ಕರ್ನಾಟಕ

karnataka

ಪೂಜೆ ನೆಪದಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಅರ್ಚಕ ಅರೆಸ್ಟ್​​​

By

Published : Nov 19, 2020, 6:52 PM IST

ಪೂಜೆಯ ನೆಪವೊಡ್ಡಿ ಇಬ್ಬರು ಬಾಲಕಿಯರ ಮೇಲೆ ಅರ್ಚಕನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ತಮಿಳುನಾಡಿನ ರಾಸಿಪುರಂ ಬಳಿ ನಡೆದಿದೆ.

ಮಂಗಳಪುರಂ ಪೊಲೀಸ್ ಠಾಣೆ
ಮಂಗಳಪುರಂ ಪೊಲೀಸ್ ಠಾಣೆ

ನಮಕ್ಕಲ್ (ತಮಿಳುನಾಡು): ಇಲ್ಲಿನ ರಾಸಿಪುರಂ ಬಳಿ ಇಬ್ಬರು ಬಾಲಕಿಯರ ಮೇಲೆ ನಿರಂತರವಾಗಿ ಒಂದು ವಾರಗಳ ಕಾಲ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಅರ್ಚಕನನ್ನು ಪೊಲೀಸರು ಬಂಧಿಸಿದ್ದಾರೆ.

ಶೇಖರ್​ (55) ಆರೋಪಿ. ವರದಿಗಳ ಪ್ರಕಾರ, ಅಪ್ರಾಪ್ತ ಬಾಲಕಿಯರು ಸಮಸ್ಯೆಗೆ ಒಳಗಾಗಿದ್ದಾರೆ. ಒಂದು ವಾರದ ಸುದೀರ್ಘ ಪೂಜೆ ನಡೆಸಬೇಕು. ಬಳಿಕ ಅವರು ಸಮಸ್ಯೆಯಿಂದ ಮುಕ್ತರಾಗುತ್ತಾರೆ ಎಂದು ಮಕ್ಕಳ ಪೋಷಕರನ್ನು ಅರ್ಚಕ ನಂಬಿಸಿದ್ದ. ಈ ಮಾತನ್ನು ನಂಬಿದ ಅವರು ತಮ್ಮ ಮಕ್ಕಳನ್ನು ಶೇಖರ್​ ಬಳಿ ಬಿಟ್ಟಿದ್ದಾರೆ.

ಆದರೆ ಪೂಜೆ ನಡೆದ ಬಳಿಕ ಬಾಲಕಿಯರು ನಡೆದ ಘಟನೆಯನ್ನು ಪೋಷಕರಿಗೆ ತಿಳಿಸಿದ್ದಾರೆ. ಬಳಿಕ ಪೋಷಕರು ಮಂಗಳಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಅರ್ಚಕ ಒಂದು ವಾರಗಳ ಕಾಲ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಪೋಕ್ಸೋ ಕಾಯ್ದೆಯಡಿಯಲ್ಲಿ ಶೇಖರ್​‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ABOUT THE AUTHOR

...view details