ಕರ್ನಾಟಕ

karnataka

ಮಗಳ ಶಿಕ್ಷಣಕ್ಕಾಗಿ 'ಕಿಡ್ನಿ ಮಾರಾಟ'ಕ್ಕೆ ಅನುಮತಿ ನೀಡಿ: ಜಿಲ್ಲಾಧಿಕಾರಿಗೆ ಪತ್ರ ಬರೆದ ದಂಪತಿ!

By

Published : Apr 14, 2021, 5:36 PM IST

Updated : Apr 14, 2021, 7:09 PM IST

ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳ ವಿದ್ಯಾಭ್ಯಾಸದ ವೆಚ್ಚ ಭರಿಸಲು ತಮ್ಮ ಕಿಡ್ನಿ ಮಾರಾಟ ಮಾಡಲು ಅವಕಾಶ ನೀಡುವಂತೆ ದಂಪತಿ ಇದೀಗ ಜಿಲ್ಲಾಧಿಕಾರಿಗೆ ಪತ್ರ ಬರೆದಿದೆ.

Couple request permit to sell their kidneys
Couple request permit to sell their kidneys

ಹಿಂದೂಪುರ(ಆಂಧ್ರಪ್ರದೇಶ):ಆರ್ಥಿಕ ತೊಂದರೆಯಿಂದ ಬಳಲುತ್ತಿರುವ ದಂಪತಿಗಳು ಮಗಳ ಶಿಕ್ಷಣಕ್ಕಾಗಿ ತಮ್ಮ ಕಿಡ್ನಿ ಮಾರಲು ಸಜ್ಜಾಗಿದ್ದು, ಅದಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳ ಬಳಿ ಮನವಿ ಮಾಡಿದ್ದಾರೆ.

ಮಗಳ ಶಿಕ್ಷಣಕ್ಕಾಗಿ 'ಕಿಡ್ನಿ ಮಾರಾಟ'ಕ್ಕೆ ಜಿಲ್ಲಾಧಿಕಾರಿಗೆ ಪತ್ರ ಬರೆದ ದಂಪತಿ

ಆಂಧ್ರಪ್ರದೇಶದ ಹಿಂದೂಪುರ್​ದಲ್ಲಿ ವಾಸವಾಗಿರುವ ಮಕ್ಬುಲ್​ ಜಾನ್​ ಮತ್ತು ಅಯೂಬ್​ ಖಾನ್​ ದಂಪತಿ ಈ ಮನವಿ ಮಾಡಿಕೊಂಡಿದ್ದಾರೆ. ಇವರ ಮಗಳು ರುಬಿಯಾ ಫಿಲಿಪೈನ್ಸ್​​ನ ದಾವೋಸ್​ ನಗರದಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡ್ತಿದ್ದಾನೆ. ದಂಪತಿ ತಮ್ಮ ಮಗಳನ್ನು ಆಂಧ್ರಪ್ರದೇಶದ ಓವರ್​​ಸೀಸ್​ ಸ್ಕಾಲರ್​ಶಿಪ್​ ಅಡಿ ವಿದೇಶಿಕ್ಕೆ ಅಧ್ಯಯನಕ್ಕಾಗಿ ಕಳುಹಿಸಿದ್ದರು. ಈ ಸ್ಕಾಲರಶಿಪ್​ ಮೊತ್ತ 10 ಲಕ್ಷ ರೂ ಆಗಿತ್ತು.

ಇದನ್ನೂ ಓದಿ: ಚಿತಾಗಾರದಲ್ಲಿ ರಾಶಿ ರಾಶಿ ಕೋವಿಡ್​ ಮೃತರ ಶವ.. ಮಧ್ಯಪ್ರದೇಶದಲ್ಲಿ ಅಂತ್ಯ ಸಂಸ್ಕಾರಕ್ಕೂ ಇಲ್ಲ ಜಾಗ!

ಆದರೆ, ಈ ಯೋಜನೆ ಪ್ರಸ್ತುತ ಸರ್ಕಾರದಿಂದ ಜಾರಿಗೊಳ್ಳದ ಕಾರಣ ಕುಟುಂಬಕ್ಕೆ ಮಗನ ವಿದ್ಯಾಭ್ಯಾಸದ ಹಣ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಮಗನ ವ್ಯಾಸಂಗಕ್ಕಾಗಿ ಮನೆ ಮಾರಿ ಹಣ ನೀಡಲು ಕುಟುಂಬಸ್ಥರು ನಿರ್ಧರಿಸಿದ್ದರು. ಆದರೆ, ಅದು ಸಾಧ್ಯವಾಗದ ಕಾರಣ ಇದೀಗ ಕಿಡ್ನಿ ಮಾರಾಟ ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ.

ತಮ್ಮ ಮಗಳ ಭವಿಷ್ಯದ ಬಗ್ಗೆ ಆತಂಕಗೊಂಡು ಸಹಾಯಕ್ಕಾಗಿ ಈಗಾಗಲೇ ಅನೇಕ ರಾಜಕಾರಣಿಗಳ ಭೇಟಿ ಮಾಡಲಾಗಿದೆ. ಆದರೆ, ಅವರ ಪ್ರಯತ್ನ ವ್ಯರ್ಥವಾಗಿವೆ. ರುಬಿಯಾ ತಾಯಿ ಉಪವಾಸ ಸತ್ಯಾಗ್ರಹ ನಡೆಸಿದಾಗಿ ಸ್ಥಳೀಯ ತಹಶೀಲ್ದಾರ್​ ಈ ವಿಷಯ ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಸಹಾಯಕ ಪೋಷಕರು ಇದೀಗ ತಮ್ಮ ಕಿಡ್ನಿ ಮಾರಾಟ ಮಾಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಅವಕಾಶ ನೀಡದಿದ್ದರೆ ಮಗಳ ಶಿಕ್ಷಣ ವೆಚ್ಚ ಭರಿಸಬೇಕು ಎಂದು ಮನವಿ ಮಾಡಿದ್ದಾರೆ.

Last Updated :Apr 14, 2021, 7:09 PM IST

ABOUT THE AUTHOR

...view details