಾಟಕ

karnataka

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 40 ಸಾವಿರ ಕೋವಿಡ್‌ ಕೇಸ್‌ ಪತ್ತೆ; 585 ಮಂದಿ ಸಾವು

By

Published : Aug 13, 2021, 11:26 AM IST

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ವರದಿಯಾದ ಕೋವಿಡ್‌ ಪ್ರಕರಗಳ ಮಾಹಿತಿ ಇಲ್ಲಿದೆ.

covid-19
covid-19

ನವದೆಹಲಿ: ಕಳೆದೊಂದು ದಿನದಲ್ಲಿ ಭಾರತದಲ್ಲಿ 40,120 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಒಂದು ದಿನದಲ್ಲಿ 42,295 ಮಂದಿ ಚೇತರಿಕೆ ಕಂಡಿದ್ದು, 585 ಮಂದಿ ಸಾವನ್ನಪ್ಪಿದ್ದಾರೆ.

ಭಾರತದ ಪ್ರಸ್ತುತ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 3,21,17,826ಕ್ಕೆ ಏರಿಕೆಯಾಗಿದೆ. ಈವರೆಗೆ 3,13,02,345 ಮಂದಿ ಸೋಂಕಿನಿಂದ ಚೇತರಿಕೆ ಕಂಡಿದ್ದಾರೆ. 4,30,254 ಮಂದಿ ಸೋಂಕಿನ ಕಾರಣದಿಂದಾಗಿ ಮೃತಪಟ್ಟಿದ್ದಾರೆ.

ದೇಶದಲ್ಲಿ ಸದ್ಯಕ್ಕೆ 3,85,227 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದುವರೆಗೆ 52,95,82,956 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ 24 ಗಂಟೆಯಲ್ಲಿ ಸುಮಾರು 57,31,574 ಮಂದಿಗೆ ಲಸಿಕೆ ನೀಡಲಾಗಿದೆ.

ಈವರೆಗೆ 48 ಕೋಟಿ ಮಂದಿಗೆ ಟೆಸ್ಟ್​​

ದೇಶದಲ್ಲಿ ಆಗಸ್ಟ್ 12ರವರೆಗೆ 48,94,70,799 ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ಆಗಸ್ಟ್ 12ರಂದು ಒಂದೇ ದಿನ ಸುಮಾರು 19 ಲಕ್ಷ ಮಂದಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ ಎಂದು ಐಸಿಎಂಆರ್- ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.

ಈವರೆಗೆ 52 ಕೋಟಿ ಮಂದಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುವಾರ ಮಾಹಿತಿ ನೀಡಿತ್ತು.

ABOUT THE AUTHOR

...view details