ಕರ್ನಾಟಕ

karnataka

ಅಯೋಧ್ಯಾ ತೀರ್ಪು: ಮರುಪರಿಶೀಲನಾ ಅರ್ಜಿ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳಿತು: ರವಿಶಂಕರ್​ ಗುರೂಜಿ

By

Published : Dec 2, 2019, 8:42 AM IST

ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿ  ಅಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ವಿವಾದಕ್ಕೆ ಈಗಾಗಲೇ ತೆರೆ ಎಳೆದಿದೆ. ಮುಸ್ಲಿಮರಿಗೆ ತೀರ್ಪು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಎಲ್ಲ ಹಕ್ಕಿದೆ. ಆದರೆ, ಈ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳಿತು ಎಂದು ರವಿಶಂಕರ್​ ಗುರೂಜಿ ಸಲಹೆ ನೀಡಿದರು.

Ayodye controversy: I would request all regarding review petition: Ravishankar guruji
ಅಯೋಧ್ಯೆ ವಿವಾದ; ಮರುಪರಿಶೀಲನಾ ಅರ್ಜಿ ಕುರಿತು ಮತ್ತೊಮ್ಮೆ ಯೋಚಿಸುವುದು ಒಳಿತು: ರವಿಶಂಕರ್​ ಗುರೂಜಿ

ನವದೆಹಲಿ:ಮುಸ್ಲಿಮರಿಗೆ ರಾಮ ಮಂದಿರ ತೀರ್ಪು ಪ್ರಶ್ನಿಸಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಎಲ್ಲಾ ಹಕ್ಕಿದೆ. ಆದರೆ, ಈ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳಿತು ಎಂದು ರವಿಶಂಕರ್​ ಗುರೂಜಿ ಅಭಿಪ್ರಾಯ ಪಟ್ಟಿದ್ದಾರೆ.

ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿ ಅಯೋಧ್ಯೆ ರಾಮಮಂದಿರ, ಬಾಬ್ರಿ ಮಸೀದಿ ವಿವಾದಕ್ಕೆ ಈಗಾಗಲೇ ತೆರೆ ಎಳೆದಿದೆ. ಈ ಬಗ್ಗೆ ಪ್ರಶ್ನೆ ಮಾಡಿ ಮರು ಪರಿಶೀಲನಾ ಅರ್ಜಿ ಸಲ್ಲಿಸುವ ಎಲ್ಲಾ ಹಕ್ಕು ಮುಸ್ಲಿಮರಿಗೆ ಇದೆ. ಆದರೆ, ಈ ಐತಿಹಾಸಿಕ ತೀರ್ಪಿಗೆ ಎರಡೂ ಅರ್ಜಿದಾರರು ಪರಸ್ಪರ ಒಪ್ಪಿಗೆ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳ ಸತತ ವಿಚಾರಣೆ ಬಳಿಕ ಕೋರ್ಟ್​ ಅಂತಿಮ ನಿರ್ಧಾರಕ್ಕೆ ಬಂದು ತೀರ್ಪು ನೀಡಿದೆ. ಮೂಲ ಅರ್ಜಿದಾರರು ಪುನರ್​ ಪರಿಶೀಲನಾ ಅರ್ಜಿ ಸಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದರ ಕುರಿತು ಮತ್ತೊಮ್ಮೆ ಯೋಚಿಸಿ ಎಂದು ಅರ್ಜಿದಾರರಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದು ರವಿಶಂಕರ್​ ಗುರೂಜಿ ಹೇಳಿದರು.

ravishankar Guruji


Conclusion:

ABOUT THE AUTHOR

...view details