ಕರ್ನಾಟಕ

karnataka

ಮೈತ್ರಿಯಲ್ಲಿ ಮುನಿಸು..? ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ ಸಮ್ಮಿಶ್ರ ನಾಯಕರು

By

Published : Oct 28, 2019, 2:03 PM IST

ಅಧಿಕಾರ ಹಂಚಿಕೆಯಲ್ಲಿ ಮೈತ್ರಿ ನಾಯಕರಲ್ಲಿ ಕೊಂಚ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ನಾಯಕರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ಮೈತ್ರಿಯಲ್ಲಿ ಮುನಿಸು

ಮುಂಬೈ:ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನ ಮೈತ್ರಿಗೆ ಮತದಾರ ಅಧಿಕಾರ ನೀಡಿದ್ದರೂ, ಸದ್ಯ ಈ ಮೈತ್ರಿಯಲ್ಲಿ ಎಲ್ಲವೂ ಸರಿಯಲ್ಲ ಎನ್ನುವಂತಿದೆ ಪಕ್ಷದ ನಾಯಕರ ನಡೆ.

ಅಧಿಕಾರ ಹಂಚಿಕೆಯಲ್ಲಿ ಮೈತ್ರಿ ನಾಯಕರಲ್ಲಿ ಕೊಂಚ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ನಾಯಕರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ದಿವಾಕರ್ ರವೋತೆ ನೇತೃತ್ವದಲ್ಲಿ ಶಿವಸೇನೆ ನಿಯೋಗ ಇಂದು ಬೆಳಗ್ಗೆ ರಾಜ್ಯಾಪಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿಯಾಗಿದ್ದಾರೆ. ಇದಾದ ಕೆಲ ಹೊತ್ತಲ್ಲಿ ಮಹಾರಾಷ್ಟ್ರ ನಿಯೋಜಿತ ಸಿಎಂ ದೇವೇಂದ್ರ ಫಡ್ನವೀಸ್ ರಾಜ್ಯಪಾಲರನ್ನು ಮೀಟ್ ಮಾಡಿದ್ದಾರೆ.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮುಂದಿನ ಮುಖ್ಯಮಂತ್ರಿ ಎಂದೇ ಬಿಂಬಿತವಾಗಿದ್ದರೂ, ಶಿವಸೇನೆಯ ಆದಿತ್ಯ ಠಾಕ್ರೆ ಹೆಸರೂ ಸಹ ಸಿಎಂ ರೇಸ್​ನಲ್ಲಿದೆ. ಹೀಗಾಗಿ ಮೈತ್ರಿಯಲ್ಲಿ ಭಿನ್ನಮತ ಭುಗಿಲೆದ್ದಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಮೈತ್ರಿ ನಾಯಕರ ರಾಜ್ಯಾಪಾಲರ ಭೇಟಿ ಕೇವಲ ದೀಪಾವಳಿ ಶುಭಾಶಯ ವಿನಿಮಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನ 56, ಕಾಂಗ್ರೆಸ್ 44 ಹಾಗೂ ಎನ್​ಸಿಪಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ-ಶಿವಸೇನ ಮತ್ತು ಕಾಂಗ್ರೆಸ್-ಎನ್​ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು.

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಶಿವಸೇನ ಮೈತ್ರಿಗೆ ಮತದಾರ ಅಧಿಕಾರ ನೀಡಿದ್ದರೂ, ಸದ್ಯ ಈ ಮೈತ್ರಿಯಲ್ಲಿ ಎಲ್ಲವೂ ಸರಿಯಲ್ಲ ಎನ್ನುವಂತಿದೆ ಪಕ್ಷದ ನಾಯಕರ ನಡೆ.

ಅಧಿಕಾರ ಹಂಚಿಕೆಯಲ್ಲಿ ಮೈತ್ರಿ ನಾಯಕರಲ್ಲಿ ಕೊಂಚ ಭಿನ್ನಾಭಿಪ್ರಾಯ ತಲೆದೋರಿದೆ ಎನ್ನಲಾಗಿದ್ದು. ಈ ಹಿನ್ನೆಲೆಯಲ್ಲಿ ಎರಡೂ ಪಕ್ಷದ ನಾಯಕರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗಿದ್ದಾರೆ.

ದಿವಾಕರ್ ರವೋತೆ ನೇತೃತ್ವದಲ್ಲಿ ಶಿವಸೇನೆ ನಿಯೋಗ ಇಂದು ಬೆಳಗ್ಗೆ ರಾಜ್ಯಾಪಲ ಭಗತ್ ಸಿಂಗ್ ಕೊಶ್ಯಾರಿಯನ್ನು ಭೇಟಿಯಾಗಿದ್ದಾರೆ. ಇದಾದ ಕೆಲ ಹೊತ್ತಲ್ಲಿ ಮಹಾರಾಷ್ಟ್ರ ನಿಯೋಜಿತ ಸಿಎಂ ದೇವೇಂದ್ರ ಫಡ್ನವೀಸ್ ರಾಜ್ಯಪಾಲರನ್ನು ಮೀಟ್ ಮಾಡಿದ್ದಾರೆ.

ಮೈತ್ರಿ ನಾಯಕರ ರಾಜ್ಯಾಪಾಲರ ಭೇಟಿ ಕೇವಲ ದೀಪಾವಳಿ ಶುಭಾಶಯ ವಿನಿಮಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

288 ಕ್ಷೇತ್ರಗಳ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನ 56, ಕಾಂಗ್ರೆಸ್ 44 ಹಾಗೂ ಎನ್​ಸಿಪಿ 54 ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಬಿಜೆಪಿ-ಶಿವಸೇನ ಮತ್ತು ಕಾಂಗ್ರೆಸ್-ಎನ್​ಸಿಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು.

Conclusion:

ABOUT THE AUTHOR

...view details