ನವದೆಹಲಿ: ಹೊಸ ಕೃಷಿ ಕಾನೂನುಗಳನ್ನು ಪ್ರಶ್ನಿಸಿ ದೆಹಲಿ ಗಡಿಯಲ್ಲಿ ನಡೆಯುತ್ತಿರುವ ಆಂದೋಲನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸುಪ್ರೀಂ ಕೋರ್ಟ್ ಇಂದು ಮನವಿಗಳ ವಿಚಾರಣೆ ನಡೆಸಲಿದೆ.
ಕೃಷಿ ಕಾನೂನುಗಳು ಹಾಗೂ ರೈತರ ಆಂದೋಲನ ಕುರಿತು ಇಂದು ಮನವಿಗಳನ್ನು ಆಲಿಸಲಿರುವ ಸುಪ್ರೀಂ
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸರ್ಕಾರ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು ಕಳೆದ ನವೆಂಬರ್‌ನಿಂದ ದೆಹಲಿಯ ವಿವಿಧ ಗಡಿ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
supreme
ಪ್ರತಿಭಟನಾ ನಿರತ ರೈತ ಸಂಘಗಳೊಂದಿಗಿನ ಸರ್ಕಾರದ ಮಾತುಕತೆಗಳು ವಿಫಲವಾಗುತ್ತಿರುವ ಬೆನ್ನಲ್ಲೇ ಈ ವಿಚಾರಣೆ ನಡೆಯುತ್ತಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ವಿಚಾರಣೆ ನಡೆಸಲಿದೆ. ಕೇಂದ್ರ ಮತ್ತು ರೈತ ಮುಖಂಡರು ತಮ್ಮ ಮುಂದಿನ ಸಭೆಯನ್ನು ಜನವರಿ 15ರಂದು ನಡೆಸಲು ನಿರ್ಧರಿಸಿರುವುದರಿಂದ ಇಂದಿನ ವಿಚಾರಣೆ ಮಹತ್ವದ್ದಾಗಿದೆ.