ಕರ್ನಾಟಕ

karnataka

ಕೈಗಾರಿಕೆಗಳಿಂದ ಹೆಚ್ಚಿದ ವಾಯುಮಾಲಿನ್ಯ, ಜಲಮಾಲಿನ್ಯ: ಆತಂಕ ವ್ಯಕ್ತಪಡಿಸಿದ ಪರಿಸರವಾದಿಗಳು

By

Published : Jun 5, 2020, 1:54 PM IST

ರಾಜಸ್ಥಾನದ ಭಿಲ್ವಾರಾ ಜಿಲ್ಲೆಯಲ್ಲಿರುವ ಸುಮಾರು 450 ಕೈಗಾರಿಕಾ ಘಟಕಗಳಿಂದ ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಆದರೆ, ನಗರದಲ್ಲಿ ಮಾಲಿನ್ಯ ಮಟ್ಟವನ್ನು ತಗ್ಗಿಸಲು ಸರ್ಕಾರ ಯಾವುದೇ ಕ್ರಮಗಳನ್ನ ಕೈಗೊಂಡಿಲ್ಲ.

Polluting industrial areas of Rajasthan pose biggest environmental threat
ಕೈಗಾರಿಕೆಗಳಿಂದ ಹೆಚ್ಚಿದ ವಾಯುಮಾಲಿನ್ಯ

ಜೈಪುರ/ರಾಜಸ್ಥಾನ:450 ಕೈಗಾರಿಕಾ ಘಟಕಗಳನ್ನು ಹೊಂದಿರುವ ರಾಜಸ್ಥಾನದ ಭಿಲ್ವಾರಾದಲ್ಲಿ ವಾಯುಮಾಲಿನ್ಯ ಸಮಸ್ಯೆ ಹೆಚ್ಚಾಗಿದೆ. ಇಲ್ಲಿನ ಜವಳಿ ಉದ್ಯಮವು ಜಲಮಾಲಿನ್ಯಕ್ಕೆ ಪ್ರಮುಖ ಕಾರಣವಾಗಿದೆ ಅಂತ ಪರಿಸರವಾದಿಗಳು ಆರೋಪಿಸಿದ್ದಾರೆ.

ಕೈಗಾರಿಕೆಗಳಿಂದ ಹೆಚ್ಚಿದ ವಾಯುಮಾಲಿನ್ಯ

ವರದಿಗಳ ಪ್ರಕಾರ, ಭಿಲ್ವಾರದ ಕೈಗಾರಿಕಾ ಘಟಕಗಳು ಸರ್ಕಾರವು ನಿಗದಿಪಡಿಸಿದ ಸುರಕ್ಷತಾ ಮಾನದಂಡಗಳೊಂದಿಗೆ ಕಾರ್ಯನಿರ್ವಹಿಸುತ್ತಿಲ್ಲ ಎಂದು ಪರಿಸರವಾದಿಗಳು ಪ್ರತಿಪಾದಿಸುತ್ತಾರೆ.

ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾನದಂಡಗಳನ್ನು ನಿಗದಿಪಡಿಸಿದೆ. ಆದರೆ, ಸರ್ಕಾರ ಎಷ್ಟೇ ಎಚ್ಚರಿಕೆ ನೀಡಿದರೂ ಅನೇಕ ಕೈಗಾರಿಕಾ ಘಟಕಗಳು ಇದನ್ನು ಅನುಸರಿಸುತ್ತಿಲ್ಲ. ಎಲ್ಲ ಕೈಗಾರಿಕೋದ್ಯಮಿಗಳು ಮುಂದೆ ಬಂದು ಪರಿಸರದ ಬಗ್ಗೆ ಕಾಳಜಿ ವಹಿಸಿದರೆ ಮಾತ್ರ ವಾಯುಮಾಲಿನ್ಯ ನಿಯಂತ್ರಣ ಸಾಧ್ಯ ಎಂದು ಭಿಲ್ವಾರಾ ಜವಳಿ ವ್ಯಾಪಾರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೇಮ್ ಸ್ವರೂಪ್ ಗರ್ಗ್ ಹೇಳುತ್ತಾರೆ.

ಈ ಕಾರ್ಖಾನೆಗಳು ಬಿಡುಗಡೆ ಮಾಡುವ ವಿಷಕಾರಿ ಅನಿಲಗಳಾದ ಸಲ್ಫರ್ ಡೈ -ಆಕ್ಸೈಡ್ ಮತ್ತು ನೈಟ್ರಿಕ್ ಆಕ್ಸೈಡ್ ಗಾಳಿಯಲ್ಲಿ ಬೆರೆತುಹೋಗುತ್ತಿವೆ. ಇದರಿಂದಾಗಿ ಈ ಕೈಗಾರಿಕೆಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ವಾಸಿಸುವ ಜನರ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಆದರೂ ಸರ್ಕಾರ ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಇನ್ನು ವಿಶ್ವ ಪರಿಸರ ದಿನದ ಹಿನ್ನೆಲೆ ಜಗತ್ತಿನಾದ್ಯಂತ ಅರಣ್ಯೀಕರಣ ಹೆಚ್ಚಾದರೆ ಮಾತ್ರ ಈ ವಾಯುಮಾಲಿನ್ಯದ ಸಮಸ್ಯೆ ಪರಿಹರಿಸಬಹುದು ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details