ಕರ್ನಾಟಕ

karnataka

ವಿವಾದಿತ ಹೇಳಿಕೆ: ಬಿಜೆಪಿಯಿಂದ ನೂಪುರ್​ ಶರ್ಮಾ, ನವೀನ್​ ಜಿಂದಾಲ್ ಅಮಾನತು

By

Published : Jun 5, 2022, 5:03 PM IST

Updated : Jun 5, 2022, 5:09 PM IST

ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೂಪುರ್ ಶರ್ಮಾ ನೀಡಿದ್ದರು. ಇದರಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಕೋಮು ಘರ್ಷಣೆ ನಡೆದಿತ್ತು.

BJP suspends Nupur Sharma and Naveen Jindal from party's primary membership
ವಿವಾದಿತ ಹೇಳಿಕೆ: ಬಿಜೆಪಿಯಿಂದ ನುಪುರಾ ಶರ್ಮಾ, ನವೀನ್​ ಜಿಂದಾಲ್ ಅಮಾನತು

ನವದೆಹಲಿ: ವಿವಾಹಿತ ಹೇಳಿಕೆ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರೆ ನೂಪುರ್​ ಶರ್ಮಾ ಮತ್ತು ಇವರ ಸಹೋದ್ಯೋಗಿ ನವೀನ್ ಕುಮಾರ್​​ ಜಿಂದಾಲ್ ಅವ​ರನ್ನು ಪಕ್ಷದಿಂದ ಬಿಜೆಪಿ ಅಮಾನತುಗೊಳಿಸಿದೆ. ಈ ಇಬ್ಬರನ್ನೂ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ.

ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೂಪುರ್​ ಶರ್ಮಾ ನೀಡಿದ್ದರು. ಇದರಿಂದ ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಕೋಮು ಘರ್ಷಣೆ ನಡೆದಿತ್ತು. ಅಲ್ಲದೇ, ಈ ವಿವಾದವು ಹಿಂಸಾಚಾರಕ್ಕೆ ತಿರುಗಿ ಅನೇಕರು ಗಾಯಗೊಂಡಿದ್ದರು.

ಹೀಗಾಗಿ ನೂಪುರ್ ಶರ್ಮಾ ಹೇಳಿಕೆಯಿಂದ ಭಾನುವಾರ ಬಿಜೆಪಿ ಅಂತರ ಕಾಯ್ದುಕೊಂಡಿದೆ. ಅಲ್ಲದೇ, ಬಿಜೆಪಿ ಎಲ್ಲ ಧರ್ಮಗಳನ್ನು ಗೌರವಿಸುತ್ತದೆ. ಯಾವುದೇ ಧರ್ಮದ ಯಾವುದೇ ಧಾರ್ಮಿಕ ವ್ಯಕ್ತಿಗಳನ್ನು ಅವಮಾನಿಸುವುದನ್ನು ಬಲವಾಗಿ ಖಂಡಿಸುತ್ತದೆ ಎಂದು ಪತ್ರಿಕಾ ಪ್ರಕಟಣೆ ಹೊರಡಿಸಿತ್ತು. ಇದರ ಬೆನ್ನಲ್ಲೇ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್​​ ಜಿಂದಾಲ್​ರನ್ನು ಅಮಾನತುಗೊಳಿಸಿ ಕ್ರಮ ಕೈಗೊಂಡಿದೆ.

ಇದನ್ನೂ ಓದಿ:ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಲೇಡಿ ಎಸ್​ಐ ಅರೆಸ್ಟ್.. ಸೇವೆಯಿಂದಲೂ ಸಸ್ಪೆಂಡ್

Last Updated : Jun 5, 2022, 5:09 PM IST

ABOUT THE AUTHOR

...view details