ಕರ್ನಾಟಕ

karnataka

ಸಾರ್ಕ್​ ರಾಷ್ಟ್ರಗಳ ಭಿನ್ನಾಭಿಪ್ರಾಯ ನಿವಾರಣೆಗೆ ಕೊರೊನಾ ಸೋಂಕು ಅಸ್ತ್ರ!?

By

Published : Mar 13, 2020, 9:22 PM IST

Updated : Mar 13, 2020, 9:30 PM IST

ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಜಗತ್ತಿನಾದ್ಯಂತ ಭೀತಿಯನ್ನುಂಟು ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಸಾರ್ಕ್ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯ ನಿವಾರಿಸಲು ದೊರೆತ ಅವಕಾಶವಾಗಿ ಬಳಸಲು ಪ್ರಯತ್ನಿಸಿದ್ದಾರೆ.

Amid summit meet freeze,ಸಾರ್ಕ್​ ರಾಷ್ಟ್ರಗಳ ಭಿನ್ನಾಭಿಪ್ರಾಯ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ :ಕೊರೊನಾ ಸೋಂಕಿನಿಂದಾಗಿ ಕಳೆದ ಕೆಲ ವರ್ಷಗಳಿಂದ ನಿಷ್ಕ್ರಿಯಗೊಂಡಿದ್ದ ಸಾರ್ಕ್​ ರಾಷ್ಟ್ರಗಳ ಒಕ್ಕೂಟಕ್ಕೆ ತಮ್ಮ ನಡುವಿನ ಬಿಕ್ಕಟ್ಟು ಶಮನಗೊಳಿಸಲು ಅವಕಾಶ ನೀಡಲಿದೆಯಾ ಎಂಬ ಪ್ರಶ್ನೆ ಇದೀಗ ಎದುರಾಗಿದೆ. 2016ರಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಸಾರ್ಕ್​ ಶೃಂಗಸಭೆ ನಿಗದಿಯಾಗಿತ್ತು. ಆದರೆ, ಜಮ್ಮು-ಕಾಶ್ಮೀರದ ಉರಿ ಮೇಲಿನ ಭಯೋತ್ಪಾದನಾ ದಾಳಿಯಿಂದಾಗಿ ಭಾರತ ಶೃಂಗಸಭೆ ಬಹಿಷ್ಕರಿಸಿತ್ತು. ಇದೀಗ ಕೊರೊನಾ ಸೋಂಕನ್ನು ಎದುರಿಸಲು ಜಂಟಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಪ್ರಧಾನಿ ಮೋದಿ ಸಾರ್ಕ್​ ರಾಷ್ಟ್ರಗಳನ್ನು ಒಂದುಗೂಡಿಸುವತ್ತ ಹೆಜ್ಜೆ ಇರಿಸಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ (ಸಾರ್ಕ್) ರಾಷ್ಟ್ರಗಳ ನಾಯಕತ್ವವು ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಲವಾದ ಕಾರ್ಯತಂತ್ರವನ್ನು ರೂಪಿಸುತ್ತದೆ ಎಂದು ನಾನು ಪ್ರಸ್ತಾಪಿಸಲು ಬಯಸುತ್ತೇನೆ. ವಿಡಿಯೋ ಕಾನ್ಫ್‌ರೆನ್ಸ್​ ಮೂಲಕ ನಮ್ಮ ನಾಗರಿಕರ ಆರೋಗ್ಯ ಕಾಪಾಡುವ ಮಾರ್ಗಗಳನ್ನು ನಾವು ಚರ್ಚಿಸಬಹುದು' ಎಂದಿದ್ದರು. ಸದ್ಯ ವಿದೇಶಾಂಗ ಸಚಿವಾಲಯದ ಪ್ರಕಾರ ಇನ್ನೂ ಯಾವುದೇ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿಲ್ಲ. ಪ್ರಧಾನಮಂತ್ರಿಯವರ ಟ್ವೀಟ್‌ನಲ್ಲಿ ಪ್ರಸ್ತಾಪಿಸಿದಂತೆ ವಿಡಿಯೋ ಕಾನ್ಫ್‌ರೆಸ್ಸ್​ ವಿಚಾರವನ್ನು ಪ್ರಾದೇಶಿಕ ಮುಖಂಡರು ಸ್ವಾಗತಿಸಿದ್ದಾರೆ. ಈ ಮಹತ್ವದ ಪ್ರಯತ್ನಕ್ಕೆ ಮುಂದಾಳತ್ವ ತೆಗೆದುಕೊಂಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು.

ಕೋವಿಡ್-19 ನಿಯಂತ್ರಣಕ್ಕೆ ಸಾಮೂಹಿಕ ಪ್ರಯತ್ನದ ಅಗತ್ಯವಿದೆ. ಮಾಲ್ಡೀವ್ಸ್ ಈ ಪ್ರಸ್ತಾಪವನ್ನು ಸ್ವಾಗತಿಸುತ್ತದೆ ಮತ್ತು ಅಂತಹ ಪ್ರಾದೇಶಿಕ ಪ್ರಯತ್ನವನ್ನು ಸಂಪೂರ್ಣ ಬೆಂಬಲಿಸುತ್ತದೆ' ಎಂದು ಮಾಲ್ಡೀವ್ಸ್​ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಟ್ವೀಟ್ ಮಾಡಿದ್ದಾರೆ. ಶ್ರೀಲಂಕಾದ ಅಧ್ಯಕ್ಷ ಗೋಟಬಯಾ ರಾಜಪಕ್ಸೆ ಅವರು ತಮ್ಮ ದೇಶವು ಚರ್ಚೆ ನಡೆಸಲು ಸಿದ್ಧವಾಗಿದೆ. ಮಾರಕ ಸೋಂಕನ್ನು ಎದುರಿಸಲು ತಮ್ಮ ಬಳಿ ಇರುವ ಮಾಹಿತಿ ಹಂಚಿಕೊಳ್ಳಲು ಸಿದ್ಧವಾಗಿದೆ. ಮುಂದಾಳತ್ವ ತೆಗೆದುಕೊಂಡಿದ್ದಕ್ಕಾಗಿ ಮೋದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಶ್ರೀಲಂಕಾದ ರಾಜತಾಂತ್ರಿಕರೊಬ್ಬರು ಈ ವರ್ಷ ಸಾರ್ಕ್ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು.

ಆದರೆ, ಶ್ರೀಲಂಕಾದೊಂದಿಗಿನ ಇತ್ತೀಚಿನ ಅಧಿಕೃತ ಮಾತುಕತೆಗಳಲ್ಲಿ ಸಾರ್ಕ್​ನ ಪುನರುಜ್ಜೀವನದ ಬಗ್ಗೆ ಭಾರತ ಯಾವುದೇ ಉತ್ಸಾಹ ತೋರಿಸಲಿಲ್ಲ. 2014ರಲ್ಲಿ ಕಠ್ಮಂಡುವಿನಲ್ಲಿ ನಡೆದ ಶೃಂಗಸಭೆಯಲ್ಲಿ ಉಪ-ಪ್ರಾದೇಶಿಕತೆ ಮುಂದುವರಿಯುವ ಅಗತ್ಯವನ್ನು ಒತ್ತಿ ಹೇಳಿದ್ದ ಪಿಎಂ ಮೋದಿ ಬಿಮ್​​ಸ್ಟೆಕ್ (BIMSTEC) ಒಂದು ಪರ್ಯಾಯ ಪ್ರಾದೇಶಿಕ ವೇದಿಕೆಯಾಗಲಿದೆ ಎಂದಿದ್ದರು. ಬಂಗಾಳ ಕೊಲ್ಲಿಯ ಕಡಲತೀರದ ಆರ್ಥಿಕತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ 1997ರಲ್ಲಿ ರಚಿಸಲಾದ ಒಕ್ಕೂಟವೇ ಬಿಮ್​​ಸ್ಟೆಕ್​​. ಬಿಮ್​ಸ್ಟೆಕ್​ ಎನ್ನುವುದು ಏಷ್ಯಾದ ಏಳು ದೇಶಗಳ ಮೊದಲ ಆಂಗ್ಲಪದ. ಬಾಂಗ್ಲಾದೇಶ, ಭಾರತ, ಶ್ರೀಲಂಕಾ, ಥಾಯ್ಲೆಂಡ್, ಮ್ಯಾನ್ಮಾರ್, ನೇಪಾಳ ಹಾಗೂ ಭೂತಾನ್​​​ ಈ ಒಕ್ಕೂಟದ ಸದಸ್ಯ ರಾಷ್ಟ್ರಗಳು.

ಮೋದಿಯವರ ಪ್ರಸ್ತಾಪಕ್ಕೆ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನ ಇನ್ನೂ ಕೂಡ ಪ್ರತಿಕ್ರಿಯೆ ನೀಡಿಲ್ಲ. ಇತ್ತ ನೇಪಾಳ ಮತ್ತು ಭೂತಾನ್ ರಾಷ್ಟ್ರಗಳು ಮೋದಿ ಅವರ ಪ್ರಸ್ತಾಪವನ್ನು ಸ್ವಾಗತಿಸಿವೆ. 'ಪ್ರಧಾನಿ ಮೋದಿ ಮಂಡಿಸಿದ ವಿಚಾರವನ್ನು ನಾನು ಸ್ವಾಗತಿಸುತ್ತೇನೆ. ಸಾರ್ಕ್ ರಾಷ್ಟ್ರಗಳ ನಾಯಕತ್ವದಲ್ಲಿ ಕೊರೊನಾ ವಿರುದ್ದ ಹೋರಾಡಲು ಬಲವಾದ ಕಾರ್ಯತಂತ್ರವನ್ನು ರೂಪಿಸಿಲು ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟವಾಗಿ ಕೆಲಸ ಮಾಡಲು ಸಿದ್ಧವಾಗಿದೆ ಎಂದು ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ಟ್ವೀಟ್​ ಮಾಡಿದ್ದಾರೆ.

'ಇದನ್ನೇ ನಾವು ನಾಯಕತ್ವ ಎಂದು ಕರೆಯುತ್ತೇವೆ. ಈ ಪ್ರದೇಶದ ಸದಸ್ಯರಾದ ನಾವು ಇಂತಹ ಕಾಲದಲ್ಲಿ ಒಗ್ಗೂಡಬೇಕು. ಸಣ್ಣ ಆರ್ಥಿಕತೆಗೆ ಹೆಚ್ಚು ಹೊಡೆತ ಬಿದ್ದಿದೆ, ಆದ್ದರಿಂದ ನಾವು ಒಂದಾಗಬೇಕು. ನಿಮ್ಮ ನಾಯಕತ್ವದಲ್ಲಿ ನಿಸ್ಸಂದೇಹವಾಗಿ ತಕ್ಷಣದ ಮತ್ತು ಪರಿಣಾಮಕಾರಿ ಫಲಿತಾಂಶವನ್ನು ಕಾದು ನೋಡುತ್ತೇವೆ. ವಿಡಿಯೋ ಕಾನ್ಫ್‌ರೆನ್ಸ್​ಗಾಗಿ ಎದುರು ನೋಡುತ್ತಿದ್ದೇನೆ' ಎಂದು ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್(Lotay Tshering) ಟ್ವೀಟ್ ಮಾಡಿದ್ದಾರೆ.

ಶೃಂಗಸಭೆ ಆಯೋಜಿಸುವ ಹಕ್ಕನ್ನು ಪಾಕಿಸ್ತಾನ ಬಿಟ್ಟುಕೊಡಲು ಸಿದ್ಧವಿದ್ದರೆ ಮಾತ್ರ ಒಮ್ಮತದ ಮೇಲೆ ಕಾರ್ಯನಿರ್ವಹಿಸುವ ಸಾರ್ಕ್​ನ ಮುಂದಿನ ಶೃಂಗಸಭೆ ಸಭೆ ಸ್ಥಳಾಂತರಗೊಳ್ಳುತ್ತದೆ. ಪ್ರಧಾನಿ ಮೋದಿ ಅವರ ಟ್ವೀಟ್​ ಸಾಮೂಹಿಕ ಪ್ರತಿಕ್ರಿಯೆಯ ಅಗತ್ಯವನ್ನು ಒತ್ತಿ ಹೇಳುತ್ತದೆ. 130 ರಾಷ್ಟ್ರಗಳು, ಅಂತಾರಾಷ್ಟ್ರೀಯ ಒಕ್ಕೂಟಗಳು ಸೇರಿದಂತೆ 100 ಮುಖ್ಯಸ್ಥರು ಭಾಗವಹಿಸಿದ್ದ ಜಂಟಿ ಅಧಿವೇಶನದಲ್ಲಿ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು, ಗೃಹ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಭಾಗವಹಿಸಿ ಕೋವಿಡ್ -19 ಎದುರಿಸಲು ಭಾರತ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಿದ್ದಾರೆ.

ಪ್ರಧಾನಿ ಮೋದಿಯವರ ಸಾರ್ಕ್ ಪ್ರಸ್ತಾಪವನ್ನು ಸ್ವಾಗತಿಸಿ ಅಬ್ಸರ್ವರ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಸಮೀರ್ ಸರನ್ ಟ್ವೀಟ್ ಮಾಡಿದ್ದು, ಬಹಳ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಅನುಭವದ ಹಂಚಿಕೆ ಬಹಳ ಉಪಯುಕ್ತವಾಗಿರುತ್ತದೆ ಎಂದಿದ್ದಾರೆ. ಸಾರ್ಕ್‌ನಲ್ಲಿನ ರಾಜಕೀಯದ ಭಿನ್ನಾಭಿಪ್ರಾಯಗಳನ್ನು ಮಾನವೀಯತೆಯಿಂದ ನಿವಾರಿಸಬಹುದೇ ಎಂದು ನೋಡಬೇಕಾಗಿದೆ. ಕೊರೊನಾ ವೈರಸ್‌ ಎದುರಿಸಲು ಒಟ್ಟಾಗಿ ಮಾರ್ಗಗಳನ್ನು ಕಂಡುಕೊಳ್ಳುವ ವಿಧಾನವು ಈಗಾಗಲೇ ಜಾಗತಿಕವಾಗಿ ಕಂಡು ಬರುತ್ತಿದೆ. -ಸ್ಮಿತಾ ಶರ್ಮಾ

Last Updated : Mar 13, 2020, 9:30 PM IST

ABOUT THE AUTHOR

...view details