ಕರ್ನಾಟಕ

karnataka

ಗ್ರಾಮೀಣ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಆಧಾರ್ ತಿದ್ದುಪಡಿಗೆ ಅಸ್ತು

By

Published : Apr 28, 2020, 7:52 PM IST

ಆಧಾರ್ ಮಾಹಿತಿ ತಿದ್ದುಪಡಿ ಮಾಡಲು ಬ್ಯಾಂಕಿಂಗ್​ ಕರೆಸ್ಪಾಂಡೆಂಟ್​ ಎಂದು ಅನುಮೋದನೆ ಪಡೆದಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೆ ಯುಐಡಿಎಐ ಅನುಮತಿ ನೀಡಿದೆ. ಸುಮಾರು 20 ಸಾವಿರ ಇಂಥ ಸಾಮಾನ್ಯ ಸೇವಾ ಕೇಂದ್ರಗಳು ಆಧಾರ್ ಮಾಹಿತಿ ಪರಿಷ್ಕರಣೆ ಸೇವೆಯನ್ನು ಜನರಿಗೆ ನೀಡಲಿದ್ದು, ಜನತೆಗೆ ಆಧಾರ್ ಮಾಹಿತಿ ತಿದ್ದುಪಡಿ ಮಾಡುವುದು ಸುಲಭವಾಗಲಿದೆ.

UIDAI allows Aadhaar updation through CSC
UIDAI allows Aadhaar updation through CSC

ನವದೆಹಲಿ: ಆಧಾರ್​ ಕಾರ್ಡ್​ ಮಾಹಿತಿಯ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು (Unique Identification Authority of India-UIDAI) ಈಗ ಮತ್ತಷ್ಟು ಸರಳಗೊಳಿಸಿದೆ. ದೇಶದ ಗ್ರಾಮೀಣ ಭಾಗದಲ್ಲಿರುವ 20 ಸಾವಿರ ಸಾಮಾನ್ಯ ಸೇವಾ ಕೇಂದ್ರಗಳಲ್ಲಿಯೇ ಇನ್ನು ಆಧಾರ್ ತಿದ್ದುಪಡಿ ಸಾಧ್ಯವಾಗಲಿದೆ.

"ಆಧಾರ್ ಮಾಹಿತಿ ತಿದ್ದುಪಡಿ ಮಾಡಲು ಬ್ಯಾಂಕಿಂಗ್​ ಕರೆಸ್ಪಾಂಡೆಂಟ್​ ಎಂದು ಅನುಮೋದನೆ ಪಡೆದಿರುವ ಸಾಮಾನ್ಯ ಸೇವಾ ಕೇಂದ್ರಗಳಿಗೆ ಯುಐಡಿಎಐ ಅನುಮತಿ ನೀಡಿದೆ. ಸುಮಾರು 20 ಸಾವಿರ ಇಂಥ ಸಾಮಾನ್ಯ ಸೇವಾ ಕೇಂದ್ರಗಳು ಆಧಾರ್ ಮಾಹಿತಿ ಪರಿಷ್ಕರಣೆ ಸೇವೆಯನ್ನು ಜನರಿಗೆ ನೀಡಲಿದ್ದು, ಜನತೆಗೆ ಆಧಾರ್ ಮಾಹಿತಿ ತಿದ್ದುಪಡಿ ಮಾಡುವುದು ಸುಲಭವಾಗಲಿದೆ. ಗ್ರಾಮ ಮಟ್ಟದ ನವೋದ್ಯಮಗಳಾದ ಸಾಮಾನ್ಯ ಸೇವಾ ಕೇಂದ್ರಗಳು ಯುಐಡಿಎಐ ಮಾರ್ಗಸೂಚಿಗಳ ಪ್ರಕಾರ ಕಾರ್ಯನಿರ್ವಹಿಸಲಿದ್ದು, ಆಧಾರ್ ಸೇವೆಗಳನ್ನು ಗ್ರಾಮೀಣರ ಮನೆ ಬಾಗಿಲಿಗೆ ತಲುಪಿಸಲಿವೆ." ಎಂದು ಕೇಂದ್ರ ದೂರಸಂಪರ್ಕ ಹಾಗೂ ಕಾನೂನು ಸಚಿವ ರವಿಶಂಕರ ಪ್ರಸಾದ್​ ಹೇಳಿದ್ದಾರೆ.

ಬ್ಯಾಂಕಿಂಗ್ ವ್ಯವಸ್ಥೆ ಉನ್ನತೀಕರಣ, ಇನ್ನಿತರ ಅಗತ್ಯ ಮೂಲಸೌಕರ್ಯಗಳ ಅಳವಡಿಕೆ ಹಾಗೂ ಅವಶ್ಯವಾದ ಅನುಮತಿ ಪಡೆದುಕೊಳ್ಳಲು ಸಾಮಾನ್ಯ ಸೇವಾಕೇಂದ್ರಗಳಿಗೆ ಜೂನ್​ ಅಂತ್ಯದವರೆಗೆ ಯುಐಡಿಎಐ ಗಡುವು ನೀಡಿದೆ.

ಸುಪ್ರೀಂಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಡಿಸೆಂಬರ್​ 2018 ರಿಂದ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಆಧಾರ್ ತಿದ್ದುಪಡಿಯನ್ನು ನಿಲ್ಲಿಸಲಾಗಿತ್ತು. ಆದರೆ, ಆವಾಗಲೇ ಸಾಕಷ್ಟು ಬಂಡವಾಳ ಹೂಡಿ ಸಾಮಾನ್ಯ ಸೇವಾ ಕೇಂದ್ರಗಳನ್ನು ಸ್ಥಾಪಿಸಿದ್ದ ಗ್ರಾಮ ಮಟ್ಟದ ನವೋದ್ಯಮಿಗಳು ಮತ್ತೆ ತಮ್ಮ ಸೇವೆಗಳನ್ನು ಆರಂಭಿಸುವಂತೆ ಒತ್ತಾಯಿಸಿದ್ದರು. ಹೀಗಾಗಿ ಈಗ ಮತ್ತೊಮ್ಮೆ ಈ ಸಾಮಾನ್ಯ ಸೇವಾ ಕೇಂದ್ರಗಳು ಆಧಾರ್ ಸೇವೆಗಳನ್ನು ನೀಡಲಿವೆ.

ABOUT THE AUTHOR

...view details