ಕರ್ನಾಟಕ

karnataka

ಬಜೆಟ್​​ನ ಕವರ್​​​ಪೇಜ್​​ ಮೇಲೆ ಗಾಂಧಿ ಹತ್ಯೆ ಚಿತ್ರ... ಗಮನ ಸೆಳೆದ ಬಜೆಟ್​ ಪುಸ್ತಕ!

By

Published : Feb 7, 2020, 3:26 PM IST

ಬಜೆಟ್​ ಇತಿಹಾಸದಲ್ಲೇ ಕೇರಳ ಸರ್ಕಾರ ವಿಶೇಷ ಕ್ರಮ ಕೈಗೊಂಡಿದ್ದು, ಇದೀಗ ಅವರ ಬಜೆಟ್​ ಮಂಡನೆ ಪುಸ್ತಕ ಎಲ್ಲರ ಕೇಂದ್ರಬಿಂದುವಾಗಿದೆ.

Mahatama Gandhi's Assasination
Mahatama Gandhi's Assasination

ತಿರುವನಂತಪುಂ:ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಇಂದು 2020-21ನೇ ಸಾಲಿನ ಬಜೆಟ್​ ಮಂಡನೆ ಮಾಡಿದ್ದು, ಹಣಕಾಸು ಸಚಿವ ಥಾಮಸ್​ ಐಸಾಕ್​​ ವಾರ್ಷಿಕ ಆಯ್ಯ-ವ್ಯಯ ಮಂಡನೆ ಮಾಡಿದ್ರು. ಈ ವೇಳೆ ಬಜೆಟ್​ ಪುಸ್ತಕ ಎಲ್ಲರ ಗಮನ ಸೆಳೆದಿದೆ.

2020-21ನೇ ಸಾಲಿನ ಬಜೆಟ್​ ಪುಸ್ತಕದ ಕವರ್​ ಪೇಜ್​ ಮೇಲೆ ಗಾಂಧಿ ಹತ್ಯೆಯ ಚಿತ್ರ ಮುದ್ರಿಸಲಾಗಿದ್ದು, ಅದು ಎಲ್ಲರ ಗಮನ ಸೆಳೆದಿದೆ. ಈ ವಿಷಯವಾಗಿ ಮಾತನಾಡಿರುವ ಹಣಕಾಸು ಸಚಿವ ಥಾಮಸ್​, ಖಂಡಿತವಾಗಿ ಇದು ರಾಜಕೀಯ ನಡೆ. ಬಜೆಟ್​ ಪುಸ್ತಕದ ಮೇಲೆ ಪ್ರಕಟಗೊಂಡಿರುವ ಗಾಂಧಿ ಚಿತ್ರ ಮಲಯಾಳಂ ಚಿತ್ರಕಾರ ಬಿಡಿಸಿರುವ ಚಿತ್ರವಾಗಿದೆ.

ಮಹಾತ್ಮ ಗಾಂಧಿ ಹತ್ಯೆ ಮಾಡಿದ್ದು ಯಾರು ಎಂಬುದು ಇಡೀ ದೇಶಕ್ಕೆ ಗೊತ್ತಾಗಬೇಕು. ಹೀಗಾಗಿ ಈ ಚಿತ್ರವನ್ನ ನಾವು ಪ್ರಕಟಗೊಳ್ಳಿಸಿದ್ದೇವೆ ಎಂದು ಸಚಿವರು ಬಜೆಟ್​ ಪುಸ್ತಕದ ಮೇಲೆ ಅಚ್ಚು ಹಾಕಿಸಿರುವ ಚಿತ್ರವನ್ನ ಸಮರ್ಥಿಸಿಕೊಂಡಿದ್ದಾರೆ.

ABOUT THE AUTHOR

...view details