ಕರ್ನಾಟಕ

karnataka

ದೇಶದಲ್ಲಿ 2 ಒಮಿಕ್ರೋನ್ ಪ್ರಕರಣ ಸೇರಿ 9 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ

By

Published : Dec 3, 2021, 10:23 AM IST

ದೇಶದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಒಮಿಕ್ರೋನ್ ರೂಪಾಂತರಿ ತಳಿ ಆತಂಕ ಹುಟ್ಟಿಸಿದೆ. ಕಳೆದ 24 ಗಂಟೆಯ ಅವಧಿಯಲ್ಲಿ ದೇಶಾದ್ಯಂತ ಪತ್ತೆಯಾದ ಕೋವಿಡ್‌ ಸೋಂಕಿತರು, ಸಾವು ಹಾಗು ವ್ಯಾಕ್ಸಿನೇಷನ್‌ ಬಗೆಗಿನ ಸಂಪೂರ್ಣ ಮಾಹಿತಿ ಹೀಗಿದೆ.

corona
corona

ನವದೆಹಲಿ: ಒಮಿಕ್ರೋನ್ ರೂಪಾಂತರ ಆತಂಕದ ನಡುವೆ ಸಾಮಾನ್ಯ ಕೊರೊನಾ ಸೋಂಕಿತರ ಸಂಖ್ಯೆಯೂ ಕೂಡಾ ದೇಶದಲ್ಲಿ ಆತಂಕ ಮೂಡಿಸುತ್ತಿದೆ.

ಇತ್ತೀಚಿಗೆ ಒಂದು ದಿನದಲ್ಲಿ 9 ಸಾವಿರದ ಆಸುಪಾಸಿನಲ್ಲಿ ಕೊರೊನಾ ಸೋಂಕಿತರು ಕಾಣಿಸಿಕೊಳ್ಳುತ್ತಿದ್ದು, ಕಳೆದ 24 ಗಂಟೆಗಳಲ್ಲಿ 9,216 ಮಂದಿಯಲ್ಲಿ ಈ ಸೋಂಕು ಕಾಣಿಸಿಕೊಂಡಿದೆ.

ಈ ಕುರಿತು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಈಗ ಒಟ್ಟು ಇಬ್ಬರು ಒಮಿಕ್ರೋನ್ ಸೋಂಕಿತರು ಸೇರಿದಂತೆ ಒಟ್ಟು 99, 976 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದಹಾಗೆ, ಗುರುವಾರ ಇಬ್ಬರು ಬೆಂಗಳೂರಿನಲ್ಲಿ ಒಮಿಕ್ರೋನ್ ಸೋಂಕಿತರು ಪತ್ತೆಯಾಗಿದ್ದರು.

ದೇಶದಲ್ಲಿ ಒಟ್ಟು ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ 3,46,15,757ಕ್ಕೆ ತಲುಪಿದೆ. ಈವರೆಗೆ 3,40,45,666 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣವು ಶೇಕಡಾ 98.35ರಷ್ಟಿದೆ ಎಂದು ವರದಿಯಾಗಿದೆ. ಈವರೆಗೆ 4,70,115 ಮಂದಿ ಸೋಂಕಿಗೆ ಬಲಿಯಾಗಿದ್ದು, 24 ಗಂಟೆಯಲ್ಲಿ 391 ಮಂದಿ ಸಾವನ್ನಪ್ಪಿದ್ದಾರೆ.

ವ್ಯಾಕ್ಸಿನೇಷನ್:

ಈವರೆಗೆ ರಾಷ್ಟ್ರಾದ್ಯಂತ ಈವರೆಗೆ ಸುಮಾರು 97,88,05,783 ಕೋವಿಡ್ ಲಸಿಕೆಯ ಡೋಸ್​ ವಿತರಣೆ ಮಾಡಲಾಗಿದೆ. 24 ಗಂಟೆಯಲ್ಲಿ 21,20,024 ಮಂದಿಗೆ ಸಿಂಗಲ್ ಡೋಸ್, 52,47,206 ಮಂದಿಗೆ ಡಬಲ್ ಡೋಸ್ ವ್ಯಾಕ್ಸಿನ್ ನೀಡಲಾಗಿದೆ.

ಸೋಂಕು ಪರೀಕ್ಷೆ:

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ ಕಳೆದ 24 ಗಂಟೆಗಳಲ್ಲಿ 11 ಲಕ್ಷಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದುವರೆಗೆ ದೇಶದಲ್ಲಿ ಒಟ್ಟು 64 ಕೋಟಿ ಸೋಂಕು ಪರೀಕ್ಷೆಗಳನ್ನು ಮಾಡಲಾಗಿದೆ.

ABOUT THE AUTHOR

...view details