ಕರ್ನಾಟಕ

karnataka

ಪೊಲೀಸರಿದ್ರೂ ಡೋಂಟ್​ಕೇರ್​, ದಂಪತಿ ಮೇಲೆ ಭೀಕರ ಹಲ್ಲೆ... ವಿಡಿಯೋ ವೈರಲ್​

By

Published : Oct 3, 2020, 12:50 PM IST

ದಂಪತಿಯನ್ನು ಗುಂಪೊಂದು ಥಳಿಸಿದ ಭೀಕರ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸರ ಉಪಸ್ಥಿತಿಯಲ್ಲೇ, ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿದೆ.

assault
assault

ಶಿವಪುರಿ (ಮಧ್ಯಪ್ರದೇಶ):ಪೊಲೀಸರ ಉಪಸ್ಥಿತಿಯಲ್ಲೇ, ಹಗಲು ಹೊತ್ತಿನಲ್ಲಿ ದಂಪತಿಯನ್ನು ಗುಂಪೊಂದು ಥಳಿಸಿದ ಭೀಕರ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.

ಚರ್ಚ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪೊಲೀಸ್ ಅಧಿಕಾರಿಯ ಸಮ್ಮುಖದಲ್ಲಿಯೇ ಆರೋಪಿಗಳು ದಂಪತಿಯನ್ನು ನಿರ್ದಯವಾಗಿ ಥಳಿಸಿದ್ದಾರೆ. ಪ್ರಾರಂಭದಲ್ಲಿ ಮೂಕ ಪ್ರೇಕ್ಷಕನಂತೆ ನಿಂತಿದ್ದ ಪೊಲೀಸ್, ಕೆಲ ಹೊತ್ತಿನ ಬಳಿಕ ಮಧ್ಯಪ್ರವೇಶಿಸಿದ್ದಾರೆ.

ಸಂತ್ರಸ್ತರ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಜಗದೀಶ್ ರಾಥೋಡ್ ಮತ್ತು ಅವರ ಪುತ್ರರಾದ ಸುನಿಲ್ ರಾಥೋಡ್ ಮತ್ತು ಅಕ್ಷಯ್ ರಾಥೋಡ್ ಎಂಬ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪರಾರಿಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ABOUT THE AUTHOR

...view details