ಕರ್ನಾಟಕ

karnataka

ಯುಪಿಯಲ್ಲಿ ಬಿಜೆಪಿ ಗೆಲುವು: ರಾಕೇಶ್ ಟಿಕಾಯತ್​ ಹೇಳಿದ್ದೇನು?

By

Published : Mar 10, 2022, 8:40 PM IST

'ಆಂದೋಲನ ಮಾಡುವುದು ನಮ್ಮ ಕೆಲಸ. ನಾವು ಚಳವಳಿಗಾರರು. ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲಸವಿದೆ. ಆದರೆ 13 ತಿಂಗಳ ಕಾಲ ನಡೆದ ರೈತ ಚಳವಳಿಯಿಂದ ಒಂದು ವಿಷಯ ಸ್ಪಷ್ಟವಾಗಿದೆ'- ರಾಕೇಶ್ ಟಿಕಾಯತ್​

ರಾಕೇಶ್ ಟಿಕಾಯತ್​
ರಾಕೇಶ್ ಟಿಕಾಯತ್​

ಮುಜಾಫರ್‌ನಗರ: ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಭಾರತೀಯ ಕಿಸಾನ್ ಯೂನಿಯನ್‌ ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕಾಯತ್ ಪ್ರತಿಕ್ರಿಯಿಸಿದರು.

ಚುನಾವಣೆ ಗೆಲ್ಲುವಲ್ಲಿ ಬಿಜೆಪಿ ಎತ್ತಿದ ಕೈ. ಪ್ರತಿ ಚುನಾವಣೆಯಲ್ಲೂ ಆ ಪಕ್ಷ ಮತ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದರು.

ಇನ್ನು, ಆಂದೋಲನ ಮಾಡುವುದು ನಮ್ಮ ಕೆಲಸ. ನಾವು ಚಳವಳಿಗಾರರು. ಪ್ರತಿಯೊಬ್ಬರಿಗೂ ಅವರದ್ದೇ ಆದ ಕೆಲಸವಿದೆ. ರಾಜಕೀಯ ಪಕ್ಷಗಳು ರೈತರನ್ನು ತಮ್ಮ ಅಜೆಂಡಾದಲ್ಲಿ ಇಟ್ಟುಕೊಂಡಿದ್ದವು ಎಂಬುದು 13 ತಿಂಗಳ ಕಾಲ ನಡೆದ ರೈತ ಚಳವಳಿಯಿಂದ ಸ್ಪಷ್ಟವಾಗಿದೆ ಎಂದು ಹೇಳಿದರು.

ಸರ್ಕಾರ ರೈತರಿಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು. ರೈತರ ಸಮಸ್ಯೆಗಳನ್ನು ಪ್ರಮುಖವಾಗಿ ಪ್ರಸ್ತಾಪಿಸುವುದಕ್ಕೆ ನಮ್ಮ ಆದ್ಯತೆ. ರೈತರ ಸಮಸ್ಯೆ ಬಗೆಹರಿಸುವುದು ರಾಜ್ಯ ಸರ್ಕಾರದ ಕೆಲಸ. ಉತ್ತರ ಪ್ರದೇಶದಲ್ಲಿ ವಿದ್ಯುತ್ ದುಬಾರಿಯಾಗಿದೆ. ಹರ್ಯಾಣದಂತೆ ಇಲ್ಲಿಯೂ ವಿದ್ಯುತ್ ಅಗ್ಗವಾಗಬೇಕು. ವಿದ್ಯುತ್ ದರವನ್ನು ಅರ್ಧಕ್ಕೆ ಇಳಿಸಬೇಕು. ಎಂಎಸ್​ಪಿ ಮೇಲೆ ಗ್ಯಾರಂಟಿ ಕಾನೂನು ಇರಬೇಕು ಎಂದು ಟಿಕಾಯತ್ ಒತ್ತಾಯಿಸಿದರು.

ಇದನ್ನೂ ಓದಿ: ಮೊಬೈಲ್​ ರಿಪೇರಿ ಅಂಗಡಿ ಕೆಲಸಗಾರನ ವಿರುದ್ಧ ಸೋತ ಸಿಎಂ ಚರಣ್‌ಜಿತ್​ ಸಿಂಗ್​ ಚನ್ನಿ!

ರೈತ ಆಂದೋಲನದ ವೇಳೆ ರೈತರ ಮೇಲೆ ಪ್ರಕರಣಗಳು ದಾಖಲಾಗಿದ್ದವು. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಹರಿಯಾಣದಲ್ಲಿ ರೈತರ ಮೇಲಿನ ಪ್ರಕರಣಗಳು ಮುಗಿದಿವೆ. ರೈತರಿಗೆ ಪರಿಹಾರವೂ ಸಿಕ್ಕಿದೆ. ಪಂಜಾಬ್‌ನಲ್ಲಿಯೂ ಪ್ರಕರಣಗಳನ್ನು ಹಿಂಪಡೆಯಲಾಗುತ್ತಿದೆ. ಆದರೆ ಇದುವರೆಗೆ ಉತ್ತರ ಪ್ರದೇಶದಲ್ಲಿ ರೈತರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆದಿಲ್ಲ. ಸರ್ಕಾರ ರಚನೆಯಾದ ನಂತರ ರೈತರ ಮೇಲೆ ದಾಖಲಾಗಿರುವ ಪ್ರಕರಣಗಳನ್ನು ವಾಪಸ್ ಪಡೆಯುತ್ತಾರೋ ಇಲ್ಲವೋ ನೋಡೋಣ ಎಂದು ಹೇಳಿದರು.

ABOUT THE AUTHOR

...view details