ಕರ್ನಾಟಕ

karnataka

ಸ್ಲಮ್‌ನ ಮಕ್ಕಳ ಜಾಣ್ಮೆಗೆ ತಲೆದೂಗದವರಿಲ್ಲ.. ಪ್ಲಾಸ್ಟಿಕ್‌ ಘನತ್ಯಾಜ್ಯದಿಂದ ಹೊಸ ಆವಿಷ್ಕಾರ!

By

Published : Dec 14, 2019, 8:11 AM IST

ಪ್ಲಾಸ್ಟಿಕ್‌ ಘನತ್ಯಾಜ್ಯ ಸಮಸ್ಯೆ ಭೂತದಂತೆ ಕಾಡ್ತಿದೆ. ಇದಕ್ಕೆ ಇತಿಶ್ರೀ ಹಾಡೋದಕ್ಕೆ ಸಾಕಷ್ಟು ಪ್ರಯತ್ನಗಳು ನಡೆದಿವೆ. ಒಡಿಶಾದ ಮಕ್ಕಳು ಪ್ಲಾಸ್ಟಿಕ್‌ನ ಪುನರ್ಬಳಕೆ ಮೂಲಕ ಹೊಸ ಹೊಸ ಆವಿಷ್ಕಾರ ನಡೆಸ್ತಿದ್ದಾರೆ.

These slum children created wonder from waste plastic
ಸ್ಲಮ್‌ನ ಮಕ್ಕಳ ಜಾಣ್ಮೆಗೆ ತಲೆದೂಗದವರಿಲ್ಲ.. ಪ್ಲಾಸ್ಟಿಕ್‌ ಘನತ್ಯಾಜ್ಯದಿಂದ ಹೊಸ ಆವಿಷ್ಕಾರ!

ಇವೆಲ್ಲ ವೇಸ್ಟ್‌ ಅಂತಾ ಬಳಸಿ ಬಿಸಾಡಿದ ಪ್ಲಾಸ್ಟಿಕ್ ತುಂಡು, ಕಟ್ಟಿಂಗ್ ಪ್ಲೇಯರ್​, ವೈರ್,,, ಅವುಗಳಿಂದಲೇ ಮಿನಿ ಯಂತ್ರಗಳನ್ನು ತಯಾರಿಸ್ತಿದಾರೆ ಒಡಿಶಾದ ಖಂಡಗಿರಿ ಸ್ಲಮ್​ನ ಮಕ್ಕಳು.

ಸ್ಲಮ್‌ನ ಮಕ್ಕಳ ಜಾಣ್ಮೆಗೆ ತಲೆದೂಗದವರಿಲ್ಲ.. ಪ್ಲಾಸ್ಟಿಕ್‌ ಘನತ್ಯಾಜ್ಯದಿಂದ ಹೊಸ ಆವಿಷ್ಕಾರ!

ಪ್ಲಾಸ್ಟಿಕ್​ ಬಾಟಲ್​ನಿಂದ ಮಿನಿ ರೋಬೋಟ್​ಗಳು ರೆಡಿ:ಪ್ಲಾಸ್ಟಿಕ್​ ವಸ್ತುಗಳನ್ನು ಒಮ್ಮೆ ಬಳಸಿ ಎಸೆದು ಪ್ರಕೃತಿ ಹಾನಿಗೆ ಕಾರಣವಾಗ್ತಿದ್ದೇವೆ. ಆದರೆ, ಈ ಚಿಣ್ಣರು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರೋಬೋಟ್‌ಗಳನ್ನು ತಯಾರಿಸುತ್ತಾರೆ. ಎಸೆದ ಪ್ಲಾಸ್ಟಿಕ್​ ಬಾಟಲ್​ಗಳಿಂದ ಮಿನಿ ರೋಬೋಟ್​ಗಳು ತಯಾರಾಗಿವೆ. ಇವರ ಈ ವಿನೂತನ ಪ್ರಯೋಗ ಪ್ಲಾಸ್ಟಿಕ್​ ತ್ಯಾಜ್ಯಕ್ಕೇ ಹೊಸ ಚೇತನ ಕೊಟ್ಟಿದೆ. ಚಿಂದಿಯಿಂದ ಬೃಹತ್​ ರೋಬೋಟ್‌ಗಳನ್ನ ತಯಾರಿಸೋದೆ ಇವರ ಕನಸಂತೆ.

ಈ ಯಂಗ್​ ಸೈಂಟಿಸ್ಟ್​ಗಳ ಕೈಯಲ್ಲಿ ಕಸದಿಂದಲೇ ರಸ :ತಮ್ಮ ಸುತ್ತಮುತ್ತಲಿನ ಬೃಹತ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆ ಸಮಸ್ಯೆ ನಿವಾರಣೆ ಜತೆಗೆ ಚಿಂದಿಯಿಂದ ರೋಬೋಟ್‌ಗಳನ್ನು ತಯಾರಿಸುವುದು ಇದರ ಹಿಂದಿರುವ ಸದುದ್ದೇಶ. ಬಾಗಿಲು ತೆರೆಯಲು ಪರ್ಯಾಯ ಮಾದರಿಯಾಗಿ ಸ್ವಯಂಚಾಲಿತ ಬಾಗಿಲುಗಳನ್ನೂ ತಯಾರಿಸಿದ್ದಾರೆ ಈ ಜಾಣರು.

ಚಿಣ್ಣರ ಕನಸಿಗೆ ಭುಬನೇಶ್ವರದ ಉನ್ಮುಕ್ತ ಸಂಸ್ಥೆ ದಾರಿದೀವಿಗೆ:ಇದೇ ಚಿಣ್ಣರ ಕನಸಿಗೆ ಭುಬನೇಶ್ವರದ ಉನ್ಮುಕ್ತ ಸಂಸ್ಥೆ ದಾರಿದೀವಿಗೆಯಾಗ್ತಿದೆ. ಈ ಮಕ್ಕಳ ಕಲೆ, ಜಾಣತನ, ಆಸಕ್ತಿ ಗಮನಿಸಿ ಈ ದಿಸೆಯಲ್ಲಿ ಇನ್ನಷ್ಟು ತರಬೇತಿ ನೀಡಲು ಮುಂದಾಗಿದೆ. ಅದೂ ಕೂಡ ಉಚಿತ. ಮಕ್ಕಳ ಈ ಪ್ರಕೃತಿ ಪ್ರೇಮ ಎಷ್ಟು ಶ್ಲಾಘಿಸಿದರೂ ಕಡಿಮೆನೇ..

ABOUT THE AUTHOR

...view details