ಕರ್ನಾಟಕ

karnataka

ಸರ್ಕಾರದ ವಿರುದ್ಧ ಸಂಸದ ವರುಣ್​ ಗಾಂಧಿ ಗರಂ.. ಸಣ್ಣ ವ್ಯಾಪಾರಸ್ಥರನ್ನು ಬೆಂಬಲಿಸುವಂತೆ ಮನವಿ..

By

Published : Dec 8, 2021, 4:43 PM IST

ಭ್ರಷ್ಟಾಚಾರ, ಹಣದುಬ್ಬರ ಮತ್ತು ಆರ್ಥಿಕ ನೀತಿ ಅಸ್ವಸ್ಥತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಸಣ್ಣ ಉತ್ಪಾದಕರು ಮತ್ತು ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ನಿಲ್ಲಿಸುವ ಅನಿವಾರ್ಯತೆಗೆ ತಲುಪಿದ್ದಾರೆ. ಅಮೆಜಾನ್, ವಾಲ್​ಮಾರ್ಟ್ ಬದಲಿಗೆ ನಿಮ್ಮ ನೆರೆಹೊರೆಯಲ್ಲಿರುವ ಸಣ್ಣ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿ, ಅವರನ್ನು ಬೆಂಬಲಿಸುವಂತೆ ಸಂಸದ ವರುಣ್ ಗಾಂಧಿ ಮನವಿ ಮಾಡಿದ್ದಾರೆ..

BJP MP Varun Gandhi
ಸಂಸದ ವರುಣ್ ಗಾಂಧಿ

ಪಿಲಿಭಿತ್ (ಉತ್ತರಪ್ರದೇಶ) :ಸಂಸದ ವರುಣ್ ಗಾಂಧಿ ಮತ್ತೊಮ್ಮೆ ತಮ್ಮದೇ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ. ಸಣ್ಣ ವ್ಯಾಪಾರಿಗಳ ಪರ ಧ್ವನಿ ಎತ್ತಿದ್ದಾರೆ. ಕೇಂದ್ರ ಸರ್ಕಾರದ ಆರ್ಥಿಕ ನಿರ್ವಹಣೆ, ಎಲ್ಲ ಅವ್ಯವಸ್ಥೆಗಳಿಂದಾಗಿ ಸಣ್ಣ ವ್ಯಾಪಾರಸ್ಥರು, ಉತ್ಪಾದಕರು ತಮ್ಮ ಉದ್ಯಮ ಕೈ ಬಿಡುವ ಪರಿಸ್ಥಿತಿಗೆ ಸಿಲುಕಿದ್ದಾರೆ ಎಂದು ವರುಣ್​ ಗಾಂಧಿ ಟ್ವೀಟ್ ಮಾಡಿದ್ದಾರೆ.

ಸಂಸದ ವರುಣ್ ಗಾಂಧಿ ಟ್ವೀಟ್

ಭ್ರಷ್ಟಾಚಾರ, ಹಣದುಬ್ಬರ ಮತ್ತು ಆರ್ಥಿಕ ನೀತಿ ಅಸ್ವಸ್ಥತೆಯಿಂದಾಗಿ ಹೆಚ್ಚಿನ ಸಂಖ್ಯೆಯ ಸಣ್ಣ ಉತ್ಪಾದಕರು ಮತ್ತು ವ್ಯಾಪಾರಸ್ಥರು ತಮ್ಮ ವ್ಯಾಪಾರವನ್ನು ನಿಲ್ಲಿಸುವ ಅನಿವಾರ್ಯತೆಗೆ ತಲುಪಿದ್ದಾರೆ.

ಅಮೆಜಾನ್, ವಾಲ್​ಮಾರ್ಟ್ ಬದಲಿಗೆ ನಿಮ್ಮ ನೆರೆಹೊರೆಯಲ್ಲಿರುವ ಸಣ್ಣ ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿ ಅವರನ್ನು ಬೆಂಬಲಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಶಬರಿಮಲೆ ಅನ್ನದಾನಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡಿದ ಭಾರತ್​​ ಬಯೋಟೆಕ್​​ ಅಧ್ಯಕ್ಷ

ಮೊದಲಿಗೆ ಸಂಸದ ವರುಣ್ ಗಾಂಧಿ ರೈತರ ಕೃಷಿ ನೀತಿಗಳ ಬಗ್ಗೆ, ಲಖೀಂಪುರ ಖೇರಿ ಘಟನೆ ವಿರುದ್ಧ ದನಿ ಎತ್ತಿ ತಮ್ಮ ಸರ್ಕಾರವನ್ನು ಗುರಿಯಾಗಿಸಿಕೊಂಡರು. ಇದೀಗ ಭ್ರಷ್ಟಾಚಾರ, ಹಣದುಬ್ಬರ, ಆರ್ಥಿಕ ನೀತಿಯನ್ನು ಪ್ರಶ್ನಿಸಿ ಸಣ್ಣ ಉತ್ಪಾದಕರು ಮತ್ತು ವ್ಯಾಪಾರಸ್ಥರ ಪರ ನಿಂತಿದ್ದಾರೆ.

ABOUT THE AUTHOR

...view details