ಕರ್ನಾಟಕ

karnataka

UPSC Recruitment: ಭಾಷಾಂತರಕಾರರು, ಇಂಜಿನಿಯರ್​ ಸೇರಿದಂತೆ 261 ಹುದ್ದೆಗಳಿಗೆ ಕೇಂದ್ರದಿಂದ ಅರ್ಜಿ ಆಹ್ವಾನ

By

Published : Jun 26, 2023, 10:33 AM IST

ಕೇಂದ್ರ ಲೋಕ ಸೇವಾ ಆಯೋಗದಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಕಾಲ ಕಾಲಕ್ಕೆ ಅಧಿಸೂಚನೆ ಹೊರಡಿಸಲಾಗುವುದು. ಈ ಹುದ್ದೆಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

Central Government jobs upsc invited application for 261 various post
Central Government jobs upsc invited application for 261 various post

ಕೇಂದ್ರ ಲೋಕ ಸೇವಾ ಆಯೋಗದಲ್ಲಿ (UPSC) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜ್ಯೂನಿಯರ್​ ಟ್ರಾನ್ಸಲೇಟರ್​ ಸೇರಿದಂತೆ ವಿವಿಧ 261 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪದವೀಧರ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆಗೆ ಜುಲೈ 13 ಕಡೆಯ ದಿನವಾಗಿದ್ದು, ಆಸಕ್ತ ಮತ್ತು ಅರ್ಹ ಸೂಕ್ತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಅಧಿಸೂಚನೆ

ಹುದ್ದೆ ವಿವರ: ಏರ್​ ವರ್ಥಿನೆಸ್​ ಆಫೀಸರ್​, ಆರ್​ ಸೆಫ್ಟಿ ಆಫೀಸರ್​, ಜ್ಯೂನಿಯರ್​ ಸೈಂಟಿಫಿಕ್​, ಜ್ಯೂನಿಯರ್​ ಟ್ರಾನ್ಸಲೇಷನ್​ ಆಫೀಸರ್​, ಅಸಿಸ್ಟೆಂಟ್​ ಇಂಜಿನಿಯರ್​ ಗ್ರೇಡ್​-1, ಸೀನಿಯರ್​ ಲೆಕ್ಚರ್​​​​​​​ ಸೇರಿದಂತೆ ಒಟ್ಟು 261 ಹುದ್ದೆಗಳಿವೆ.

ಹುದ್ದೆ ವಿದ್ಯಾರ್ಹತೆ:

  • ಏರ್​​ ವರ್ಥಿನೆಸ್​ ಆಫೀಸರ್​​: ಇಂಜಿನಿಯರಿಂಗ್​ ಪದವಿ
  • ಏಪ್​ ಸೆಫ್ಟಿ ಆಫೀಸರ್​: ಏರೋನಾಟಿಕಲ್​ ಇಂಜಿನಿಯರಿಂಗ್​ ಪದವಿ
  • ಲೈವ್​ಸ್ಟೋಕ್​ ಆಫೀಸರ್​: ಪಶು ಸಂಗೋಪನೆಯಲ್ಲಿ ಪದವಿ
  • ಜ್ಯೂನಿಯರ್​​ ಸೈಂಟಿಸ್ಟ್​​ ಆಫೀಸರ್​​​​ (ಬ್ಯಾಲಿಸ್ಟಿಕ್ಸ್​​) : ವಿಜ್ಞಾನ ಅಥವಾ ಫಾರೆನ್ಸಿಕ್​ ಸೈನ್ಸ್​ನಲ್ಲಿ ಸ್ನಾತಕೋತ್ತರ ಪದವಿ
  • ಜ್ಯೂನಿಯರ್​ ಸೈಂಟಿಸ್ಟ್​​ ಅಧಿಕಾರಿ (ಬಯೋಲಾಜಿ): ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಯೋಟೆಕ್ನಾಲಜಿಯಲ್ಲಿ ಸ್ನಾತಕೋತ್ತರ ಪದವಿ
  • ಜ್ಯೂನಿಯರ್​ ಸೈಂಟಿಫಿಕ್​ ಆಫೀಸರ್​ (ಕೆಮಿಸ್ಟ್ರಿ): ಕೆಮಿಸ್ಟ್ರಿಯಲ್ಲಿ ಸ್ನಾತಕೋತ್ತರ ಪದವಿ
  • ಜ್ಯೂನಿಯರ್​ ಸೈಂಟಿಫಿಕ್​ ಆಫೀಸರ್​ (ಫಿಸಿಕ್ಸ್​): ಸ್ನಾತಕೋತ್ತರ ಪದವಿ, ಬಿಇ ಪದವಿ
  • ಪಬ್ಲಿಕ್​ ಪ್ರಾಸಿಕ್ಯೂಟರ್​: ಕಾನೂನು ಪದವಿ
  • ಜ್ಯೂನಿಯರ್​ ಟ್ರಾನ್ಸ್​ಲೇಷನ್​​ ಅಧಿಕಾರಿ: ಸ್ನಾತಕೋತ್ತರ ಪದವಿ
  • ಅಸಿಸ್ಟೆಂಟ್​ ಇಂಜಿನಿಯರ್​ ಗ್ರೇಡ್​-1: ಮೈನಿಂಗ್​, ಮೆಕಾನಿಕಲ್​ನಲ್ಲಿ ಬಿಇ ಪದವಿ
  • ಅಸಿಸ್ಟೆಂಟ್​ ಸರ್ವೇ ಆಫೀಸರ್​: ಸಿವಿಲ್​ ಅಥವಾ ಮೈನಿಂಗ್​ನಲ್ಲಿ ಬಿಇ ಪದವಿ
  • ಪ್ರಿನ್ಸಿಪಾಲ್​ ಆಫೀಸರ್​ (ಇಂಜಿನಿಯರಿಂಗ್​) ಮತ್ತು ಜಾಯಿಂಟ್​ ಡೈರೆಕ್ಟರ್​ ಜನರಲ್ (ಟೆಕ್ನಿಕಲ್​): ಸ್ನಾತಕೋತ್ತರ ಪದವಿ
  • ಸೀನಿಯರ್​ ಲೆಕ್ಚರ್​​ (ಜನರ್​ ಮೆಡಿಸಿನ್​): ಮೆಡಿಸಿನ್​ ನಲ್ಲಿ ಎಂಡಿ ಪದವಿ
  • ಸೀನಿಯರ್​ ಲೆಕ್ಚರ್​ (ಜನರಲ್​ ಸರ್ಜರಿ): ಸರ್ಜರಿಯಲ್ಲಿ ಎಂಎಸ್​
  • ಸೀನಿಯರ್​ ಲೆಕ್ಚರ್​ (ಟ್ಯೂಬರ್​​ಕ್ಯೂಲೊಸಿಸ್​ ಮತ್ತು ರೆಸ್ಪಿರೆಟರಿ ಡೀಸಿಸ್​) ಎಂಡಿ ಪದವಿ

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ 30 ರಿಂದ 50 ವರ್ಷದ ವಯೋಮಾನದೊಳಗೆ ಇರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿದೆ./

ಅರ್ಜಿ ಸಲ್ಲಿಕೆ:ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಪ.ಜಾ, ಪ.ಪಂ, ಮಹಿಳಾ ಮತ್ತು ವಿಕಲಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ವಿಲ್ಲ. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್​ ಅಭ್ಯರ್ಥಿಗಳಿಗೆ 25 ರೂ ಅರ್ಜಿ ಶುಲ್ಕ ವಿಧಿಸಲಾಗಿದೆ.

ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆ ಜೂನ್​ 24 ರಿಂದ ಆರಂಭವಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂ ಜುಲೈ 14 ಆಗಿದೆ.

ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳುಗ ಕೇಂದ್ರ ಲೋಕ ಸೇವಾ ಆಯೋಗದ ಅಧಿಕೃತ ಜಾಲತಾಣವಾದ upsc.gov.in ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇದನ್ನೂ ಓದಿ: ತುಮಕೂರು ಜಿಲ್ಲಾ ಆರೋಗ್ಯ ಇಲಾಖೆಯಲ್ಲಿದೆ ಉದ್ಯೋಗಾವಕಾಶ: ನರ್ಸ್​, ಲ್ಯಾಬ್​ ಟೆಕ್ನಿಷಿಯನ್​ ಸೇರಿ ಹಲವು ಹುದ್ದೆಗೆ ನೇರ ಸಂದರ್ಶನ

ABOUT THE AUTHOR

...view details