ಕರ್ನಾಟಕ

karnataka

ವಿಷಾಹಾರ ಸೇವಿಸಿ ಅಜ್ಜ - ಮೊಮ್ಮಗ ಸಾವು: ಕುಟುಂಬದ ಉಳಿದ ಆರು ಮಂದಿ ಸ್ಥಿತಿ ಗಂಭೀರ

By

Published : Jan 7, 2022, 12:11 PM IST

ನಿನ್ನೆ ರಾತ್ರಿ ಮೀನು ಊಟ ಮಾಡಿ ಮಲಗಿದ್ದ ಒಂದೇ ಕುಟುಂಬ ಎಂಟು ಮಂದಿಯ ಪೈಕಿ ಇಬ್ಬರು ಸಾವನ್ನಪ್ಪಿದ್ದು, ಉಳಿದವರ ಸ್ಥಿತಿ ಚಿಂತಾಜನಕವಾಗಿದೆ.

Child, grandfather died due to food poisoning in jharkhand
ವಿಷಾಹಾರ ಸೇವಿಸಿ ಅಜ್ಜ-ಮೊಮ್ಮಗ ಸಾವು

ಗಿರಿದಿಹ್ (ಜಾರ್ಖಂಡ್​): ವಿಷಾಹಾರ ಸೇವಿಸಿ ಅಜ್ಜ ಮತ್ತು ಮೊಮ್ಮಗ ಮೃತಪಟ್ಟಿದ್ದು, ಕುಟುಂದದ ಉಳಿದ ಆರು ಮಂದಿ ಸ್ಥಿತಿ ಗಂಭೀರವಾಗಿರುವ ಘಟನೆ ಜಾರ್ಖಂಡ್​​​ನ ಗಿರಿದಿಹ್ ಜಿಲ್ಲೆಯ ಜಮುವಾ ಪ್ರದೇಶದ ಗ್ರಾಮವೊಂದರಲ್ಲಿ ನಡೆದಿದೆ.

ವಿಷಾಹಾರ ಸೇವಿಸಿ ಅಜ್ಜ-ಮೊಮ್ಮಗ ಸಾವು

ಮೃತರನ್ನು ಕುಲು ರಾಣಾ (60) ಹಾಗೂ ವಿಪಿನ್ ಕುಮಾರ್ (14) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಮೀನು ಊಟ ಮಾಡಿ ಮಲಗಿದ್ದ ಕುಲು ರಾಣಾ ಕುಟುಂಬದ ಎಂಟು ಮಂದಿ ಇಂದು ಬೆಳಗಾದರೂ ಎದ್ದೇಳಲೇ ಇಲ್ಲ. ಇದನ್ನು ಗಮನಿಸಿದ ನೆರೆ ಮನೆಯವರು ಹೊರಗಿನಿಂದ ಕೂಗಿದರೂ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಹೀಗಾಗಿ ಮನೆ ಬಾಗಿಲು ಒಡೆದು ಬಂದು ನೋಡಿದಾಗ ಎಲ್ಲರೂ ಅಸ್ವಸ್ಥರಾಗಿ ಬಿದ್ದಿರುವುದು ಕಂಡು ಬಂದಿದೆ.

ಇದನ್ನೂ ಓದಿ: ಜೋಡಿ ಕೊಲೆ ಪ್ರಕರಣ: ಪೊಲೀಸರ ಮೇಲೆ ದಾಳಿ ಮಾಡಿದ್ದ ಆರೋಪಿಗಳ ಎನ್​ಕೌಂಟರ್​​​​

ಗ್ರಾಮಸ್ಥರೆಲ್ಲ ಸೇರಿ ಎಂಟು ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಕುಲು ರಾಣಾ ಹಾಗೂ ಅವರ ಮೊಮ್ಮಗ ವಿಪಿನ್ ಕುಮಾರ್ ಸಾವನ್ನಪ್ಪಿದ್ದರು. ಉಳಿದವರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.

TAGGED:

ABOUT THE AUTHOR

...view details