ಕರ್ನಾಟಕ

karnataka

ಟಿಕಾಯತ್​ರ ಭಾರತ್​ ಬಂದ್​ ಕರೆ ತಾಲಿಬಾನ್​ ಚಟುವಟಿಕೆಗೆ ಹೋಲಿಸಿದ ಭಾನು ಪ್ರತಾಪ್​

By

Published : Sep 27, 2021, 3:59 PM IST

ದೇಶದ ಆರ್ಥಿಕತೆ ಹಾಗೂ ರೈತರ ಮೇಲೆ ಇದರಿಂದ ಪರಿಣಾಮ ಬೀರುತ್ತದೆ. ಆದರೆ, ಟಿಕಾಯತ್ ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಈ ರೀತಿಯ ನಿರ್ಧಾರ ಕೈಗೊಳ್ಳುವ ಮೂಲಕ ಅವರು ತಾಲಿಬಾನ್​​ ನಡೆ ಅನುಸರಣೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ..

Rakesh tikait
Rakesh tikait

ನವದೆಹಲಿ :ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆ ವಿರೋಧಿಸಿ ಇಂದು ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಇದಕ್ಕೆ ಒಂದಿಷ್ಟು ಸಂಘಟನೆಗಳು ಸಾಥ್​ ನೀಡಿದ್ರೆ, ಇನ್ನೊಂದಿಷ್ಟು ವಿರೋಧಿಸಿವೆ. ಬಿಕೆಯು ಭಾನು ಸಂಘಟನೆ ಅಧ್ಯಕ್ಷ ಭಾನು ಪ್ರತಾಪ್​ ಸಿಂಗ್​ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕಿಸಾನ್​ ಯೂನಿಯನ್​​ ಮುಖಂಡ ರಾಕೇಶ್ ಟಿಕಾಯತ್​ ಅವರ ಭಾರತ್​ ಬಂದ್​ ಕರೆಯನ್ನ ತಾಲಿಬಾನ್​ ಚಟುವಟಿಕೆಗಳಿಗೆ ಹೋಲಿಕೆ ಮಾಡಿರುವ ಭಾನು ಪ್ರತಾಪ್​, ರಾಕೇಶ್ ಟಿಕಾಯತ್​ ಅವರು ತಮ್ಮನ್ನು ರೈತ ಮುಖಂಡ ಎಂದು ಕರೆದುಕೊಳ್ಳುತ್ತಿದ್ದಾರೆ. ಆದರೆ, ಭಾರತ್​ ಬಂದ್​ನಿಂದ ದೇಶದ ಆರ್ಥಿಕತೆ ಹಾಗೂ ರೈತರಿಗೆ ತೊಂದರೆ ಆಗುತ್ತಿರುವ ಬಗ್ಗೆ ಅವರಿಗೆ ಗೊತ್ತಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ದೇಶದ ಆರ್ಥಿಕತೆ ಹಾಗೂ ರೈತರ ಮೇಲೆ ಇದರಿಂದ ಪರಿಣಾಮ ಬೀರುತ್ತದೆ. ಆದರೆ, ಟಿಕಾಯತ್ ಭಾರತ್ ಬಂದ್​ಗೆ ಕರೆ ನೀಡಿದ್ದಾರೆ. ಈ ರೀತಿಯ ನಿರ್ಧಾರ ಕೈಗೊಳ್ಳುವ ಮೂಲಕ ಅವರು ತಾಲಿಬಾನ್​​ ನಡೆ ಅನುಸರಣೆ ಮಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿರಿ:ಆನ್‌ಲೈನ್ ರಮ್ಮಿ ಆಟವನ್ನು ನಿಷೇಧಿಸುವುದು ಅಸಂವಿಧಾನಿಕ : ಕೇರಳ ಹೈಕೋರ್ಟ್

ಭಾರತ್​ ಬಂದ್​ ಯಶಸ್ವಿ ಎಂದ ಟಿಕಾಯತ್​

ಕೃಷಿ ಕಾಯ್ದೆ ವಿರೋಧಿಸಿ ಕೈಗೊಳ್ಳಲಾಗಿದ್ದ ಭಾರತ್​ ಬಂದ್ ಯಶಸ್ವಿಯಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಹೇಳಿಕೊಂಡಿದ್ದಾರೆ. ಇಂದಿನ ಪ್ರತಿಭಟನೆಯಲ್ಲಿ ನಮಗೆ ರೈತರಿಂದ ಸಂಪೂರ್ಣ ಬೆಂಬಲ ಸಿಕ್ಕಿದೆ. ನಾವು ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧವಾಗಿದ್ದೇವೆ. ಆದರೆ, ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.

ಯೋಗಿ ವಿರುದ್ಧ ಟಿಕಾಯತ್ ಆಕ್ರೋಶ

ಪ್ರತಿಭಟನೆ ವೇಳೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಟಿಕಾಯತ್, ಚುನಾವಣೆ ಪ್ರಣಾಳಿಕೆ ವೇಳೆ ಯೋಗಿ ಸರ್ಕಾರ ಕಬ್ಬು ಬೆಲೆಯನ್ನ ಪ್ರತಿ ಕ್ವಿಂಟಲ್​ಗೆ 375ರೂ. ನಿಂದ 450 ರೂ. ಏರಿಕೆ ಮಾಡುವುದಾಗಿ ತಿಳಿಸಿತ್ತು. ಆದರೆ, ಕೇವಲ 25 ರೂ. ಹೆಚ್ಚಿಸಿರುವುದು ಇದೊಂದು ದೊಡ್ಡ ಜೋಕ್ ಎಂದು ಕರೆದಿದ್ದಾರೆ.

ABOUT THE AUTHOR

...view details