ಕರ್ನಾಟಕ

karnataka

ರಾಜ್ಯಪಾಲರನ್ನು ಭೇಟಿಯಾದ ಮಣಿಕರ್ಣಿಕಾ; ನ್ಯಾಯ ಒದಗಿಸುವ ಭರವಸೆ ನೀಡಿದ ಕೋಶ್ಯಾರಿ

By

Published : Sep 13, 2020, 5:42 PM IST

ಭಗತ್​ ಸಿಂಗ್​ ಕೋಶ್ಯಾರಿ ಭೇಟಿ ಬಳಿಕ ಈ ಬಗ್ಗೆ ಮಾತನಾಡಿರುವ ಕಂಗನಾ, ನನಗಾದ ಅನ್ಯಾಯದ ಬಗ್ಗೆ ನಾನು ರಾಜ್ಯಪಾಲರಲ್ಲಿ ಹೇಳಿದ್ದೇನೆ. ಅವರು ನನಗೆ ನ್ಯಾಯ ಒದಗಿಸುವ ನಂಬಿಕೆ ಇದೆ. ದೇಶದ ಯುವತಿಯರು ಸೇರಿದಂತೆ ಎಲ್ಲಾ ನಾಗರಿಕರಿಗೆ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ಮರುಸ್ಥಾಪಿಸುವ ಭರವಸೆ ಇದೆ. ರಾಜ್ಯಪಾಲರು ತಮ್ಮ ಸ್ವಂತ ಮಗಳಂತೆ ನನ್ನ ಮಾತುಗಳನ್ನು ಆಲಿಸಿದ್ದಾರೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

Bhagat Singh Koshyari
ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿ

ಮುಂಬೈ:ನಟಿ ಕಂಗನಾ ರಣಾವತ್​ ಹಾಗೂ ಸಹೋದರಿ ರಂಗೋಲಿ, ಇಂದು ನಗರದ ರಾಜಭವನದಲ್ಲಿ ರಾಜ್ಯಪಾಲ ಭಗತ್​ ಸಿಂಗ್​ ಕೋಶ್ಯಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಭೇಟಿ ಬಳಿಕ ಈ ಬಗ್ಗೆ ಮಾತನಾಡಿರುವ ಕಂಗನಾ, ನನಗಾದ ಅನ್ಯಾಯದ ಬಗ್ಗೆ ನಾನು ರಾಜ್ಯಪಾಲರಲ್ಲಿ ಹೇಳಿದ್ದೇನೆ. ಅವರು ನನಗೆ ನ್ಯಾಯ ಒದಗಿಸುವ ನಂಬಿಕೆ ಇದೆ. ದೇಶದ ಯುವತಿಯರು ಸೇರಿದಂತೆ ಎಲ್ಲಾ ನಾಗರಿಕರಿಗೆ ನ್ಯಾಯ ಒದಗಿಸುವ ವ್ಯವಸ್ಥೆಯನ್ನು ಮರುಸ್ಥಾಪಿಸುವ ಭರವಸೆ ಇದೆ. ರಾಜ್ಯಪಾಲರು ತಮ್ಮ ಸ್ವಂತ ಮಗಳಂತೆ ನನ್ನ ಮಾತುಗಳನ್ನು ಆಲಿಸಿದ್ದಾರೆ ಎಂದು ಕಂಗನಾ ಹೇಳಿಕೊಂಡಿದ್ದಾರೆ.

ನಟ ಸುಶಾಂತ್​ ಸಿಂಗ್​ ಸಾವಿನ ವಿಚಾರವಾಗಿ ಕಂಗನಾ, ಬಾಲಿವುಡ್​ನಲ್ಲಿ ಸ್ವಜನಪಕ್ಷಪಾತ ದೊಡ್ಡ ಪ್ರಮಾಣದಲ್ಲಿ ಇದೆ ಎಂದು ಧ್ವನಿ ಎತ್ತಿದ್ದರು. ಆ ಬಳಿಕ ಈ ವಿಚಾರವಾಗಿ ಧೈರ್ಯ ಮತ್ತು ನಿಷ್ಠುರವಾಗಿ ಮಾತನಾಡುತ್ತಾ ಬರುತ್ತಿರುವ ಕಂಗನಾ, ಮುಂಬೈಯನ್ನು ಪಾಕ್​ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಮಹಾರಾಷ್ಟ್ರ ಆಡಳಿತಾರೂಢ ಪಕ್ಷದ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಮುಂಬೈನಲ್ಲಿರುವ ಕಂಗಾನ ಅವರ ಕಚೇರಿಯನ್ನು ಅನಧಿಕೃತ ಎಂದು ಹೇಳಿ ಮಹಾರಾಷ್ಟ್ರ ಸರ್ಕಾರ ಅದನ್ನು ನೆಲಸಮ ಮಾಡಿತ್ತು. ಇನ್ನೊಂದೆಡೆ ಡ್ರಗ್ಸ್​​ ಹಾಗೂ ಮೂವಿ ಮಾಫಿಯಾ ವಿರುದ್ಧ ದನಿ ಎತ್ತಿರುವ ನಟಿ ಕಂಗನಾ ರಣಾವತ್​ಗೆ ಜೀವ ಬೆದರಿಕೆಯಿದ್ದು, ಕೇಂದ್ರ ಸರ್ಕಾರ ‘Y’ ಪ್ಲಸ್​ ಭದ್ರತೆ ನೀಡಿತ್ತು.

ತಮಗೆ ಜೀವ ಬೆದರಿಕೆಯಿದ್ದರೂ, ತಮ್ಮ ಹುಟ್ಟೂರಾದ ಹಿಮಾಚಲ ಪ್ರದೇಶದಿಂದ ಕೇಂದ್ರ ಸರ್ಕಾರದ ಭದ್ರತೆಯೊಂದಿಗೆ ಕಂಗನಾ ಮುಂಬೈಗೆ ಬಂದಿದ್ದರು. ತಾವು ಎದುರಿಸುತ್ತಿರುವ ಬೆದರಿಕೆ ಹಾಗೂ ಸವಾಲುಗಳ ಬಗ್ಗೆ ಮಹಾರಾಷ್ಟ್ರ ರಾಜ್ಯಪಾಲರಿಗೆ ತಿಳಿಸುವುದಾಗಿ ಹೇಳಿದ್ದರು. ಅದರಂತೆಯೇ ಭಗತ್​ ಸಿಂಗ್​ ಕೋಶ್ಯಾರಿಯವರನ್ನು ಭೇಟಿಯಾಗಿರುವ ಕಂಗನಾ, ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಕಂಗಾನಾಗೆ ಕೋಶ್ಯಾರಿ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ.

ABOUT THE AUTHOR

...view details