ಕರ್ನಾಟಕ

karnataka

ಸಮತೋಲನ ತಪ್ಪಿದ ನಾರಾ ಲೋಕೇಶ್ ತೆರಳುತ್ತಿದ್ದ ಟ್ರಾಕ್ಟರ್: ಪ್ರಾಣಾಪಾಯದಿಂದ ಪಾರಾದ ಟಿಡಿಪಿ ಮುಖಂಡ

By

Published : Oct 26, 2020, 11:26 PM IST

ಟಿಡಿಪಿ ಮುಖಂಡ ನಾರಾ ಲೋಕೇಶ್ ಅವರು ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದ ವೇಳೆ ಅವರು ಪ್ರಯಾಣಿಸುತ್ತಿದ್ದ ಟ್ರಾಕ್ಟರ್ ಸಮತೋಲನವನ್ನು ಕಳೆದುಕೊಂಡು ಕಾಲುವೆಗೆ ನುಗ್ಗಿದ್ದು, ಲೋಕೇಶ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

TDP's Nara Lokesh escapes unhurt in tractor incident
ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶ

ಪಶ್ಚಿಮ ಗೋದಾವರಿ:ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಸೋಮವಾರ ಅಪಘಾತವೊಂದರಿಂದ ಪಾರಾಗಿದ್ದು, ಅವರು ಪ್ರಯಾಣಿಸುತ್ತಿದ್ದ ಟ್ರಾಕ್ಟರ್ ಸಮತೋಲನ ಕಳೆದುಕೊಂಡು ಕಾಲುವೆಗೆ ನುಗ್ಗಿತ್ತು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮತ್ತು ಮಾಜಿ ಮುಖ್ಯಮಂತ್ರಿ ಎನ್. ಚಂದ್ರಬಾಬು ಅವರ ಪುತ್ರ ಪಶ್ಚಿಮ ಗೋದಾವರಿ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿದ್ದರು. ಸಿದ್ಧಪುರಂ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಲೋಕೇಶ್ ಟ್ರ್ಯಾಕ್ಟರ್ ಓಡಿಸಿದರು. ಈ ವೇಳೆ ಟ್ರ್ಯಾಕ್ಟರ್ ಸಮತೋಲನವನ್ನು ಕಳೆದುಕೊಂಡು ಕಾಲುವೆಗೆ ನುಗ್ಗಿತು. ಲೋಕೇಶ್ ಪಕ್ಕದಲ್ಲಿದ್ದ ಉಂಡಿ ಕ್ಷೇತ್ರದ ಶಾಸಕ ಮಂತೇನಾ ರಾಮರಾಜು ಅವರನ್ನು ಎಚ್ಚರಿಸಿ ಟ್ರ್ಯಾಕ್ಟರ್ ನಿಯಂತ್ರಿಸಿದ್ದು, ಲೋಕೇಶ್ ಅವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ ಹಾಗಾಗಿ, ಟಿಡಿಪಿ ಕಾರ್ಯಕರ್ತರು ನಿಟ್ಟುಸಿರು ಬಿಡುವಂತಾಯಿತು.

ABOUT THE AUTHOR

...view details