ಕರ್ನಾಟಕ

karnataka

6 ಯುವತಿಯರ ಮದುವೆಯಾಗಿ ಕೂಪಕ್ಕೆ ಬಿದ್ದ ಬಿಹಾರದ ಭೂಪ!

By

Published : Nov 30, 2022, 5:03 PM IST

ಬಿಹಾರದ ವ್ಯಕ್ತಿಯೊಬ್ಬ 6 ಮದುವೆಯಾಗಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಈತ ಬಿಹಾರ, ಜಾರ್ಖಂಡ್​, ದೆಹಲಿ, ಪಶ್ಚಿಮಬಂಗಾಳದ ಯುವತಿಯರ ವಿವಾಹವಾದ ಆರೋಪವಿದೆ.

bihar man tie knot with six women
6 ಯುವತಿಯರ ಮದುವೆಯಾಗಿ ಕೂಪಕ್ಕೆ ಬಿದ್ದ ಬಿಹಾರದ ಭೂಪ

ಜಮುಯಿ (ಬಿಹಾರ):ಈ ದುಬಾರಿ ದುನಿಯಾದಲ್ಲಿ ಒಂದು ಮದುವೆಯಾಗಿ ಸಂಸಾರ ನಡೆಸೋದೇ ಕಷ್ಟ. ಅಂಥದ್ದರಲ್ಲಿ ಬಿಹಾರದ ಈ ಮಹಾಪುರುಷ ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಮದುವೆಯಾಗಿದ್ದಾನೆ. ಇದನ್ನು ರಹಸ್ಯವಾಗಿಟ್ಟು, ತಲೆಮರೆಸಿಕೊಂಡಿದ್ದ ಈತನ ಅದೃಷ್ಟ ಕೆಟ್ಟಿದ್ದು ರೈಲು ನಿಲ್ದಾಣದಲ್ಲಿ. ಮೊದಲ ಹೆಂಡತಿಯ ಜೊತೆಗೆ ಪಯಣಿಸುತ್ತಿದ್ದಾಗ 2 ನೇ ಪತ್ನಿಯ ಸಹೋದರನ ಕಣ್ಣಿಗೆ ಬಿದ್ದ ಬಳಿಕ ಜಾತಕ ಬಯಲಾಗಿದೆ.

ಅಷ್ಟಕ್ಕೂ ಏನಾಯ್ತು?:ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಆರ್ಕೆಸ್ಟ್ರಾ ಬ್ಯಾಂಡ್‌ನಲ್ಲಿ ಕಲಾವಿದನಾಗಿರುವ ಚೋಟು ಕುಮಾರ್ ಈ ಕತೆಯ ಮುಖ್ಯ ಪಾತ್ರಧಾರಿ. ಈತನ ಮೇಲೆ ಆರು ಯುವತಿಯರ ಜೊತೆ ವಿವಾಹವಾದ ಆರೋಪವಿದೆ. ಇಂದು ಬಿಹಾರದ ಜಮುಯಿ ರೈಲು ನಿಲ್ದಾಣದಲ್ಲಿ ಮೊದಲ ಪತ್ನಿಯ ಜೊತೆಗೆ ಕೋಲ್ಕತ್ತಾಗೆ ಪಯಣಿಸುತ್ತಿದ್ದಾಗ, 2ನೇ ಪತ್ನಿಯ ಸಹೋದರ ಎದುರಾಗಿದ್ದಾನೆ.

ತಲೆಮರೆಸಿಕೊಂಡಿದ್ದ ಚೋಟುಕುಮಾರ್​ನನ್ನು ಕಂಡ ಆತ ಮನೆಗೆ ಕರೆದೊಯ್ಯಲು ಯತ್ನಿಸಿದ್ದಾನೆ. ಚೋಟು ಕುಮಾರ್​ ತಾನು ಮನೆಗೆ ಬರುವುದಿಲ್ಲ ಎಂದು ನಿರಾಕರಿಸಿದ್ದಾನೆ. ಬಳಿಕ ಮೊದಲ ಪತ್ನಿಯೂ ಈತನ ಜೊತೆ ಕಿತ್ತಾಡಿದ್ದಾಳೆ. ಬಳಿಕ 2ನೇ ಪತ್ನಿಯ ಸಹೋದರ ಚೋಟು ಕುಮಾರ್​ನನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದಾನೆ. ವಿಚಾರಣೆ ನಡೆಸಿದ ಪೊಲೀಸರು ಆತನ ಬಾಯಿಬಿಡಿಸಿದ್ದಾರೆ. ಬಳಿಕ ಚೋಟು ಕುಮಾರ್​ ಪ್ರಕರಣವನ್ನು ಸೌಹಾರ್ದಯುತವಾಗಿ ಬರೆಹರಿಸಲು ಕೋರಿದ್ದಾನೆ.

ಆರೋಪದಲ್ಲಿ ಸತ್ಯವಿಲ್ಲ ಎಂದ ಆರೋಪಿ:ಈಟಿವಿ ಭಾರತ್​ ಜೊತೆ ಮಾತನಾಡಿದ ಚೋಟು, ನಾನು 6 ಮದುವೆಯಾದ ಆರೋಪ ಸುಳ್ಳು. ಜಾರ್ಖಂಡ್‌ನ ರಾಂಚಿಯ ಮೂಲದ ಕಲಾವತಿ ದೇವಿ ನನ್ನ ಮೊದಲ ಹೆಂಡತಿ ಮತ್ತು ಬಿಹಾರದ ಜಮುಯಿ ಜಿಲ್ಲೆಯ ಸುಂದರ್‌ತಾಂಡ್‌ನ ಮಂಜು ದೇವಿ ಎರಡನೇ ಪತ್ನಿ. ಎರಡೂ ವಿವಾಹಗಳು 2018 ಮತ್ತು 2020 ರಲ್ಲಿ ಅದ್ಧೂರಿಯಾಗಿ ನಡೆದಿವೆ. ಇತರ ನಾಲ್ಕು ವಿವಾಹದ ಆರೋಪದಲ್ಲಿ ಸತ್ಯವಿಲ್ಲ ಎಂದು ಹೇಳಿದರು.

ಇನ್ನು ಚೋಟುವಿನ 2ನೇ ಪತ್ನಿಯ ತಾಯಿ ಮಾತನಾಡಿ, ಆರೋಪಿ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ. ರೈಲು ನಿಲ್ದಾಣದಲ್ಲಿ ನನ್ನ ಮಗನಿಗೆ ಸಿಕ್ಕಿಬಿದಿದ್ದಾನೆ. ನನ್ನ ಮಗಳ ಜೀವನವನ್ನು ಮಾತ್ರವಲ್ಲದೇ, 6 ಯುವತಿಯರ ಜೀವನವನ್ನು ಹಾಳು ಮಾಡಿದ್ದಾನೆ. ಒಮ್ಮೆ ಮಾತ್ರ ಮನೆಗೆ ಭೇಟಿ ನೀಡಿದ್ದ ಚೋಟುಕುಮಾರ್​, ಬಳಿಕ ಔಷಧ ತರುವ ನೆಪದಲ್ಲಿ ಮನೆಬಿಟ್ಟು ಹೋದವ ಪರಾರಿಯಾಗಿದ್ದ ಎಂದು ಆರೋಪಿಸಿದ್ದಾರೆ.

ಓದಿ:11 ಅಪರಾಧಿಗಳ ಬಿಡುಗಡೆ ವಿರುದ್ಧ ಸಂತ್ರಸ್ತೆ ಬಿಲ್ಕಿಸ್​ ಬಾನೊ ಸುಪ್ರೀಂಕೋರ್ಟ್​​ಗೆ​ ಮೊರೆ

ABOUT THE AUTHOR

...view details