ಕರ್ನಾಟಕ

karnataka

ಮೋದಿಗೋಸ್ಕರ ದೇಶದ ಸಿಎಂಗಳು ಜನರ ಭವಿಷ್ಯ ಅಡವಿಡುತ್ತಿದ್ದಾರೆ: ರಾಹುಲ್​ ವಾಗ್ದಾಳಿ!

By

Published : Oct 12, 2020, 8:07 PM IST

ಪ್ರಧಾನಿ ನರೇಂದ್ರ ಮೋದಿಗೋಸ್ಕರ ದೇಶದ ಮುಖ್ಯಮಂತ್ರಿಗಳು ಜನರ ಭವಿಷ್ಯ ಅಡವಿಡುತ್ತಿರುವುದೇಕೆ ಎಂದು ರಾಹುಲ್​ ಗಾಂಧಿ ಪ್ರಶ್ನಿಸಿದ್ದಾರೆ.

Rahul Gandhi
Rahul Gandhi

ನವದೆಹಲಿ:ಜಿಎಸ್​ಟಿ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದು, ಮೋದಿಗೋಸ್ಕರ ದೇಶದ ಮುಖ್ಯಮಂತ್ರಿಗಳು ಜನರ ಭವಿಷ್ಯ ಅಡವಿಡುತ್ತಿರುವುದೇಕೆ ಎಂದು ಟ್ವೀಟ್​ ಮಾಡಿದ್ದಾರೆ.

ಕೇಂದ್ರ ಸರ್ಕಾರ ಈ ಹಿಂದೆ ಜಿಎಸ್​ಟಿ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಕೋವಿಡ್​ ಕಾರಣ ದೇಶದ ಆರ್ಥಿಕತೆ ಸಂಪೂರ್ಣವಾಗಿ ಹದಗಟ್ಟಿದೆ. ಈ ವೇಳೆ ಕಾರ್ಪೋರೇಟ್​ ಸಂಸ್ಥೆಗಳ 1.4 ಲಕಲ್ಷ ಕೋಟಿ ಟ್ಯಾಕ್ಸ್​ ಮನ್ನಾ ಮಾಡಿದ್ದಾರೆ. ಬರೋಬ್ಬರಿ 8,400 ಕೋಟಿ ನೀಡಿ ಎರಡು ಐಷಾರಾಮಿ ವಿಮಾನ ಖರೀದಿ ಮಾಡಿದ್ದಾರೆ. ಆದರೆ, ರಾಜ್ಯಗಳಿಗೆ ನೀಡಲು ಕೇಂದ್ರದ ಬಳಿ ಹಣವಿಲ್ಲ. ಹಣಕಾಸು ಸಚಿವೆ ಹೇಳುತ್ತಾರೆ ಕೇಂದ್ರದ ಬಳಿ ಸಾಲ ಪಡೆದುಕೊಳ್ಳಿ ಎಂದು ಹೇಳುತ್ತಾರೆಂದು ತಮ್ಮ ಟ್ವಿಟ್ಟರ್​​​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಳೆದ ಆಗಸ್ಟ್​ ತಿಂಗಳಲ್ಲಿ ಕೇಂದ್ರ ಸರ್ಕಾರ ರಾಜ್ಯಗಳ ಮುಂದೆ ಎರಡು ಆಯ್ಕೆ ಇಟ್ಟಿದೆ. ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಗೋಸ್ಕರ 97,000 ಕೋಟಿ ರೂ.ಸಾಲವಾಗಿ ಪಡೆಯುವುದು. ಅಥವಾ, ಜಿಎಸ್‌ಟಿ ಆದಾಯ ಕೊರತೆ ಹಾಗೂ ಕೋವಿಡ್‌-19ನಿಂದ ಆಗಿರುವ ನಷ್ಟವನ್ನೂ ಒಳಗೊಂಡ ಒಟ್ಟು 2.35 ಲಕ್ಷ ಕೋಟಿ ರೂ.ಯನ್ನೂ ಸಾಲವಾಗಿ ಪಡೆಯುವುದು ಎಂಬ ಎರಡು ಆಯ್ಕೆಯಿಟ್ಟಿದೆ. ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ.

ಇದೀಗ ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್​ ಮಾಡಿ ದೇಶದ ಮುಖ್ಯಮಂತ್ರಿಗಳ ವಿರುದ್ಧ ಟ್ವೀಟ್ ಮಾಡಿರುವ ರಾಹುಲ್​ ಗಾಂಧಿ, ಜಿಎಸ್​ಟಿ ಪರಿಹಾರ ವಿಷಯದಲ್ಲಿ ಕೇಂದ್ರದ ಸಾಲ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಿರುವ ಕಾರಣ, ಮೋದಿಯವರಿಗಾಗಿ ಮುಖ್ಯಮಂತ್ರಿಗಳು ನಿಮ್ಮ ಭವಿಷ್ಯವನ್ನೇಕೆ ಅಡವಿಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details