ಕರ್ನಾಟಕ

karnataka

ನಾಳೆಯಿಂದ ಚಳಿಗಾಲ ಅಧಿವೇಶನ ಶುರು... 27 ಹೊಸ ಮಸೂದೆ ಮಂಡಿಸಲು ಕೇಂದ್ರ ಸಜ್ಜು

By

Published : Nov 17, 2019, 7:10 AM IST

ನವೆಂಬರ್ 18ರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸದನ ಸುಗಮವಾಗಿ ನಡೆಯಲು ಎಲ್ಲ ರಾಜಕೀಯ ಪಕ್ಷಗಳು ಸಹಕರಿಸುವಂತೆ ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದ್ದಾರೆ.

Lok Sabha Speaker chairs all-party meeting ahead of Parliament winter session

ನವದೆಹಲಿ: ವೈದ್ಯರಿಗೆ ರಕ್ಷಣೆ, ಬ್ಯಾಂಕ್​ ಠೇವಣಿ ಮೇಲಿನ ವಿಮೆ ಮೊತ್ತ ಹೆಚ್ಚಳ, ದೇಶಾದ್ಯಂತ ನೌಕರರಿಗೆ ಒಂದೇ ವೇತನ ನಿಗದಿಪಡಿಸುವುದೂ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 27 ಪ್ರಮುಖ ಮಸೂದೆಗಳಿಗೆ ಈ ಬಾರಿಯ ಚಳಿಗಾಲದ ಅಧಿವೇಶನದಲ್ಲಿ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಸಾರ್ವಜನಿಕರಿಂದ ವೈದ್ಯರು ಮತ್ತು ಇತರ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಗಣನೀಯವಾಗಿ ಏರಿಕೆ ಕಾಣುತ್ತಿರುವ ಪರಿಣಾಮ ಅವರಿಗೆ ರಕ್ಷಣೆ ನೀಡಲು ಕಠಿಣ ಕಾನೂನು ರೂಪಿಸುವ ಮಸೂದೆ ಮಂಡಿಸಲಾಗುತ್ತದೆ. ಹಲ್ಲೆ ನಡೆಸುವವರಿಗೆ 10 ವರ್ಷ ಜೈಲು ಹಾಗೂ ₹ 10 ಲಕ್ಷ ದಂಡ ವಿಧಿಸುವ ಪ್ರಸ್ತಾವನೆಯೂ ನೂತನ ಮಸೂದೆಯಲ್ಲಿದೆ.

ಆರ್ಥಿಕ ಹಿಂಜರಿತ ಸುಧಾರಿಸುವ ಸಲುವಾಗಿ ನೂತನ ಮತ್ತು ದೇಶಿಯ ಕಾರ್ಪೊರೇಟ್​ ಕಂಪನಿಗಳ ತೆರಿಗೆ ಕಡಿತಗೊಳಿಸಲು ಇತ್ತೀಚೆಗೆ ಹೊರಡಿಸಿದ್ದ ಆದೇಶವನ್ನು ಅನುಮೋದನೆಗೆ ಮಂಡಿಸಬೇಕಾಗಿದೆ. ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಒಂದು ರಾಷ್ಟ್ರ, ಒಂದು ವೇತನ ಯೋಜನೆ ಜಾರಿಗೆ ತರಲು ಮುಂದಾಗಿದೆ. ಅಷ್ಟೇ ಅಲ್ಲದೆ, ಇ- ಸಿಗರೇಟ್​ ಉತ್ತನ್ನಗಳ ಮಾರಾಟ ನಿಷೇಧ ಸೇರಿದಂತೆ ಪ್ರಮುಖ ಮಸೂದೆಗಳನ್ನು ಮಂಡಿಸುವ ಸಾಧ್ಯತೆ ಇದೆ.

ಜಿಡಿಪಿ ಇಳಿಕೆ, ಕೈಗಾರಿಕಾ ಕ್ಷೇತ್ರದಲ್ಲಿನ ಕುಸಿದ ಉತ್ಪಾದನೆ, ಆರ್ಥಿಕ ಹಿಂಜರಿತ, ಉದ್ಯೋಗ ಕಡಿತ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯಗಳನ್ನೇ ಅಸ್ತ್ರವಾಗಿಸಿಕೊಂಡು ವಿರೋಧ ಪಕ್ಷಗಳು ಮೋದಿ ಸರ್ಕಾರದ ವಿರುದ್ಧ ತಿರುಗಿ ಬೀಳುವ ಸಾಧ್ಯತೆ ಇದೆ.

ಸುಗಮ ಕಲಾಪಕ್ಕೆ ಸ್ಪೀಕರ್ ಮನವಿ:

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸದನ ಸುಗಮವಾಗಿ ನಡೆಯಲು ಎಲ್ಲ ರಾಜಕೀಯ ಪಕ್ಷಗಳು ಸಹಕರಿಸುವಂತೆ ಸ್ಪೀಕರ್ ಓಂ ಬಿರ್ಲಾ ಮನವಿ ಮಾಡಿದ್ದಾರೆ.

ಸರ್ವಪಕ್ಷ ಸಭೆ ನಡೆಸಿ ಮಾತನಾಡಿದ ಅವರು, ರಾಜಕೀಯ ಸಲಹೆಗಾರರಿಗೆ ಮೊದಲು ವ್ಯವಹಾರ ಸಲಹಾ ಸಮಿತಿಯಲ್ಲಿ ಚರ್ಚಿಸಲು ಸಲಹೆ ನೀಡಿದರು. ಈ ಬಾರಿ ಗರಿಷ್ಠ ಸಂಖ್ಯೆಯ ಸಮಸ್ಯೆಗಳನ್ನು ಚರ್ಚೆಗೆ ತೆಗೆದುಕೊಳ್ಳಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ನವೆಂಬರ್ 18ರಿಂದ ಡಿಸೆಂಬರ್ 13ರವರೆಗೂ ಕಲಾಪ ನಡೆಯಲಿದ್ದು, ಕಾಂಗ್ರೆಸ್ ಪಕ್ಷದ ಅಧಿರ್ ರಂಜನ್, ಡಿಎಂಕೆಯ ಟಿ.ಆರ್.ಬಾಲು, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ, ಬಿಎಸ್ಪಿಯ ಡ್ಯಾನಿಷ್ ಆಲಿ, ಎಲ್​​ಜೆಪಿಯ ಚಿರಾಗ್ ಪಾಸ್ವನ್, ಶಿವಸೇನಾ ಮುಖಂಡ ವಿನಾಯಕ್ ರಾವತ್, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತಿತರರು ಸರ್ವ ಪಕ್ಷ ಸಭೆಯಲ್ಲಿ ಪಾಲ್ಗೊಂಡಿದ್ದರು.

Intro:Body:Conclusion:

ABOUT THE AUTHOR

...view details