ಕರ್ನಾಟಕ

karnataka

ಕೊರೊನಾ ಪರಿಸ್ಥಿತಿ ಮುಂದಿಟ್ಟು ಕೇಂದ್ರ ರೈತರ ಪ್ರತಿಭಟನೆಯನ್ನ ತನ್ನ ಪರ ಮಾಡಿಕೊಳ್ಳುತ್ತಿದೆ: ಚಿದು

By

Published : May 28, 2021, 4:02 PM IST

ಸರ್ಕಾರದ ಹೊಸ ಸ್ಪಿನ್, ಸಾಂಕ್ರಾಮಿಕ ರೋಗದ ಮಧ್ಯೆ ಆಂದೋಲನ ಹೆಚ್ಚಿಸುವುದು ಅಸಮರ್ಥನೀಯವಾಗಿದೆ. ಇದು ನಿಜವಾಗಿಯೂ ಜನರ ಸೇವಕರಾಗಿದ್ದರೆ ಸರ್ಕಾರವು ಸಾರ್ವಜನಿಕ ಅಭಿಪ್ರಾಯದತ್ತ ಗಮನಹರಿಸಬೇಕು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

P Chidambaram
P Chidambaram

ನವದೆಹಲಿ:ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಪಡಿಸುವಂತೆ ರೈತರು ನಡೆಸಿದ ಪ್ರತಿಭಟನೆಯನ್ನು ತನ್ನ ಪರವಾಗಿ ತಿರುಗಿಸಲು, ಈಗ ಚಾಲ್ತಿಯಲ್ಲಿ ಇರುವ ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಕೇಂದ್ರ ಬಳಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಆರೋಪಿಸಿದ್ದಾರೆ.

ಸರ್ಕಾರದ ಹೊಸ ಸ್ಪಿನ್, ಸಾಂಕ್ರಾಮಿಕ ರೋಗದ ಮಧ್ಯೆ ಆಂದೋಲನ ಹೆಚ್ಚಿಸುವುದು ಅಸಮರ್ಥನೀಯವಾಗಿದೆ. ಇದು ನಿಜವಾಗಿಯೂ ಜನರ ಸೇವಕರಾಗಿದ್ದರೆ ಸರ್ಕಾರವು ಸಾರ್ವಜನಿಕ ಅಭಿಪ್ರಾಯದತ್ತ ಗಮನಹರಿಸಬೇಕು ಎಂದರು.

ರೈತರ ಪ್ರತಿಭಟನೆ ನಡೆಸಿ ಆರು ತಿಂಗಳು ಪೂರ್ಣಗೊಂಡಂತೆ, ಸರ್ಕಾರವು ಸಾಂಕ್ರಾಮಿಕ ರೋಗವನ್ನು ನಿರೂಪಣೆಯನ್ನು ತನ್ನ ಪರವಾಗಿ ತಿರುಗಿಸಲು ಬಳಸುತ್ತಿದೆ ಎಂದು ಹೇಳಿದರು.

ಸಾಂಕ್ರಾಮಿಕ ರೋಗದ ಮಧ್ಯೆ ವಿವಾದಾತ್ಮಕ ಕೃಷಿ ಕಾನೂನುಗಳನ್ನು ದೀರ್ಘಗೊಳಿಸುವುದು, ಸ್ಪಷ್ಟವಾದ ಪ್ರತಿಕೂಲವಾಗಿದೆ. ಸರ್ಕಾರದ ಹಠಮಾರಿ ಬಗ್ಗೆ ರೈತರು ನಿರ್ಧರಿಸುತ್ತಾರೆ. ಸರ್ಕಾರವು ಜನರ ಸೇವಕರಾಗಿದ್ದರೆ, ಅದು ಸಾರ್ವಜನಿಕ ಅಭಿಪ್ರಾಯಗಳಿಗೆ ಕಿವಿಗೊಡಬೇಕು. ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ಹೊಸ ಸಮಾಲೋಚನೆಗಳನ್ನು ಪ್ರಾರಂಭಿಸಬೇಕು ಎಂದು ಸಲಹೆ ನೀಡಿದ್ದಾರೆ.

ABOUT THE AUTHOR

...view details