ಕರ್ನಾಟಕ

karnataka

ನಾವು ಸ್ಥಳದಿಂದ ಕದಲುವುದಿಲ್ಲ, ಪ್ರತಿಭಟನೆ ಕೈ ಬಿಡುವುದಿಲ್ಲ: ರಾಕೇಶ್ ಟಿಕಾಯತ್​

By

Published : Jan 29, 2021, 3:35 AM IST

Updated : Jan 29, 2021, 7:49 AM IST

ದೆಹಲಿಯ ಗಡಿಭಾಗ ಗಾಝಿಪುರ್​​ನಲ್ಲಿ ರೈತರ ಪ್ರತಿಭಟನೆ ಮುಂದುವರೆದಿದೆ. ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಉತ್ತರಪ್ರದೇಶ ಪೊಲೀಸರು ಆದೇಶ ನೀಡಿದ್ದಾರೆ. ಆದರೆ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್​ ಹೇಳಿದ್ದಾರೆ.

We will not vacate the site: Bharatiya Kisan Union spokesperson Rakesh Tikait
ನಾವು ಸ್ಥಳದಿಂದ ಕದಲುವುದಿಲ್ಲ, ಪ್ರತಿಭಟನೆ ಕೈ ಬಿಡುವುದಿಲ್ಲ: ರಾಕೇಶ್ ಟಿಕೈತ್

ನವದೆಹಲಿ: ನಾವು ಸ್ಥಳದಿಂದ ಕದಲುವುದಿಲ್ಲ, ಪ್ರತಿಭಟನೆಯನ್ನೂ ಕೈ ಬಿಡುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ದೆಹಲಿಯ ಗಡಿಭಾಗ ಗಾಝಿಪುರ್​​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಉತ್ತರಪ್ರದೇಶ ಪೊಲೀಸರು ಆದೇಶ ನೀಡಿದ್ದು, ರೈತರ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ನೆರೆದಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ರೈತ ನಾಯಕ ಹಾಗೂ ಭಾರತೀಯ ಕಿಸಾನ್ ಯೂನಿಯನ್ ಮುಖ್ಯಸ್ಥ ರಾಕೇಶ್ ಟಿಕಾಯತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಿಂದ ತೆರಳುವಂತೆ ನೋಟಿಸ್​ ಬಂದಿದೆ. ಆದರೆ ನಾವು ಸ್ಥಳದಿಂದ ಕದಲುವುದಿಲ್ಲ, ನಮ್ಮನ್ನು ತೆರವುಗೊಳಿಸುವುದಿದ್ದರೆ ತೆರವುಗೊಳಿಸಲಿ ಎಂದಿದ್ದಾರೆ.

ನಾವು ಸ್ಥಳದಿಂದ ಕದಲುವುದಿಲ್ಲ, ಪ್ರತಿಭಟನೆ ಕೈ ಬಿಡುವುದಿಲ್ಲ: ರಾಕೇಶ್ ಟಿಕೈತ್

ಇದನ್ನೂ ಓದಿ:ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಭಾರತೀಯ ಕಿಸಾನ್​ ಯೂನಿಯನ್​ ಮುಖಂಡ!

ಮಾಧ್ಯಮದವರೊಂದಿಗೆ ಮಾತನಾಡುವಾಗ ಗದ್ಗದಿತರಾಗಿ ರಾಕೇಶ್ ಟಿಕಾಯತ್, ಪೊಲೀಸರು ಕೂಡ ನಾವು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಆದರೆ ಸರ್ಕಾರ ನಮ್ಮೊಂದಿಗೆ ಮಾತನಾಡಬೇಕು. ನಮ್ಮ ಬೇಡಿಕೆ ಈಡೇರಿಸಬೇಕು ಅಲ್ಲಿಯವರೆಗೂ ಪ್ರತಿಭಟನೆ ಮುಂದುವರೆಯಲಿದೆ ಎಂದು ಟಿಕಾಯತ್ ಹೇಳಿದ್ದಾರೆ.

Last Updated :Jan 29, 2021, 7:49 AM IST

ABOUT THE AUTHOR

...view details