ಕರ್ನಾಟಕ

karnataka

ನೀರು ಹಂಚಿಕೆ ವಿವಾದ.. ಕೇಂದ್ರ ಸಚಿವ ಶೇಖಾವತ್ ನೇತೃತ್ವದಲ್ಲಿ ಆಂಧ್ರ, ತೆಲಂಗಾಣ ಸಿಎಂಗಳ ಸಭೆ

By

Published : Oct 6, 2020, 7:25 PM IST

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಆಡಳಿತವಿದ್ದಾಗ, ತೆಲಂಗಾಣದೊಂದಿಗಿನ ವಿವಾದಗಳು ಬಗೆಹರಿಯದೆ ಹಾಗೇ ಇದ್ದವು. ಇದೀಗ ಉಭಯ ರಾಜ್ಯಗಳು ಒಮ್ಮತದೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳೋಕೆ ಮುಂದಾಗಿರೋದು ಆಶಾದಾಯಕ ಬೆಳವಣಿಗೆ..

Water dispute
ಶೇಖಾವತ್ ನೇತೃತ್ವದಲ್ಲಿ ಆಂಧ್ರ, ತೆಲಂಗಾಣ ಸಿಎಂ ಸಭೆ

ಅಮರಾವತಿ (ಆಂಧ್ರ ಪ್ರದೇಶ): ಆಂಧ್ರ ಮತ್ತು ತೆಲಂಗಾಣ ನಡುವಿನ ನೀರು ಹಂಚಿಕೆ ವಿವಾದ ಕೇಂದ್ರದ ಅಂಗಳ ತಲುಪಿದೆ. ಇಂದು ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ನೇತೃತ್ವದಲ್ಲಿ ಸಭೆ ನಡೆದಿದ್ದು, ವಿಡಿಯೋ ಕಾನ್ಫರೆನ್ಸ್​ ಮೂಲಕ ಆಂಧ್ರ ಸಿಎಂ ಜಗನ್​ ಮೋಹನ್ ರೆಡ್ಡಿ ಹಾಗೂ ತೆಲಂಗಾಣ ಸಿಎಂ ಚಂದ್ರಶೇಖರ್​​ ರಾವ್​​​ ಭಾಗಿಯಾಗಿದ್ದರು.

ಆಂಧ್ರ ಸರ್ಕಾರ ನೀರಿನ ವಿಷಯದಲ್ಲಿ ತನ್ನ ನಿಲುವನ್ನ ಮಂಡಿಸಿದೆ. ರಾಯಲ ಸೀಮೆಯ ಮತ್ತು ಪ್ರಕಾಶಂ ಜಿಲ್ಲೆಗೆ ಅಗತ್ಯವಿರುವ ನೀರಾವರಿ ಮತ್ತು ಕುಡಿಯುವ ನೀರಿನ ಅಗತ್ಯತೆಗಳನ್ನ ತಿಳಿಸಿದರು. ಸಭೆಯಲ್ಲಿ ನೀರಾವರಿ ಸಚಿವ ಅನಿಲ್ ಕುಮಾರ್, ನೀರಾವರಿ ಪ್ರಧಾನ ಕಾರ್ಯದರ್ಶಿ ಆದಿತ್ಯನಾಥ್ ದಾಸ್ ಉಪಸ್ಥಿತರಿದ್ದರು.

ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಆಡಳಿತವಿದ್ದಾಗ, ತೆಲಂಗಾಣದೊಂದಿಗಿನ ವಿವಾದಗಳು ಬಗೆಹರಿಯದೆ ಹಾಗೇ ಇದ್ದವು. ಇದೀಗ ಉಭಯ ರಾಜ್ಯಗಳು ಒಮ್ಮತದೊಂದಿಗೆ ಸಮಸ್ಯೆ ಬಗೆಹರಿಸಿಕೊಳ್ಳೋಕೆ ಮುಂದಾಗಿರೋದು ಆಶಾದಾಯಕ ಬೆಳವಣಿಗೆಯಾಗಿದೆ.

ABOUT THE AUTHOR

...view details