ಕರ್ನಾಟಕ

karnataka

ಪ್ರತ್ಯೇಕ ಪ್ರಕರಣ, ತಂದೆ-ಮಗ ಒಂದೇ ದಿನ ಸಾವು: ಆಂಧ್ರದಲ್ಲಿ ಕರುಣಾಜನಕ ಘಟನೆ

By

Published : Jan 3, 2021, 3:52 PM IST

Updated : Jan 3, 2021, 4:06 PM IST

ಸಹೋದರನಿಗೆ ಅಪಘಾತವಾಗಿದೆ ಎಂದು ಸುದ್ದಿ ತಿಳಿಸಲು ಹೋದ ಅಣ್ಣ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ಓಡೋಡಿ ಬಂದ ತಂದೆಯೂ ಮರಣದ ಬಾಗಿಲು ತಟ್ಟಿದ್ದಾರೆ. ಈ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

ಆಂಧ್ರಪ್ರದೇಶದಲ್ಲಿ ನಡೆದ ಕರುಣಾಜನಕ ಘಟನೆ
ಆಂಧ್ರಪ್ರದೇಶದಲ್ಲಿ ನಡೆದ ಕರುಣಾಜನಕ ಘಟನೆ

ಆಂಧ್ರಪ್ರದೇಶ:ವಿಶಾಖ ಜಿಲ್ಲೆಯಲ್ಲಿ ಕರುಣಾಜನಕ ಘಟನೆಯೊಂದು ನಡೆದಿದ್ದು, ತಂದೆ- ಮಗ ಇಬ್ಬರೂ ಪ್ರತ್ಯೇಕ ಘಟನೆಯಲ್ಲಿ ಅಸುನೀಗಿದ್ದಾರೆ.

ಘಟನೆಯ ವಿವರ:

ಮರ್ರಿ ಬಿಚು ಎಂಬವರಿಗೆ ಇಬ್ಬರು ಗಂಡುಮಕ್ಕಳಿದ್ದಾರೆ. ಅದರಲ್ಲಿ ಕಿರಿಯ ಮಗ ವಿಷ್ಣು ಎಂಬಾತನಿಗೆ ಅಪಘಾತ ಸಂಭವಿಸಿದೆ. ಹೀಗಾಗಿ ವಿಷ್ಣು ಅಣ್ಣ ಮಲ್ಲೇಶ್​ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಆತನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ ನಂತರ ಮಲ್ಲೇಶ್​ ಈ ವಿಚಾರವನ್ನು ತಿಳಿಸಲು ಮನೆಗೆ ಬೈಕ್​ ಮೂಲಕ ತೆರಳಿದ್ದಾನೆ. ಆದರೆ ಈ ವೇಳೆ ಪತ್ರಿಮೆಟ್ಟ ಎಂಬಲ್ಲಿ ಆಟೋರಿಕ್ಷಾ ಡಿಕ್ಕಿ ಹೊಡೆದು ಮಲ್ಲೇಶ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆಂಧ್ರಪ್ರದೇಶದಲ್ಲಿ ನಡೆದ ಕರುಣಾಜನಕ ಘಟನೆ

ಈ ಘಟನೆ ನಡೆದ ವಿಚಾರವನ್ನು ಸ್ಥಳೀಯರು ತಂದೆ ಮರ್ರಿ ಬಿಚುಗೆ ತಿಳಿಸಿದ್ದಾರೆ. ಕೂಡಲೇ ಮಗನನ್ನು ನೋಡಲು ಚಿಂತಪಲ್ಲಿಯಿಂದ ಆಟೋ ಮೂಲಕ ಬಿಚು ಹೊರಟಿದ್ದಾರೆ. ಆದರೆ ದುರಾದೃಷ್ಟ ಎಂಬಂತೆ ಅವರಿದ್ದ ಆಟೋ ಬಂಧವೀಡಿಯ ಜಿ.ಮದುಗುಲ ಮಂಡಲ ಬಳಿ ಉರುಳಿಬಿದ್ದಿದೆ. ತೀವ್ರವಾಗಿ ಗಾಯಗೊಂಡ ಬಿಚು ಅವರನ್ನು ವಿಶಾಖಪಟ್ಟಣದ ಕೆಜಿ ಆಸ್ಪತ್ರೆಗೆ ಕರೆತರಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರೂ ಸಾವನ್ನಪ್ಪಿದ್ದಾರೆ.

ಸಹೋದರನಿಗೆ ಅಪಘಾತವಾಗಿದೆ ಎಂದು ಸುದ್ದಿ ತಿಳಿಸಲು ಹೋದ ಅಣ್ಣ ಸಾವನ್ನಪ್ಪಿದ್ದಾನೆ. ಇನ್ನು ಮಗನ ಸಾವಿನ ಸುದ್ದಿ ಕೇಳಿ ಓಡೋಡಿ ಬಂದ ತಂದೆಯೂ ಮರಣದ ಬಾಗಿಲು ತಟ್ಟಿದ್ದಾರೆ. ಘಟನೆಯಿಂದ ಆಧಾರಸ್ಥಂಬದಂತಿದ್ದ ಇಬ್ಬರನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದೆ, ಆಕ್ರಂದನ ಮುಗಿಲುಮುಟ್ಟಿದೆ.

ಇದೀಗ ಪಾರ್ಥಿವ ಶರೀರದ ಅಂತಿಮ ಸಂಸ್ಕಾರ ಮಾಡಲು ಹಣವಿಲ್ಲ ಎಂದು ಸ್ಥಳೀಯರು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳೂ ಧನಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.

Last Updated : Jan 3, 2021, 4:06 PM IST

ABOUT THE AUTHOR

...view details