ಕರ್ನಾಟಕ

karnataka

ಹಿಮಾಚಲ ಪ್ರದೇಶದಲ್ಲಿ ಕಮಲಕ್ಕೆ ಹಿನ್ನಡೆ: ಬಿಜೆಪಿಗೆ 2 ಸ್ಥಾನಗಳಲ್ಲಿ ಜಯ, ಸಿಎಂ ಠಾಕೂರ್​ಗೆ ಗೆಲುವು

By

Published : Dec 8, 2022, 11:31 AM IST

ಹಿಮಾಚಲಪ್ರದೇಶದಲ್ಲಿ ಬಿಜೆಪಿ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ಜೈ ರಾಮ್​ ಠಾಕೂರ್​ ಜಯದ ನಗೆ ಬೀರಿದರು.

BJP won 2 seats in himachal election result
ಹಿಮಾಚಲಪ್ರದೇಶದಲ್ಲಿ ಅರಳಿದ ಕಮಲ

ಮಂಡಿ(ಹಿಮಾಚಲಪ್ರದೇಶ):ಹಿಮಾಚಲಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಿದ್ದಾಜಿದ್ದಿನ ಪೈಪೋಟಿ ಮಧ್ಯೆಯೂ ಬಿಜೆಪಿ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಸೆರಾಜ್​ ಕ್ಷೇತ್ರದಿಂದ ಮುಖ್ಯಮಂತ್ರಿ ಜೈರಾಮ್​ ಠಾಕೂರ್​ ಗೆಲುವು ಸಾಧಿಸಿದರೆ, ಮಂಡಿ ಜಿಲ್ಲೆಯ ಸುಂದರನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಗೆಲುವು ಪಡೆದಿದ್ದಾರೆ. ಇಬ್ಬರು ಪಡೆದ ಮತದ ಬಗ್ಗೆ ಇನ್ನಷ್ಟೇ ಘೋಷಣೆಯಾಗಬೇಕಿದೆ.

ಸೆರಾಜ್​ ಮತ್ತು ಸುಂದರ ನಗರ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿದೆ. ಸಿಎಂ ಜೈ ರಾಮ್​ ಠಾಕೂರ್​ ಮತ್ತು ರಾಕೇಶ್ ಜಮ್ವಾಲ್ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸಿದ್ದರು.

ಹಿಂದಿನ 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಹನ್ ಲಾಲ್ 23282 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ರಾಕೇಶ್ ಜಮ್ವಾಲ್ ಅವರು 32545 ಮತಗಳನ್ನು ಪಡೆದಿದ್ದರು. ರಾಕೇಶ್ ಜಮ್ವಾಲ್ 9263 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇನ್ನು ಹಿಮಾಚಲ ಪ್ರದೇಶದಲ್ಲಿ ಇತ್ತೀಚಿನ ಟ್ರೆಂಡ್​ ಪ್ರಕಾರ ಕಾಂಗ್ರೆಸ್​ 38 ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದ್ದು, ಬಿಜೆಪಿ ಕೇವಲ 27 ಸ್ಥಾನಗಳಲ್ಲಷ್ಟೇ ಮುನ್ನಡೆ ಪಡೆದುಕೊಂಡಿದೆ. ಇನ್ನೂ ಹಲವು ಹಂತಗಳ ಮತ ಎಣಿಕೆ ಬಾಕಿ ಇದ್ದು, ಅಂತಿಮವಾಗಿ ಯಾವ ಫಲಿತಾಂಶ ಬರಲಿದೆ ಕಾದು ನೋಡಬೇಕಿದೆ.

ಓದಿ:LIVE: ಗುಜರಾತ್, ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶ: ಮೋದಿ ತವರಿನಲ್ಲಿ ಬಿಜೆಪಿ ಮುನ್ನಡೆ: ಹಿಮಾಚಲದಲ್ಲಿ ಕೈ - ಕಮಲ ನಡುವೆ ಬಿಗ್​ ಫೈಟ್​

ABOUT THE AUTHOR

...view details