ಕರ್ನಾಟಕ

karnataka

ವೀಸಾ ಭ್ರಷ್ಟಾಚಾರ ಪ್ರಕರಣ: ಕಾರ್ತಿ ಚಿದಂಬರಂ ನಿವಾಸದ ಮೇಲೆ ಮತ್ತೆ ಸಿಬಿಐ ದಾಳಿ!

By

Published : Jul 9, 2022, 5:36 PM IST

Updated : Jul 9, 2022, 6:03 PM IST

CBI Raid on Karti Chidambaram's house

ವೀಸಾ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಮನೆ ಮೇಲೆ ಸಿಬಿಐ ಮತ್ತೆ ದಾಳಿ ನಡೆಸಿದೆ.

ಚೆನ್ನೈ(ತಮಿಳುನಾಡು): ಚೀನಾ ಪ್ರಜೆಗಳಿಗೆ ಅಕ್ರಮವಾಗಿ ವೀಸಾ ನೀಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ ನಾಯಕ ಕಾರ್ತಿ ಚಿದಂಬರಂ ಮನೆ ಮೇಲೆ ಸಿಬಿಐ ಮತ್ತೆ ದಾಳಿ ನಡೆಸಿದೆ. ಮೇ 17ರಂದು ಕಾರ್ತಿ ಚಿದಂಬರಂ ಅವರಿಗೆ ಸೇರಿದ ಮುಂಬೈ ಮತ್ತು ಚೆನ್ನೈನಲ್ಲಿರುವ ಮನೆ ಹಾಗೂ ಕಚೇರಿ ಸೇರಿ 9 ಸ್ಥಳಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿತ್ತು.

ಕಾರ್ತಿ ಚಿದಂಬರಂ ಮನೆ ಮೇಲೆ ಮತ್ತೆ ಸಿಬಿಐ ದಾಳಿ

ಆ ಸಮಯದಲ್ಲಿ ಚೆನ್ನೈನ ನುಂಗಂಬಾಕ್ಕಂನ ಪೈಕ್ರಾಫ್ಟ್ಸ್ ರಸ್ತೆಯಲ್ಲಿರುವ ಕಾರ್ತಿ ಚಿದಂಬರಂ ಅವರ ಮನೆ ಕೀಲಿ ನಾಪತ್ತೆಯಾಗಿದ್ದರಿಂದ ಸಿಬಿಐ ಅಧಿಕಾರಿಗಳು ಅದನ್ನು ತೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಸಿಬಿಐ ತಂಡ ಲಂಡನ್‌ನಲ್ಲಿರುವ ಕಾರ್ತಿ ಚಿದಂಬರಂ ಅವರಿಂದ ಕೀ ಪಡೆದು ಪರಿಶೀಲನೆ ನಡೆಸುತ್ತಿದೆ. ಮಧ್ಯಾಹ್ನ 2.20ಕ್ಕೆ ಆರಂಭವಾಗಿರುವ ದಾಳಿಯಲ್ಲಿ ಏಳು ಸಿಬಿಐ ಅಧಿಕಾರಿಗಳು ಭಾಗಿಯಾಗಿದ್ದರು.

ಇದನ್ನೂ ಓದಿ:ವಿವಾಹಿತ ಮಹಿಳೆ ಮೇಲೆ ಅತ್ಯಾಚಾರ ಆರೋಪ: ಇನ್ಸ್​ಪೆಕ್ಟರ್​ ಅಮಾನತು

Last Updated :Jul 9, 2022, 6:03 PM IST

ABOUT THE AUTHOR

...view details