ಕರ್ನಾಟಕ

karnataka

ನಿನ್ನೆ ದೇಶದಲ್ಲಿ 14,313 ಕೋವಿಡ್​ ಸೋಂಕಿತರು ಪತ್ತೆ, ಆದ್ರೆ 549 ಮಂದಿ ಸಾವು

By

Published : Oct 30, 2021, 11:10 AM IST

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 14,313 ಸೋಂಕಿತರು ಪತ್ತೆಯಾಗಿದ್ದು, ಬರೋಬ್ಬರಿ 549 ಮಂದಿ ಬಲಿಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 34,260,470ಕ್ಕೆ ಹಾಗೂ ಮೃತರ ಸಂಖ್ಯೆ 4,57,740ಕ್ಕೆ ಹೆಚ್ಚಳವಾಗಿದೆ.

Total number of corona cases and deaths in India
Total number of corona cases and deaths in India

ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ವರದಿಯಾಗುತ್ತಿರುವ ಹೊಸ ಕೊರೊನಾ ಕೇಸ್​ಗಳ ಸಂಖ್ಯೆ ತಗ್ಗುತ್ತಿದೆ. ಆದ್ರೆ, ಮೃತರ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ 14,313 ಸೋಂಕಿತರು ಪತ್ತೆಯಾಗಿದ್ದು, ಬರೋಬ್ಬರಿ 549 ಮಂದಿ ಬಲಿಯಾಗಿದ್ದಾರೆ.

ದೇಶದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 34,260,470ಕ್ಕೆ ಹಾಗೂ ಮೃತರ ಸಂಖ್ಯೆ 4,57,740ಕ್ಕೆ ಹೆಚ್ಚಳವಾಗಿದೆ. ಇಲ್ಲಿಯವರೆಗೆ ಶೇ.99.19 ರಷ್ಟು ಅಂದರೆ 3,36,41,175 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಆ್ಯಕ್ಟಿವ್​ ಕೇಸ್​ಗಳ ಪ್ರಮಾಣ ಶೇ.0.47ಕ್ಕೆ ಇಳಿಕೆಯಾಗಿದ್ದು, ಪ್ರಸ್ತುತ 1,61,555 ಕೇಸ್​ಗಳು ಮಾತ್ರ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

105.43 ಕೋಟಿ ಡೋಸ್​ ವ್ಯಾಕ್ಸಿನೇಷನ್​

ಜನವರಿ 16ರಿಂದ ದೇಶಾದ್ಯಂತ ಕೋವಿಡ್​ ವ್ಯಾಕ್ಸಿನೇಷನ್​ ಅಭಿಯಾನ ಆರಂಭವಾಗಿದ್ದು, ಇಲ್ಲಿಯವರೆಗೆ 1,05,43,13,977 ಡೋಸ್ ನೀಡಲಾಗಿದೆ. ನಿನ್ನೆ ಒಂದೇ ದಿನ 56.11 ಲಕ್ಷ ಜನರು ಲಸಿಕೆ ಹಾಕಿಸಿಕೊಂಡಿದ್ದಾರೆ.

ABOUT THE AUTHOR

...view details