ಮಧುರೈ (ತಮಿಳುನಾಡು): ತಮಿಳುನಾಡಿನ ಚುನಾವಣಾ ಅಬ್ಬರದ ಮಧ್ಯೆ, ಮಧುರೈನ ರೆಸ್ಟೋರೆಂಟ್ ಮಾಲೀಕರು ಮಾತ್ರ ಜನರು ಆಹಾರಕ್ಕಾಗಿ ಆರ್ಡರ್ ಮಾಡುತ್ತಿಲ್ಲ ಎಂದು ನಿರಾಶೆಗೊಂಡಿದ್ದಾರೆ.
ಸಾಮಾನ್ಯವಾಗಿ ಎಲೆಕ್ಷನ್ ಸಮಯದಲ್ಲಿ ಸುಮಾರು 200 ರಿಂದ 300 ಪ್ಲೇಟ್ ಬಿರಿಯಾನಿಗೆ ಆರ್ಡರ್ ಬರುತ್ತಿತ್ತು. ಆದರೆ ಈ ಬಾರಿ ಸ್ವಲ್ಪವೂ ವ್ಯವಹಾರವಿಲ್ಲ ಎಂದು ಬಿರಿಯಾನಿ ಅಂಗಡಿ ಮಾಲೀಕ ರಾಜ ಮೊಹಮದ್ ಹೇಳಿದ್ದಾರೆ.
"ರಾಜಕೀಯ ಪಕ್ಷಗಳು ಸಾಮಾನ್ಯವಾಗಿ ಇಲ್ಲಿ ಪ್ರಚಾರ ಮಾಡುವವರಿಗೆ ಬಿರಿಯಾನಿಯನ್ನು ಊಟವಾಗಿ ನೀಡುತ್ತಾರೆ. ಪ್ರಚಾರದ ಪ್ರಾರಂಭದ ದಿನಗಳಿಂದ ಎಣಿಕೆಯ ದಿನದವರೆಗೆ ಪ್ರತಿದಿನ 200 ರಿಂದ 300 ಪ್ಲೇಟ್ ಬಿರಿಯಾನಿಗೆ ಆರ್ಡರ್ ನೀಡುತ್ತಿದ್ದರು. ಆದರೆ ಈ ಬಾರಿ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಇದುವರೆಗೆ ಯಾವುದೇ ಬಿರಿಯಾನಿ ಆರ್ಡರ್ಗಳು ಬಂದಿಲ್ಲ." ಎಂದರು.