ಕರ್ನಾಟಕ

karnataka

ಮಗುವಿನ ‘ಬೆಳವಣಿಗೆ’ಗೆ ಯಾವ್ಯಾವ ರೀತಿಯ ಆಹಾರ ನೀಡ್ಬೇಕು.. ವೈದ್ಯರ ಟಿಪ್ಸ್ ಇಲ್ಲಿವೆ‌..

By

Published : Feb 3, 2021, 5:14 PM IST

ಸಾಧ್ಯವಾದಷ್ಟು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿದ್ರೆ ಒಳಿತು. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ನೀಡಿ. ಊಟದಲ್ಲಿ ರಾಗಿ, ಅರಿಶಿಣ, ತರಕಾರಿ, ಮೊಳಕೆ ಕಾಳು, ಬೇಳೆಕಾಳುಗಳನ್ನು ಬಳಸಿ. ಹಣ್ಣುಗಳನ್ನು ನೀಡಿ. ಮಗು ಆಟವಾಡುವುದಕ್ಕೆ ನಿರ್ಬಂಧ ಹೇರಬೇಡಿ. ಎಲ್ಲರೊಡನೆ ಬೆರೆಯಲು ಬಿಡಿ..

Children
Children

ಪ್ರತಿಯೊಬ್ಬ ಪೋಷಕರಿಗೂ ಎಲ್ಲಾ ವಿಚಾರಗಳಲ್ಲೂ ನಮ್ಮ ಮಕ್ಕಳು ಮುಂದಿರಬೇಕೆಂಬ ಆಸೆ ಇದ್ದೇ ಇರುತ್ತದೆ. ಮಗು ಹುಟ್ಟಿದಾಗಿನಿಂದ ನಡೆಯುವಾಗಲೂ, ಮಾತಾಡುವಾಗಲೂ, ಆಟ, ಪಾಠ.. ಹೀಗೆ ಪ್ರತಿಯೊಂದರಲ್ಲೂ ನಮ್ಮ ಮಗು ಮೊದಲಿರಬೇಕೆಂದು ಬಯಸುತ್ತಾರೆ. ಅವುಗಳಿಗಾಗಿ ವೈದ್ಯರನ್ನೂ ಸಂಪರ್ಕಿಸುತ್ತಾರೆ.

ಈ ಕುರಿತು ಈಟಿವಿ ಭಾರತದ ಸುಖೀಭವ ತಂಡವು ಮಹಾರಾಷ್ಟ್ರದ ನಾಸಿಕ್​​ನಲ್ಲಿರುವ ಮಕ್ಕಳ ಮಾರ್ಗದರ್ಶನ ಮತ್ತು ಹಾಲುಣಿಸುವ ನಿರ್ವಹಣಾ ಚಿಕಿತ್ಸಾಲಯದಲ್ಲಿರುವ ಮಕ್ಕಳ ತಜ್ಞೆ ಡಾ. ಶಾಮಾ ಜಗದೀಶ್ ಕುಲಕರ್ಣಿ ಜತೆ ಮಾತುಕತೆ ನಡೆಸಿದೆ. ಪೋಷಕರು ಮಕ್ಕಳ ಬುದ್ಧಿ ಬೆಳವಣಿಗೆಗಾಗಿ ಔಷಧಿ ಕೊಡಿಸಲು ಎಷ್ಟು ಹಣ ಬೇಕಾದ್ರೂ ಖರ್ಚು ಮಾಡಲು ಸಿದ್ಧರಿರುತ್ತಾರೆ.

ಆದರೆ, ಅವರಿಗೆ ಪೌಷ್ಟಿಕ ಆಹಾರ ಸಿಗಬೇಕು. ಮಕ್ಕಳು ಜನಿಸಿದಾಗಿನಿಂದ ಸಾವಿರ ದಿನಗಳವರೆಗೆ ಮೆದುಳಿನ ವೈರಿಂಗ್ ನಡೆಯುತ್ತಿರುತ್ತದೆ. ಅಂದರೆ ನರಕೋಶಗಳು ಅಭಿವೃದ್ಧಿಗೊಳ್ಳುತ್ತವೆ, ಮೆದುಳಿನ ಬೆಳವಣಿಗೆಯಾಗುತ್ತಿರುತ್ತದೆ. ತಾಯಿ ಗರ್ಭಾವಸ್ಥೆಯಲ್ಲಿರಬೇಕಾದ್ರೂ ಆಕೆಗೆ ಪೋಷಣೆ ಬಹುಮುಖ್ಯ.

ಮಗು ಜನಿಸಿದ ಮೊದಲ ದಿನದಿಂದ 6 ತಿಂಗಳವರೆಗೆ ಮಕ್ಕಳಿಗೆ ತಾಯಿಯ ಎದೆಯಾಲುಣಿಸಬೇಕು. ಆವರೆಗೂ ಮಗುವಿಗೆ ಬೇರ್ಯಾವುದೇ ಆಹಾರ ನೀಡುವಂತಿಲ್ಲ. ಆರು ತಿಂಗಳ ನಂತರ ಮನೆಯಲ್ಲಿಯೇ ಮೃದುವಾಗಿ ಬೇಯಿಸಿದ ಆಹಾರ ನೀಡಬೇಕು. ತಾಯಿಯ ಎದೆ ಹಾಲುಣಿಸುವುದರಿಂದ ಮಕ್ಕಳಲ್ಲಿ ಐಕ್ಯೂ ಪ್ರಮಾಣ ಹೆಚ್ಚಾಗುತ್ತದೆ.

ಆದ್ದರಿಂದ ಸಾವಿರ ದಿನಗಳವರೆಗೆ ನಿಮ್ಮ ಮಕ್ಕಳ ಬಗ್ಗೆ ಹೆಚ್ಚು ಗಮನ ಹರಿಸಿ. ಈ ಸಮಯದಲ್ಲಿ ಮಗು ಒಂದು ಮಾಂಸದ ಮುದ್ದೆ. ಅದಕ್ಕೆ ನೀವು ಪ್ರೀತಿಸುವುದನ್ನು ಕಲಿಸಿದರೆ ಎಲ್ಲರನ್ನೂ ಪ್ರೀತಿಸುತ್ತದೆ. ದ್ವೇಷಿಸೋದನ್ನ ಕಲಿಸಿದ್ರೆ ದ್ವೇಷಿಸುತ್ತದೆ. ಆದ್ದರಿಂದ ಈ ವಯಸ್ಸಿನಲ್ಲಿ ನೀವು ಮಕ್ಕಳಿಗೆ ಏನನ್ನು ಕಲಿಸುತ್ತೀರಿ ಎಂಬುದು ಬಹಳ ಮುಖ್ಯವಾಗಿರುತ್ತದೆ.

ಸಾಧ್ಯವಾದಷ್ಟು ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಿದ್ರೆ ಒಳಿತು. ಸಾಧ್ಯವಾದಷ್ಟು ಮನೆಯಲ್ಲಿ ತಯಾರಿಸಿದ ಆಹಾರವನ್ನೇ ನೀಡಿ. ಊಟದಲ್ಲಿ ರಾಗಿ, ಅರಿಶಿಣ, ತರಕಾರಿ, ಮೊಳಕೆ ಕಾಳು, ಬೇಳೆಕಾಳುಗಳನ್ನು ಬಳಸಿ. ಹಣ್ಣುಗಳನ್ನು ನೀಡಿ. ಮಗು ಆಟವಾಡುವುದಕ್ಕೆ ನಿರ್ಬಂಧ ಹೇರಬೇಡಿ. ಎಲ್ಲರೊಡನೆ ಬೆರೆಯಲು ಬಿಡಿ.

ಯಾವ ರೀತಿಯ ಆಹಾರ ನೀಡಿದರೆ ಉತ್ತಮ!

DHA- ಬಾದಾಮಿ, ಮೀನುಗಳನ್ನು ಹೆಚ್ಚಾಗಿ ನೀಡಿ

ಕಬ್ಬಿಣಾಂಶಕ್ಕಾಗಿ ಬೆಲ್ಲ, ದ್ರಾಕ್ಷಿ, ಗೋಡಂಬಿ ನೀಡಿ

ತರಕಾರಿ, ಸೊಪ್ಪು, ಮೊಳಕೆ ಕಾಳುಗಳಿಂದ ತಯಾರಿಸಿದ ಆಹಾರ ಕೊಡಿ

ಸಂಸ್ಕರಿಸಿದ ಆಹಾರವನ್ನು ಯಾವುದೇ ಕಾರಣಕ್ಕೂ ಕೊಡಬೇಡಿ

ಸಿರಿಧಾನ್ಯ, ಪಾಲಿಶ್ ಮಾಡದ ಬೇಳೆಕಾಳುಗಳನ್ನು ಕೊಡಿ ಎಂದು ಪೋಷಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ABOUT THE AUTHOR

...view details