ಕರ್ನಾಟಕ

karnataka

ಅಹ್ಮದ್ ಪಟೇಲ್​​ ಮೊದಲ ಪುಣ್ಯತಿಥಿ.. ಸರ್ವಧರ್ಮ ಪ್ರಾರ್ಥನಾ ಸಭೆಯಲ್ಲಿ ಕಾಂಗ್ರೆಸ್​ ನಾಯಕರು ಭಾಗಿ

By

Published : Nov 25, 2021, 12:12 PM IST

Updated : Nov 25, 2021, 12:21 PM IST

Congress Leaders Tribute On first death anniversary Of Ahmed Patel at

ಇಂದು ಕಾಂಗ್ರೆಸ್ ನಾಯಕ ದಿ. ಅಹ್ಮದ್ ಪಟೇಲ್ ಅವರ ಮೊದಲ ಪುಣ್ಯತಿಥಿ ಆಚರಿಸಲಾಗುತ್ತಿದೆ. ಈ ಆಚರಣೆಯಲ್ಲಿ ಕಾಂಗ್ರೆಸ್​ ನಾಯಕರು ಪಾಲ್ಗೊಂಡಿದ್ದಾರೆ.

ಭರೂಚ್(ಗುಜರಾತ್​):ಇಂದು ಮಾಜಿ ಸಂಸದ ಮತ್ತು ಮಾಜಿ ಕಾಂಗ್ರೆಸ್ ನಾಯಕ ದಿ. ಅಹ್ಮದ್ ಪಟೇಲ್ ಅವರ ಮೊದಲ ಪುಣ್ಯತಿಥಿ ಆಚರಿಸಲಾಗುತ್ತಿದೆ. ಅಹ್ಮದ್ ಪಟೇಲ್ ಹುಟ್ಟೂರಾದ ಅಂಕಲೇಶ್ವರದ ಪಿರಮಾನ್ ಗ್ರಾಮದಲ್ಲಿ ಸರ್ವಧರ್ಮ ಪ್ರಾರ್ಥನಾ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಭರತ್​ಸಿನ್ಹಾ ಸೋಲಂಕಿ ಮತ್ತು ಮೌಲಿನ್ ವೈಷ್ಣವ್ ಪಾಲ್ಗೊಂಡಿದ್ದರು. ಬಳಿಕ ಅಹ್ಮದ್ ಪಟೇಲ್ ಅವರ ಸಮಾಧಿಗೆ ಪುಷ್ಪಾರ್ಚನೆ ಮಾಡಲಾಯಿತು.

ಅಹ್ಮದ್ ಪಟೇಲ್​​ರ ಪುಣ್ಯತಿಥಿ...ಸರ್ವಧರ್ಮ ಪ್ರಾರ್ಥನಾ ಸಭೆ

ಕೊವಿಡ್-19 ಸೋಂಕಿನಿಂದ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ತಮ್ಮ 71ನೇ ವಯಸ್ಸಿನಲ್ಲಿ ಮೃತರಾದರು. ಕೊವಿಡ್​ ದೃಢಪಟ್ಟ ನಂತರ ಅವರ ಆರೋಗ್ಯ ಹದಗೆಡುತ್ತಲೇ ಇತ್ತು, ನಂತರ 2020ರ ನವೆಂಬರ್​ 25ರಂದು ನಿಧನ ಹೊಂದಿದರು. ಅಹ್ಮದ್ ಪಟೇಲ್ ನಿಧನರಾಗಿ ಇಂದಿಗೆ ಒಂದು ವರ್ಷವಾಗಿದೆ. ಅವರ ನಿಧನದ ನಂತರ ರಾಜಕೀಯ ವಲಯದಲ್ಲಿ ಶೋಕ ಮಡುಗಟ್ಟಿದೆ.

ಇದನ್ನೂ ಓದಿ:India Covid Report: ದೇಶದಲ್ಲಿ ನಿನ್ನೆ 396 ಮಂದಿ ಕೊರೊನಾಗೆ ಬಲಿ; ಮೃತರ ಸಂಖ್ಯೆ 4.66 ಲಕ್ಷಕ್ಕೆ ಏರಿಕೆ

ಅಹ್ಮದ್ ಪಟೇಲ್ ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ತಾಲೂಕಿನ ಪಿರಮಾನ್ ಗ್ರಾಮದಲ್ಲಿ 1949ರ ಆಗಸ್ಟ್ 21ರಂದು ಜನಿಸಿದರು. ಮೊಹಮ್ಮದ್ ಇಶಾಕ್ಜಿ ಪಟೇಲ್ ಮತ್ತು ಹವಾಬೆನ್ ಮೊಹಮ್ಮದ್ ಭಾಯಿ ದಂಪತಿಯ ಪುತ್ರ.

ತಂದೆ ಮೊಹಮ್ಮದ್ ಇಶಾಕ್ಜಿ ಪಟೇಲ್ ಕಾಂಗ್ರೆಸ್‌ನಲ್ಲಿದ್ದು, ತಂದೆಯ ರಾಜಕೀಯ ಅನುಭವ ಅಹ್ಮದ್​ ಪಟೇಲ್​ರಿಗೆ ಅನುಕೂಲವಾಯಿತು. ಇನ್ನು ಅಹ್ಮದ್​ ಪಟೇಲ್ ​ರಾಷ್ಟ್ರೀಯ ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದ ಅವರು ರಾಜ್ಯಸಭೆ ಸದಸ್ಯರೂ ಕೂಡಾ ಆಗಿದ್ದರು.

Last Updated :Nov 25, 2021, 12:21 PM IST

ABOUT THE AUTHOR

...view details