ಕರ್ನಾಟಕ

karnataka

ಹೆದ್ದಾರಿಯಲ್ಲಿ ಕಾಡಾನೆಗಳ ದಾಳಿ: ಒಂದೂವರೆ ವರ್ಷದ ಮಗು ಸೇರಿ ಮೂವರು ಸಾವು

By

Published : Dec 15, 2022, 5:43 PM IST

Updated : Dec 15, 2022, 6:07 PM IST

ಅಸ್ಸೋಂನ ಗೋಲ್ಪಾರಾ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿ ಮೂವರನ್ನು ಬಲಿ ಪಡೆದಿದೆ.

child-among-three-killed-as-wild-elephants-go-berserk-in-assam
ಹೆದ್ದಾರಿಯಲ್ಲಿ ಕಾಡಾನೆಗಳ ದಾಳಿ: ಒಂದೂವರೆ ವರ್ಷದ ಮಗು ಸೇರಿ ಮೂವರ ಸಾವು

ಗೋಲ್ಪಾರಾ(ಅಸ್ಸೋಂ): ಕಾಡಾನೆಗಳ ದಾಳಿಯಲ್ಲಿ ಒಂದೂವರೆ ವರ್ಷದ ಮಗು ಸೇರಿ ಮೂವರು ಮೃತಪಟ್ಟಿರುವ ಘಟನೆ ಅಸ್ಸೋಂನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆಯಿತು. ಇಲ್ಲಿನ ಲಖಿಪುರ್ ಸಮೀಪದ ರಾಷ್ಟ್ರೀಯ ಹೆದ್ದಾರಿ 12ರಲ್ಲಿ ಇಂದು ಮಧ್ಯಾಹ್ನ ಕಾಡಾನೆಗಳು ವಾಹನಗಳ ಮೇಲೆರಗಿವೆ. ಈ ಘಟನೆಯನ್ನು ಲಖಿಪುರ್ ವಲಯ ಅರಣ್ಯಾಧಿಕಾರಿ ಧ್ರುಬಾ ದತ್ತಾ ಖಚಿತಪಡಿಸಿದ್ದಾರೆ.

ಲಖಿಪುರ್ ಮತ್ತು ಆಜಿಯಾ ರಸ್ತೆಯಲ್ಲಿ ಘಟನೆ ನಡೆದಿದೆ. ಕಾಡಾನೆಗಳ ಹಿಂಡು ಎರಡು ವಾಹನಗಳ ಮೇಲೆ ದಾಳಿ ಮಾಡಿದ್ದರಿಂದ ಮೂವರು ಮೃತಪಟ್ಟರು. ಇನ್ನೂ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಇದನ್ನೂ ಓದಿ:ಬಂಡೀಪುರದಲ್ಲಿ ಲಾರಿ ಡಿಕ್ಕಿಯಾಗಿ ಹೆಣ್ಣಾನೆ ಸಾವು: ಪರಿಸರವಾದಿಗಳ ಆಕ್ರೋಶ

Last Updated : Dec 15, 2022, 6:07 PM IST

ABOUT THE AUTHOR

...view details