ಕರ್ನಾಟಕ

karnataka

IED ಸ್ಫೋಟಿಸಿದ ನಕ್ಸಲರು: ಭದ್ರತಾ​ ಸಿಬ್ಬಂದಿಗೆ ಗಾಯ, 4 ಸಜೀವ ಸುಧಾರಿತ ಸ್ಫೋಟಕ ಸಾಧನ ವಶ

By

Published : Dec 21, 2021, 2:40 PM IST

ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ನಕ್ಸಲರು ಐಇಡಿ ಸ್ಫೋಟಿಸಿ ಓರ್ವ ಭದ್ರತಾ​ ಸಿಬ್ಬಂದಿ ಗಾಯಗೊಂಡಿದ್ದಾರೆ. ಇತ್ತ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ನಾಲ್ಕು ಸಜೀವ ಐಇಡಿಗಳನ್ನು ವಶಪಡಿಸಿಕೊಂಡಿದೆ.

IED
ಐಇಡಿ

ದಂತೇವಾಡ (ಛತ್ತೀಸ್‌ಗಢ):ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ನಕ್ಸಲರು ಸ್ಫೋಟಿಸಿದ್ದು, ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ) ಸಹಾಯಕ ಕಾನ್ಸ್​ಟೇಬಲ್​​ ಒಬ್ಬರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ದಂತೇವಾಡ ಜಿಲ್ಲೆಯಲ್ಲಿ ನಡೆದಿದೆ.

ಇಂದು ಬೆಳಗ್ಗೆ ಬೋಡ್ಲಿ ಶಿಬಿರದಿಂದ ಕರಿಯಮೆಟ್ಟಾ ಕಡೆಗೆ ನಕ್ಸಲ್​ ವಿರೋಧಿ ಕಾರ್ಯಾಚರಣೆಗೆ ತೆರಳುತ್ತಿದ್ದ ವೇಳೆ ನಕ್ಸಲರು ಐಇಡಿ ಸ್ಫೋಟಿಸಿದ್ದಾರೆ. ಇತ್ತ ಶೋಧ ಕಾರ್ಯಾಚರಣೆ ವೇಳೆ ಭದ್ರತಾ ಪಡೆ ನಾಲ್ಕು ಸಜೀವ ಐಇಡಿಗಳನ್ನು ವಶಪಡಿಸಿಕೊಂಡಿದೆ ಎಂದು ದಂತೇವಾಡ ಎಸ್‌ಪಿ ಅಭಿಷೇಕ್ ಪಲ್ಲವ್ ತಿಳಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢ ಎನ್‌ಕೌಂಟರ್‌: ಮೋಸ್ಟ್​ ವಾಂಟೆಡ್ ​ಮಹಿಳಾ ನಕ್ಸಲರ ಹೊಡೆದುರುಳಿಸಿದ ಭದ್ರತಾ ಪಡೆ

ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಕಾರ್ಯಾಚರಣೆ ಮುಂದುವರೆದಿದೆ ಎಂದು ಅಭಿಷೇಕ್ ಪಲ್ಲವ್ ಹೇಳಿದ್ದಾರೆ.

ಮೇಘಾಲಯದಲ್ಲಿ ಜೀವಂತ ಗ್ರೆನೇಡ್ ವಶಕ್ಕೆ

ಇಂದು ಮೇಘಾಲಯದಲ್ಲಿ ನಕ್ಸಲರ ಮೇಲೆ ನಡೆಸಿದ ಪ್ರತಿದಾಳಿಯಲ್ಲಿ ಭದ್ರತಾ ಪಡೆ ಒಂದು ಜೀವಂತ ಗ್ರೆನೇಡ್ ಮತ್ತು 6 ಲೈವ್ 7.62 ಎಂಎಂ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದೆ.

ABOUT THE AUTHOR

...view details