ಕರ್ನಾಟಕ

karnataka

Travel Update: ವಿಮಾನಸೇವೆಗಳ ನಿಯಮ ಸಡಿಲಿಸಿದ ದುಬೈ: ಭಾರತೀಯ ಪ್ರಯಾಣಿಕರಿಗೆ ಸಮಸ್ಯೆ?

By

Published : Jun 20, 2021, 8:18 AM IST

Updated : Jun 20, 2021, 8:49 AM IST

ದುಬೈಗೆ ಹೊರಟ ನಂತರವೂ ಮತ್ತೊಂದು ಆರ್​ಟಿ-ಪಿಸಿಆರ್ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಪರೀಕ್ಷೆ ವರದಿ ಬರುವವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಅಲ್ಲಿನ ಸರ್ಕಾರ ಆದೇಶಿಸಿದೆ.

COVID-19: Dubai eases travel restrictions from certain countries including India
ವಿಮಾನಸೇವೆಗಳ ನಿಯಮ ಸಡಿಸಲಿದ ದುಬೈ: ಭಾರತ ಪ್ರಯಾಣಿಕರಿಗೆ ಸಮಸ್ಯೆ..?

ದುಬೈ: ಕೋವಿಡ್ ಅನ್​ಲಾಕ್(Covid Unlock) ಪ್ರಕ್ರಿಯೆಗಳನ್ನು ದುಬೈನಲ್ಲಿ ಪ್ರಾರಂಭಿಸಲಾಗಿದೆ. ಭಾರತ ಸೇರಿದಂತೆ ಕೆಲವು ದೇಶಗಳ ವಿಮಾನ ಸೇವೆಗೆ ಅನುಮತಿಸಲಾಗಿದೆ.

ದುಬೈ ಅನುಮೋದಿಸಿದ ಕೋವಿಡ್ ಲಸಿಕೆಯ ಎರಡು ಡೋಸ್ ಪಡೆದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ದೇಶದೊಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಗಲ್ಫ್​ ನ್ಯೂಸ್ ವರದಿ ಮಾಡಿದ್ದು, ದುಬೈ ಸರ್ಕಾರ ರಚಿಸಿದ್ದ ಶೇಖ್ ಮನ್ಸೂರ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ನೇತೃತ್ವದ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣೆಯ ಸುಪ್ರೀಂ ಸಮಿತಿಯ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ 23ರಿಂದ ಈ ನಿಯಮ ಜಾರಿ ಬರಲಿದೆ. ಭಾರತ, ದಕ್ಷಿಣ ಆಫ್ರಿಕಾ ಮತ್ತುನೈಜೀರಿಯಾಗೆ ನಿರ್ಬಂಧಗಳು ಅನ್ವಯಿಸಲಿವೆ.

ಭಾರತದ ಪ್ರಯಾಣಿಕರಿಗೆ ಸಮಸ್ಯೆ?

ಸದ್ಯಕ್ಕೆ ವಾಸ್ತವ್ಯದ ವೀಸಾ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ದುಬೈಗೆ ಪ್ರಯಾಣಿಸಲು ಅನುಮತಿ ನೀಡಲಾಗುತ್ತಿದೆ. ಚೀನಾದ ಸಿನೋಫಾರ್ಮ್​, ಬಯೋಎನ್​ಟೆಕ್​ ಫೈಜರ್, ರಷ್ಯಾದ ಸ್ಪುಟ್ನಿಕ್ ವಿ ಮತ್ತು ಆಕ್ಸ್​ಫರ್ಡ್​ನ ಆಸ್ಟ್ರಾಜೆನೆಕಾ ಲಸಿಕೆಗಳನ್ನು ಎರಡು ಡೋಸ್ ಪಡೆದಿದ್ದರೆ ಮಾತ್ರ ಅವರಿಗೆ ದುಬೈಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತದೆ. ಇದು ಮಾತ್ರವಲ್ಲದೇ ದುಬೈಗೆ ಹೊರಡುವ ನಾಲ್ಕು ಗಂಟೆಗಳ ಮೀರದ ಕೋವಿಡ್ ರ್‍ಯಾಪಿಡ್​​ ಆ್ಯಂಟಿಜನ್​​ ಟೆಸ್ಟ್​​ ನೆಗೆಟಿವ್ ವರದಿ ಪ್ರಯಾಣಿಕರಿಗೆ ಕಡ್ಡಾಯವಾಗಿದೆ.

ಇದನ್ನೂ ಓದಿ;ವೈದ್ಯಕೀಯ ಸಿಬ್ಬಂದಿ ವಿರುದ್ಧ ಹಲ್ಲೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: ಕೇಂದ್ರ ಸೂಚನೆ

ದುಬೈಗೆ ಹೊರಟ ನಂತರವೂ ಮತ್ತೊಂದು ಆರ್​ಟಿ-ಪಿಸಿಆರ್ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಬೇಕು. ಸೋಂಕು ಪರೀಕ್ಷೆ ವರದಿ ಬರುವವರೆಗೆ ಕ್ವಾರಂಟೈನನಲ್ಲಿ ಇರಬೇಕು ಎಂದು ಆದೇಶಿಸಲಾಗಿದೆ. ಇನ್ನು ಭಾರತದಲ್ಲಿ ನೀಡಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗೆ ದುಬೈನಲ್ಲಿ ಅನುಮೋದನೆ ನೀಡದಿರುವುದು ದುಬೈಗೆ ತೆರಳುವ ಭಾರತೀಯರಿಗೆ ಸಮಸ್ಯೆಯಾಗಲಿದೆ.

ಏಪ್ರಿಲ್ ತಿಂಗಳಿನ ಕೊನೆಯಲ್ಲಿ ಭಾರತದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಇಲ್ಲಿಂದ ಹೊರಡುವ ಪ್ರಯಾಣಿಕರಿಗೆ ದುಬೈ ನಿರ್ಬಂಧ ವಿಧಿಸಿತ್ತು.

Last Updated :Jun 20, 2021, 8:49 AM IST

ABOUT THE AUTHOR

...view details